ಪುನೀತ್ ರಾಜ್ ಕುಮಾರ್, ಸರೋಜಾ ದೇವಿ 
ಸಿನಿಮಾ ಸುದ್ದಿ

ಪವನ್ ಒಡೆಯರ್ ನಿರ್ದೇಶನದ ಪುನೀತ್ ಸಿನಿಮಾ ಮಾರ್ಚ್ 5ರಿಂದ ಶೂಟಿಂಗ್ ಆರಂಭ

ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಇಲ್ಲೊಂದು ಸಿಹಿಸುದ್ದಿಯಿದೆ.ಪುನೀತ್ ಅವರ ಮುಂದಿನ ಸಿನಿಮಾವನ್ನು ...

ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಇಲ್ಲೊಂದು ಸಿಹಿಸುದ್ದಿಯಿದೆ.ಪುನೀತ್ ಅವರ ಮುಂದಿನ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಾರೆ ಮತ್ತು ನಿರ್ಮಾಣ ರಾಕ್ ಲೈನ್ ವೆಂಕಟೇಶ್ ಅವರದ್ದು ಎಂಬ ಮಾತುಗಳು ಕೇಳಿಬರುತ್ತಿದ್ದವು. ಅದೀಗ ನಿಜವಾಗುತ್ತಿದ್ದು ಮಾರ್ಚ್ 5ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ಅಂಜನಿಪುತ್ರ ಸಿನಿಮಾ ಬಿಡುಗಡೆಯಾದ ನಂತರ ಪುನೀತ್ ಯಾವುದೇ ಚಿತ್ರದ ನಟನೆಗೆ ಸಿನಿಮಾ ಸೆಟ್ ಗೆ ಬಂದಿರಲಿಲ್ಲ. ಫ್ಯಾಮಿಲಿ ಪವರ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದರು. ಮಾರ್ಚ್ 1ಕ್ಕೆ ಫ್ಯಾಮಿಲಿ ಪವರ್ ಶೂಟಿಂಗಾ್ ಮುಗಿಯುತ್ತದೆ.

ಪವನ್ ಒಡೆಯರ್ ಅವರ ಈ ಸಿನಿಮಾದಲ್ಲಿ ಆಕ್ಷನ್, ಮನರಂಜನೆ, ಕಾಮಿಡಿ ಹೀಗೆ ಪುನೀತ್ ಅಭಿಮಾನಿಗಳಿಗೆ ಇಷ್ಟವಾಗುವ ಎಲ್ಲಾ ಅಂಶಗಳು ಇರುತ್ತವೆ. ಚಿತ್ರದಲ್ಲಿ ಇ ಬ್ಬರು ಹೀರೋಯಿನ್ ಗಳಿರುತ್ತಾರೆ. ಚಿತ್ರತಂಡ ಇದೀಗ ನಾಯಕಿಯರ ಹುಡುಕಾಟದಲ್ಲಿ ತೊಡಗಿದೆ. ರಣ ವಿಕ್ರಮ ನಂತರ ಪವನ್ ಮತ್ತು ಪುನೀತ್ ಮತ್ತೆ ಒಂದಾಗುತ್ತಿದ್ದಾರೆ.

ಈ ಮಧ್ಯೆ ಇನ್ನೊಂದು ಆಸಕ್ತಿಕರ ವಿಷಯವನ್ನು ಚಿತ್ರತಂಡ ಹಂಚಿಕೊಂಡಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾ ದೇವಿ ಈ ಚಿತ್ರದ ಮೂಲಕ ಮತ್ತೆ ಮರಳುತ್ತಿದ್ದಾರೆ. ಕೆಲವು ಸುತ್ತಿನ ಮಾತುಕತೆ ನಂತರ ಸರೋಜಾದೇವಿ ಚಿತ್ರದಲ್ಲಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ.

80ರ ಹೊಸ್ತಿಲಿನಲ್ಲಿರುವ ಸರೋಜಾದೇವಿಯವರು ಸುಮಾರು 6 ದಶಕಗಳ ಕಾಲ ಸ್ಯಾಂಡಲ್ ವುಡ್ ಚಿತ್ರೋದ್ಯಮವನ್ನು ಆಳಿದವರು. ಅವರ ನಟನೆ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದರು. ರಾಜ್ ಕುಮಾರ್ ಮತ್ತು ಸರೋಜಾದೇವಿ ಜೋಡಿ ಶಾಸ್ತ್ರೀಯ ಕಥೆಗಳುಳ್ಳ ಚಿತ್ರಗಳ ನಟನೆಗೆ ಹೆಸರಾಗಿದ್ದರು.

ಗೌರವ ಡಾಕ್ಟರೇಟ್ ಮತ್ತು ಪದ್ಮ ಭೂಷಣ ಪಡೆದ ಸರೋಜಾದೇವಿಯವರು ರಾಜ್ ಕುಮಾರ್ ಅವರ ಮಗ ಪುನೀತ್ ಜೊತೆ ನಟಿಸಲು ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

JPSC-PT ರದ್ದುಗೊಳಿಸಲು ಜಾರ್ಖಂಡ್ ಸರ್ಕಾರ ಒಪ್ಪಿದರೂ 6ನೇ ಸುತ್ತಿನ ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಕೆ!

"ಹಮಾಸ್ ನಿಶ್ಯಸ್ತ್ರಗೊಳಿಸುವುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

ಪಾಕಿಸ್ತಾನಿಗಳು ಭಾರತೀಯರ ಸಂಪೂರ್ಣ ಬದ್ಧ ವೈರಿಗಳಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

ಆಗಸ್ಟ್ 13ರಿಂದ ವಿಧಾನಮಂಡಲ ಅಧಿವೇಶನ: ಟಿ.ಬಿ ಜಯಚಂದ್ರ ಹಂಗಾಮಿ ಸಭಾಧ್ಯಕ್ಷ