ರಮೇಶ್ ಅರವಿಂದ್-ರಾಧಿಕಾ ಕುಮಾರಸ್ವಾಮಿ 
ಸಿನಿಮಾ ಸುದ್ದಿ

ಭೈರದೇವಿಯಲ್ಲಿ ಒಂದಾಗಲಿರುವ ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್

ರಾಧಿಕಾ ಕುಮಾರಸ್ವಾಮಿ ಮತ್ತೆ ಸಿನಿಮಾ ನಿರ್ಮಾಣದತ್ತ ಒಲವು ತೋರಿದ್ದಾರೆ. ತಮ್ಮ ಶಮಿಕಾ ಬ್ಯಾನರ್ ...

ರಾಧಿಕಾ  ಕುಮಾರಸ್ವಾಮಿ ಮತ್ತೆ ಸಿನಿಮಾ ನಿರ್ಮಾಣದತ್ತ ಒಲವು ತೋರಿದ್ದಾರೆ. ತಮ್ಮ ಶಮಿಕಾ ಬ್ಯಾನರ್ ನಡಿಯಲ್ಲಿ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದು ಈ ತಿಂಗಳಾಂತ್ಯದಲ್ಲಿ ಕೆಲಸ ಆರಂಭವಾಗವ ಲಕ್ಷಣವಿದೆ.

ಭೈರದೇವಿ ಎಂದು ಚಿತ್ರದ ಹೆಸರಾಗಿದ್ದು ಇದರಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮಾಡುವುದರ ಜೊತೆಗೆ ನಟಿಸಲಿದ್ದಾರೆ ಕೂಡ. ಚಿತ್ರದ ಮುಹೂರ್ತ ನಿನ್ನೆ ನಡೆಯಿತು. ಶ್ರೀಜೈ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದೆ. ಅವರು ಈಗಾಗಲೇ ದುನಿಯಾ ವಿಜಯ್ ಅವರ ಆರ್ ಎಕ್ಸ್ ಸೂರಿ ಚಿತ್ರ ನಿರ್ದೇಶಿಸಿದ್ದಾರೆ.

 ಲಕ್ಕಿ ಮತ್ತು ಸ್ವೀಟಿ ನನ್ನ ಜೋಡಿ ಸಿನಿಮಾ ನಿರ್ಮಿಸಿದ್ದ ರಾಧಿಕಾ ಭೈರದೇವಿಯನ್ನು ಬೇರೆ ಭಾಷೆಗಳಲ್ಲಿ ಕೂಡ ನಿರ್ಮಿಸುವ ಒಲವು ತೋರಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಭೈರದೇವಿಯನ್ನು ನಿರ್ಮಿಸುತ್ತಿದ್ದಾರೆ.

ಭೈರದೇವಿಯಲ್ಲಿ ನಟ ರಮೇಶ್ ಅರವಿಂದ್ ರಾಧಿಕಾ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಸ್ಕಂದ ಅಶೋಕ್, ಅನು ಪ್ರಭಾಕರ್ ಚಿತ್ರದಲ್ಲಿದ್ದಾರೆ.

ಕ್ವೀನ್ ಚಿತ್ರದ ರಿಮೇಕ್  ನಲ್ಲಿ ಬ್ಯುಸಿಯಾಗಿರುವ ನಟ ರಮೇಶ್ ಅರವಿಂದ್  ದಕ್ಷಿಣ ಭಾರತ ಚಿತ್ರರಂಗದಲ್ಲಿ ಚಿರಪರಿಚಿತರು.ಭೈರದೇವಿಯ ಫೋಟೋ ಶೂಟ್ ನಡೆದ ನಂತರ ರಾಧಿಕಾ ಕುಮಾರಸ್ವಾಮಿ ಚಿತ್ರದ ಬಗ್ಗೆ  ಹೆಚ್ಚಿನ ವಿವರ ನೀಡಲಿದ್ದಾರೆ. ಆಪ್ತಮಿತ್ರದ ಛಾಯೆ ಭೈರದೇವಿಯಲ್ಲಿ ಕಾಣಬಹುದು ಎನ್ನುತ್ತಾರೆ ರಾಧಿಕಾ ಕುಮಾರಸ್ವಾಮಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಅಧ್ಯಕ್ಷರ ಆಯ್ಕೆ: ಮೇಜರ್ ಟ್ವಿಸ್ಟ್, ರೇಸ್ ನಿಂದ ಪಾರ್ಥಿವ್‌ ಪಟೇಲ್ ಔಟ್? 24 ಟೆಸ್ಟ್‌ ಅನುಭವದ ಮಾಜಿ ಕ್ರಿಕೆಟಿಗನ ಹೆಸರು ಮುಂಚೂಣಿಗೆ!