ಸಿನಿಮಾ ಸುದ್ದಿ

ಕೆಲವೊಮ್ಮೆ ನೆಗೆಟಿವ್ ಪಾತ್ರಗಳು ಖುಷಿ ಕೊಡುತ್ತವೆ: ಹರಿಪ್ರಿಯಾ

Sumana Upadhyaya
ನೆಗೆಟಿವ್ ಶೇಡ್ ಗಳಿರುವ ಪಾತ್ರಗಳನ್ನು ಮಾಡಿದ ನಟಿಯರ ಸಂಖ್ಯೆ ಕಡಿಮೆ. ವಿವಿಧ ರೀತಿಯ ಪಾತ್ರಗಳನ್ನು ಮಾಡಲು ಪ್ರಯತ್ನಿಸುವ ನಟಿ ಹರಿಪ್ರಿಯಾ ಇದೇ ಶುಕ್ರವಾರ ತೆರೆಗೆ ಬರುವ ಗುರು ದೇಶಪಾಂಡೆ ನಿರ್ದೇಶನದ ಸಂಹಾರ ಚಿತ್ರದಲ್ಲಿ ನೆಗೆಟಿವ್ ಪಾತ್ರವನ್ನು ನಿಭಾಯಿಸಿದ್ದಾರೆ. ಇದರಲ್ಲಿ ಅವರು ನಟ ಚಿರಂಜೀವಿ ಸರ್ಜಾ ಅವರಿಗೆ ಜೊತೆಯಾಗಿ ನಟಿಸಿದ್ದಾರೆ.
2018ರಲ್ಲಿ ಸತತವಾಗಿ ತೆರೆಕಾಣುತ್ತಿರುವ ಅವರ ಮೂರನೇ ಚಿತ್ರ ಇದಾಗಿದೆ. ಇದರಲ್ಲಿ ಕೆಟ್ಟ ಪಾತ್ರವನ್ನು ನಿಭಾಯಿಸಿದ ಬಗ್ಗೆ ಹರಿಪ್ರಿಯಾ ಹೇಳುವುದು ಹೀಗೆ: ತೆರೆಯ ಮೇಲೆ ಕೆಲವೊಮ್ಮೆ ಕೆಟ್ಟ ಪಾತ್ರಗಳನ್ನು ಅಭಿನಯಿಸುವುದು ಉತ್ತಮ ಎನಿಸುತ್ತದೆ. ಇದರಲ್ಲಿ ನಟನೆಗೆ ಹೆಚ್ಚು ಅವಕಾಶವಿದ್ದುದರಿಂದ ಪಾತ್ರವನ್ನು ಒಪ್ಪಿಕೊಂಡೆ. ಬಹುಭಾಷಾ ನಟಿ ರಮ್ಯಕೃಷ್ಣ ಅವರಿಂದ ಸ್ಫೂರ್ತಿ ಪಡೆದೆ. ಅವರ ನೀಲಾಂಬರಿ ಚಿತ್ರ ನನಗೆ ತುಂಬಾ ಹಿಡಿಸಿದೆ ಎನ್ನುತ್ತಾರೆ ಹರಿಪ್ರಿಯಾ.
ಸಾಮಾನ್ಯವಾಗಿ ಪಕ್ಕದ ಮನೆ ಹುಡುಗಿ ಪಾತ್ರವನ್ನು ಮಾಡುವ ಹರಿಪ್ರಿಯಾ ಸಿನಿಮಾ ಮಾಡುತ್ತಿದ್ದಂತೆ ನೆಗೆಟಿವ್ ಪಾತ್ರವನ್ನು ಮಾಡಲು ಕಲಿತರಂತೆ. ಸಾಮಾನ್ಯವಾಗಿ ನನ್ನ ಮುಖದ ಭಾವನೆ ಶಾಂತವಾಗಿರುತ್ತದೆ. ಕಟುವಾಗಿ ಮತ್ತು ವ್ಯಂಗ್ಯವಾಗಿ ಮುಖಭಾವನೆಯನ್ನು ತೋರಿಸುವುದು ಕಷ್ಟದ ಕೆಲಸ. ಚಿತ್ರದುದ್ದಕ್ಕೂ ಮೂಗುತಿ ಮತ್ತು ಬಿಂದಿ ಧರಿಸಬೇಕಾಗಿದ್ದರಿಂದ ಅದು ಕೂಡ ಸವಾಲಾಗಿತ್ತು. ಆರಂಭದಲ್ಲಿ ಈ ಪಾತ್ರ ನಿರ್ವಹಿಸಲು ಕಷ್ಟವಾಯಿತಾದರೂ ಹೋಗುತ್ತಾ ಪಾತ್ರವನ್ನು ಮಾಡುವಾಗ ಖುಷಿಯಾಯಿತು. ನಿಜ ಜೀವನದಲ್ಲಿ ಮಾತ್ರ ನಾನು ಹೀಗೆ ಇಲ್ಲ. ನನಗೆ ಯಾವಾಗಲೂ ಒಂದೇ ರೀತಿಯ ಪಾತ್ರಗಳನ್ನು ನೀಡದೆ ಪ್ರಯೋಗ ಮಾಡಲು ಬಿಡುವುದಕ್ಕೆ ನಾನು ಕೆಲವು ನಿರ್ದೇಶಕರಿಗೆ ಮತ್ತು ಬರಹಗಾರರಿಗೆ ಧನ್ಯವಾದ ಹೇಳಬೇಕು ಎನ್ನುತ್ತಾರೆ ಹರಿಪ್ರಿಯಾ.
ಸಾಮಾನ್ಯವಾಗಿ ಸಿನಿಮಾದಲ್ಲಿ ವಿಲನ್ ನ್ನು ಹೀರೋ ಎದುರಿಸಿದಾಗ ಅಲ್ಲಿ ಜಗಳ ನಡೆಯುತ್ತದೆ. ಆದರೆ ಇಲ್ಲಿ ಮಾತ್ರ ಹೀರೊ, ಹೀರೋಯಿನ್ ಗಳ ನಡುವೆ ದ್ವೇಷ ಸಾಧಿಸುವ ಪಾತ್ರ. ನಾನು ಕೂಡ ಸಿನಿಮಾದಲ್ಲಿ ಜಗಳ ಮಾಡುತ್ತೇನೆ, ಆದರೆ ಪಂಚ್ ಗಳಲ್ಲ. ನಾನು ಮಾಡುವ ಯೋಗ ಮತ್ತು ಸ್ಟಂಟ್ ಮ್ಯಾನ್ ರವಿ ವರ್ಮ ಅವರ ಸಲಹೆಗಳನ್ನು ನನಗೆ ವಿಲನ್ ಪಾತ್ರ ಮಾಡಲು ಸಹಾಯವಾಯಿತು ಎಂದರು ಹರಿಪ್ರಿಯಾ.
ಒಳ್ಳೆಯದು, ಕೆಟ್ಟದು ಎಂದು ಬಂದಾಗ ಕೊನೆಯಲ್ಲಿ ಒಳ್ಳೆಯದು ಗೆಲ್ಲುತ್ತದೆ, ಕೆಟ್ಟದು ಸೋಲುತ್ತದೆ. ಹಾಗಾದರೆ ಚಿತ್ರದಲ್ಲಿ ಏನಾಗುತ್ತದೆ ಎಂದು ಕೇಳಿದರೆ ಜನರು ಥಿಯೇಟರ್ ಗೆ ಬಂದು ಜನರು ನೋಡಬೇಕು ಎಂದರು.
SCROLL FOR NEXT