ಸಿನಿಮಾ ಸುದ್ದಿ

ಚಂದ್ರನ ಸ್ಪರ್ಶಿಸುವ ನನ್ನ ಕನಸು ನನಸಾಗಲಿದೆ: ಸಂಯುಕ್ತ ಹೊರನಾಡು

Vishwanath S
ಲೈಫು ಇಷ್ಟೇನೆ ಚಿತ್ರದ ಮೂಲಕ ಚಿತ್ರರಂಗದ ಗಮನ ಸೆಳೆದಿದ್ದ ಸಂಯುಕ್ತ ಹೊರನಾಡು ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ವೈಜ್ಞಾನಿಕ ಕಥಾಹಂದರ ಹೊಂದಿರುವ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ. 
ಸದ್ಯ ಸಂಯುಕ್ತ ಶ್ರೀನಿವಾಸ್ ನಿರ್ದೇಶನದ ನಾನು ಮತ್ತು ಗುಂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಮುಸಂಜೆ ಮಹೇಶ್ ನಿರ್ದೇಶನದ ಎಂಎಂಸಿಹೆಚ್ ಮತ್ತು ಅರವಿಂದ್ ಕಾಮತ್ ನಿರ್ದೇಶನದ ಅರಿಷಡ್ವರ್ಗ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. 
ಇನ್ನು ಹೊಸ ಚಿತ್ರಗಳಾದ ನಮ್ಮ ಯುಎಫ್ಒ ಮತ್ತು ಅಮರ್ ಚಿತ್ರಾ ಕಥಾ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅಜಯ್ ಸಪ್ರೇಷ್ಕರ್ ನಿರ್ದೇಶನದ ನಮ್ಮ ಯುಎಫ್ಒ ಚಿತ್ರ ಮಾರ್ಚ್ ನಲ್ಲಿ ಸೆಟ್ಟೇರಲಿದ್ದು ಇದೊಂದು ವೈಜ್ಞಾನಿಕ ಕಥಾ ಹಂದರವನ್ನು ಹೊಂದಿದೆ. ಈ ಚಿತ್ರದಲ್ಲಿ ಸಂಯುಕ್ತ ಹೊರನಾಡು ಅವರು ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ. ಇದೇ ವಿಚಾರ ಈಗ ಸಂಯುಕ್ತ ಅವರ ಖುಷಿಗೆ ಕಾರಣವಾಗಿದೆ. ಬಾಲ್ಯದಿಂದಲೂ ಅವರಿಗೆ ಚಂದ್ರಯಾನ ಮಾಡುವ ಕನಸನ್ನು ಹೊಂದಿದ್ದು ಅದು ಈ ಚಿತ್ರದ ಮೂಲಕ ನೆರವೇರಲಿದೆ ಎಂದು ಹೇಳಿದ್ದಾರೆ. 
ನಮ್ಮ ಯುಎಫ್ಒದಂತ ಚಿತ್ರಗಳನ್ನು ತಿರಸ್ಕರಿಸಲು ಸಾಧ್ಯವಾಗುವುದಿಲ್ಲ. ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ಮುನ್ನ ಚಿತ್ರದ ಕುರಿತಂತೆ ಏನನ್ನು ಹೇಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
SCROLL FOR NEXT