ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಸುಪ್ರೀಂಕೋರ್ಟ್ ಆದೇಶ ನನಗೆ ಸಂತಸ ತಂದಿದೆ: ನಟಿ ಪ್ರಿಯಾ ಪ್ರಕಾಶ್ ವಾರಿಯರ್

ತಮ್ಮ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳಿಗೂ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ತಮಗೆ ಸಂತಸ ತಂದಿದೆ ಎಂದು 'ಒರು ಅಡಾರ್ ಲವ್' ಚಿತ್ರದ ನಾಯಕಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಹೇಳಿದ್ದಾರೆ.

ನವದೆಹಲಿ: ತಮ್ಮ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳಿಗೂ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ತಮಗೆ ಸಂತಸ ತಂದಿದೆ ಎಂದು 'ಒರು ಅಡಾರ್ ಲವ್' ಚಿತ್ರದ ನಾಯಕಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಹೇಳಿದ್ದಾರೆ.
'ಒರು ಅಡಾರ್ ಲವ್' ಚಿತ್ರದ ಟ್ರೈಲರ್ ಮೂಲಕ ರಾತ್ರೋ ರಾತ್ರಿ ಖ್ಯಾತಿ ಪಡೆದಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧ ಕೇರಳ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಹಲವೆಡೆ ದೂರು ದಾಖಲಾಗಿತ್ತು. ಈ ಸಂಬಂಧ  ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ನಟಿ ತಮ್ಮ ವಿರುದ್ಧದ ಪ್ರಕರಣಗಳನ್ನು ರದ್ದು ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನಿನ್ನೆ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧ  ದಾಖಲಾಗಿದ್ದ ಎಲ್ಲ ಪ್ರಕರಣಗಳಿಗೂ ತಡೆ ನೀಡಿತ್ತು. 
ಅಲ್ಲದೆ ಭವಿಷ್ಯದಲ್ಲೂ ಚಿತ್ರದ ನಾಯಕಿ ವಿರುದ್ಧ ಯಾವುದೇ ರೀತಿಯ ಎಫ್ ಐಆರ್ ದಾಖಲಿಸಬಾರದು ಎಂದು ಆದೇಶ ನೀಡಿದೆ.
ಈ ಹಿನ್ನಲೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ನಟಿ ಪ್ರಿಯಾ, ಸುಪ್ರೀಂ ಕೋರ್ಟ್ ಆದೇಶ ನನಗೆ ನೆಮ್ಮದಿ ತಂದಿದೆ. ನಿಜಕ್ಕೂ ನಾನು ಆದೇಶದಿಂದ ಸಂತೋಷಗೊಂಡಿದ್ದೇನೆ. ಈಗಷ್ಟೇ ನಾವು ಚಿತ್ರರಂಗಕ್ಕೆ ಪದಾರ್ಪಣೆ  ಮಾಡುತ್ತಿದ್ದೇವೆ. ಚಿತ್ರ ತೆರೆಕಾಣುವ ಮುನ್ನವೇ ಚಿತ್ರದ ವಿರುದ್ಧ ಮತ್ತು ನನ್ನ ವಿರುದ್ಧ ದೂರು ದಾಖಲಾಗುವುದು ನಿಜಕ್ಕೂ ಆತಂಕಕಾರಿ ಬೆಳವಣಿಯಾಗಿರುತ್ತದೆ. ದೂರಿನ ವಿಚಾರ ತಿಳಿದ ಕೂಡಲೇ ನಾನು ಸಾಕಷ್ಟು ಆತಂಕಗೊಂಡಿದ್ದೆ.  ಆದರೆ ಈ ಹಂತದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲಿಚ್ಛಿಸುತ್ತೇನೆ ಎಂದು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Lionel Messi: ಮೆಸ್ಸಿ ನೋಡೋಕೆ ಆಗಲಿಲ್ಲ ಎಂದು ರೊಚ್ಚಿಗೆದ್ದ ಫ್ಯಾನ್ಸ್, ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ದಾಂಧಲೆ-Video

'ಕಡತಗಳು ಟೇಬಲ್‌ನಿಂದ ಟೇಬಲ್‌ಗೆ ವರ್ಗವಾಗುತ್ತಿರುವಾಗಲೇ ಸುವರ್ಣ ಸಮಯ ಕಳೆದು ಹೋಗುತ್ತಿದೆ': HDKಗೆ ರವಿಕುಮಾರ್ ಟಾಂಗ್

ಕೋಲ್ಕತ್ತಾದಲ್ಲಿ ಮೆಸ್ಸಿ ಮೇನಿಯಾ: ಫುಟ್ಬಾಲ್ ದಿಗ್ಗಜನಿಗೆ ಅದ್ಧೂರಿ ಸ್ವಾಗತ; 70 ಅಡಿ ಎತ್ತರದ ಪ್ರತಿಮೆ ಅನಾವರಣ!

H-1B ವೀಸಾಗೆ ಶುಲ್ಕ: ಕ್ಯಾಲಿಫೋರ್ನಿಯಾ ಸೇರಿ 20 ರಾಜ್ಯಗಳಿಂದ ಟ್ರಂಪ್ ಆಡಳಿತದ ವಿರುದ್ಧ ಕೇಸ್

'ಮತಗಳಿಸುವುದು ಮಾತ್ರವಲ್ಲ ಜನರ ಹೃದಯ ಗೆಲ್ಲಬೇಕು, ದಕ್ಷಿಣದ ರಾಜ್ಯಗಳು ನಮಗೆ ಮುಖ್ಯ': ಸಂಸದರಿಗೆ ಪ್ರಧಾನಿ ಮೋದಿ ಪಾಠ

SCROLL FOR NEXT