ಬೆಂಗಳೂರು: ನಿಖಿಲ್ ಕುಮಾರ್ ಹಾಗೂ ರಚಿತಾ ರಾಮ್ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾವನ್ನು ಎ.ಹರ್ಷ ನಿರ್ದೇಶಿಸುತ್ತಿದ್ದು, ಸಿನಿಮಾ ಶೂಟಿಂಗ್ ನಡೆಯುತ್ತಿದೆ.
ಸೀತಾರಾಮ ಕಲ್ಯಾಣ ಸಿನಿಮಾದ ಹೊಸ ಲುಕ್ ನಲ್ಲಿರುವ ನಿಖಿಲ್ ಕುಮಾರ್ ಅವರ ಫೋಟೋವನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಈ ಫೋಟೋದಲ್ಲಿ ನಿಖಿಲ್ ವಿಭಿನ್ನವಾಗಿ ಕಾಣುತ್ತಾರೆ, ಟೀ ಶರ್ಟ್ ಅದರ ಮೇಲೆ ನೀಲಿ ಬಣ್ಣದ ಬ್ಲೇಜರ್ ತೊಟ್ಟು ಕಣ್ಣಿಗೆ ಕನ್ನಡಕ ಧರಿಸಿದ್ದಾರೆ, ನಿಖಿಲ್ ಫುಲ್ ಕಾರ್ಪೋರೇಟ್ ಲುಕ್ ನಲ್ಲಿ ಕಾಣಸಿಕೊಂಡಿದ್ದಾರೆ.
ಇದು ಸೀತಾರಾಮ ಕಲ್ಯಾಣ ಸಿನಿಮಾದ 2ನೇ ಫೋಟೋವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಫೋಟೋಗಳನ್ನು ರಿಲೀಸ್ ಮಾಡಲಾಗುವುದು ಎಂದು ಕಾರ್ಯಕಾರಿ ನಿರ್ಮಾಪಕ ಸುನೀಲ್ ಗೌಡ ತಿಳಿಸಿದ್ದಾರೆ.
ಚಿತ್ರಕ್ಕೆ ರಾಮ ಲಕ್ಷಣ ಸಹೋದರರು ಸ್ಟಂಟ್ ಮಾಡಲಿದ್ದು ಇಂದು ಶೂಟಿಂಗ್ ಗಾಗಿ ಆಗಮಿಸಲಿದ್ದಾರೆ, ಫೈಟಿಂಗ್ ಸೀನ್ ಗಾಗಿ ಮಿನರ್ವ ಮಿಲ್ಸ್ ಬಳಿ ಬಹು ದೊಡ್ಡ ಸೆಟ್ ಹಾಕಲಾಗಿದೆ.
ಫೈಟಿಂಗ್ ಸನ್ನಿವೇಶದಲ್ಲಿ ನಟ ರವಿ ಶಂಕರ್ ಕೂಡ ಪಾಲ್ಗೋಳ್ಳಲಿದ್ದಾರೆ, ಚನ್ನಾಂಬಿಕಾ ಪ್ರೊಡಕ್ಷನ್ ಅಡಿಯಲ್ಲಿ ಸೀತಾರಾಮ ಸಿನಿಮಾ ನಿರ್ಮಾಣವಾಗುತ್ತಿದ್ದು.ವಿ. ಹರಿಕೃಷ್ಣ ಸಿನಿಮಾಗೆ ಸಂಗೀತ ನೀಡಿದ್ದಾರೆ.