ಮೇಘನಾ ರಾಜ್ ಚಿತ್ರ 
ಸಿನಿಮಾ ಸುದ್ದಿ

ಮಹತ್ವಾಕಾಂಕ್ಷೆಯ ನಟಿ ಮೇಘನಾ ರಾಜ್

ಮೇಘನಾರಾಜ್ ಮುಂದಿನ ಚಿತ್ರಗಳಲ್ಲಿ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ವೃತ್ತಿರಂಗದಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ.

ಬೆಂಗಳೂರು: ಮೇಘನಾ ರಾಜ್ ಮುಂದಿನ ಚಿತ್ರಗಳಲ್ಲಿ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ವೃತ್ತಿರಂಗದಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ.

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ಬಾನುಮತಿ  ಪಾತ್ರ ನಿರ್ವಹಿಸುತ್ತಿದ್ದು, ಮುಸ್ಸಂಜೆ ಮಹೇಶ್ ನಿರ್ದೇಶನದ ಥ್ರಿಲ್ಲರ್ ಚಿತ್ರ ಎಂಎಂಸಿಹೆಚ್ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಇವುಗಳೊಂದಿಗೆ  ಇರುವುದೆಲ್ಲಾ ಬಿಟ್ಟು ಚಿತ್ರದ ಬಗ್ಗೆಯೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಕಾಂತಾ ಕನ್ನಹಳ್ಳಿ  ಈ  ಚಿತ್ರ ನಿರ್ದೇಶಿಸುತ್ತಿದ್ದು, ಎಲ್ಲ  ನಟಿಯರ ಕನಸಿನ ಪಾತ್ರವೊಂದರಲ್ಲಿ ಅಭಿನಯಿಸುತ್ತಿರುವುದಾಗಿ ಮೇಘನಾ ರಾಜ್  ಹೇಳಿದ್ದಾರೆ.

ಚಿತ್ರದ ದ್ವಿತೀಯ ಹಂತದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದು, ಕಾರ್ಪೋರೇಟ್ ಪ್ರಪಂಚದಲ್ಲಿ ಆಧುನಿಕ ಮಹಿಳೆಯನ್ನು ಕುರಿತ ಚಿತ್ರ ಇದಾಗಿದೆ. ಇವುಗಳ ಮಧ್ಯೆ  ಪ್ರೀತಿ , ಸಂಬಂಧವನ್ನು ಆಕೆ ಹೇಗೆ ನಿಭಾಯಿಸುತ್ತಾಳೆ ಎಂಬುದು ಈ ಚಿತ್ರದ ತಿರುಳಾಗಿದ್ದು, ಈ ಪಾತ್ರವನ್ನು ತಾನೂ ನಿರ್ವಹಿಸುತ್ತಿದ್ದು, ಪಾತ್ರ ಅಚ್ಚುಕಟ್ಟಾಗಿ ಮೂಡಿಬರಲು  ಸಾಧ್ಯವಾದಷ್ಟು ಎಲ್ಲಾ ಪ್ರಯತ್ನ ಮಾಡುತ್ತಿರುವುದಾಗಿ ಹೇಳುವ ಮೇಘನಾ ರಾಜ್, ಇಂದಿನ ಪೀಳಿಗೆಯ ಮಹಿಳೆಯರ ಮೇಲೆ ಈ ಚಿತ್ರ ಪರಿಣಾಮ ಬೀರಲಿದೆ ಎನ್ನುತ್ತಾರೆ.

ನಕಾರಾತ್ಮಕ ಪಾತ್ರಗಳನ್ನು ನೋಡಲು ಜನರು ಹೆಚ್ಚು ಇಷ್ಟಪಡುತ್ತಾರೆ. ಇಂತಹ ಮನೋಭಾವದಿಂದಲೇ ಅಂತಹ ಪಾತ್ರಗಳನ್ನು ನಿಬಾಯಿಸಬೇಕೆಂಬ ಆಸಕ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಮೇಘನಾ ರಾಜ್  ಹೇಳುತ್ತಾರೆ.

 ತೀರ್ಥಹಳ್ಳಿ, ಕೊಪ್ಪ, ಕುಂದಾಪುರದಲ್ಲಿ ಈಗಾಗಲೇ ಶೂಟಿಂಗ್ ನಡೆಯುತ್ತಿದ್ದು, ನಂತರ ಬೆಂಗಳೂರು ಹಾಗೂ ಊಟಿಯಲ್ಲಿ ಚಿತ್ರೀಕರಣ ಸಾಗಲಿದೆ. ತಿಲಕ್ ಹಾಗೂ ಮಹದೇವ್ ಈ ಚಿತ್ರದ ನಿರ್ಮಾಪಕರಾಗಿದ್ದು,  ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರಂಗೀತರಂಗ ಖ್ಯಾತಿಯ ವಿಲಿಯಂ ಡೇವಿಡ್  ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್