ಬೆಂಗಳೂರು: ಚಿರಂಜೀವಿ ಸರ್ಜಾ ಅಭಿನಯದ ಅಮ್ಮಾ ಐ ಲವ್ ಯೂ ಸಿನಿಮಾ ನಿರ್ದೇಶಕ ಚೈತನ್ಯ ಅವರ ಕೊನೆಯ ಸಿನಿಮಾವಾಗಿದೆ, ಅವರ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ.
ಅಂಡರ್ ವರ್ಲ್ಡ್ ಸಿನಿಮಾಗಾಗಿ ಕಥೆ ಬರೆಯುತ್ತಿದ್ದು, ಏಪ್ರಿಲ್ 2019 ರಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ, ಆ ದಿನಗಳು ಸಿನಿಮಾ ನಂತರ ಮತ್ತೆ ಅದರೆ 19 ವರ್ಷಗಳ ನಂತರ ಅಂಡರ್ ವರ್ಲ್ಡ್ ಸಿನಿಮಾಗಾಗಿ ಕಥೆ ಬರೆಯುತ್ತಿದ್ದಾರೆ. ಎಲ್ಲಾ, ಪ್ರಕಾರ ಅಂದರೇ ಗ್ಯಾಗ್ ಸ್ಟರ್, ಹಾರರ್, ಕಾಮಿಡಿ ಥ್ರಿಲ್ಲರ್ ಸಿನಿಮಾ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಆ ದಿನಗಳು ಸಿಕ್ವೇಲ್ ಆಗಲಿದೆಯಾ ಎಂಬ ಬಗ್ಗೆ ಉತ್ತರಿಸಿದ ಅವರು, ಕಥೆ ಇನ್ನೂ ಆರಂಭಿಕ ಹಂತದಲ್ಲಿದೆ, ನಾನು ಎರಡು ಸಿನಿಮಾಗಳನ್ನು ಒಟ್ಟಿಗೆ ನೋಡಿದ್ದೇನೆ, ಇದರ ಬಗ್ಗೆ ಇನ್ನೂ ನಿರ್ಧರಿಸಬೇಕಿದೆ, ನಾನು ತುಂಬಾ ಆಕಾಂಕ್ಷಿಯಲ್ಲ,ಮೊದಲು ಕಥೆ ಬರೆಯುವುದು ಪೂರ್ಣವಾಗಲಿ, ಆನಂತರ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ,
ತಮ್ಮ ಕಥೆಯಲ್ಲಿ ಹಲವು ನೈಜ ಘಟನೆಗಳನ್ನು ಚೈತನ್ಯ ಸೇರಿಸಿದ್ದಾರೆ, ಜೊತೆಗೆ ಕಾಲ್ಪನಿಕ ಪಾತ್ರಗಳನ್ನು ಸೇರಿಸಿದ್ದಾರೆ, ಸಿನಿಮಾ ತಯಾರಿಸಲು ಹಲವು ನಿರ್ಮಾಪಕರು ಮುಂದೆ ಬರುತ್ತಿದ್ದಾರೆ, ಆದೆರ ಯಾರಿಗೂ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.