ಪಡ್ಡೆಹುಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಶ್ರೇಯಸ್ ಮಂಜು ಪರಿಚಯವಾಗುತ್ತಿದ್ದು, ಚಿತ್ರತಂಡ ಚಿತ್ರೀಕರಣಕ್ಕೂ ಮುನ್ನ ಪ್ರಚಾರ ಪರಿಚಯದ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಿದೆ.
ಸಿಟಿ ಎಕ್ಸ್ ಪ್ರೆಸ್ ಗೆ ಚಿತ್ರಗಳು ಲಭ್ಯವಾಗಿದ್ದು, ಪಡ್ಡೆ ಹುಲಿ ಚಿತ್ರಕ್ಕಾಗಿ ಶ್ರೇಯಸ್ ಮಂಜು ಸಖತ್ ಸ್ಟಂಟ್ಸ್ ಮಾಡಿದ್ದಾರೆ.
ಸಾಹಸಮಯ ಚಿತ್ರೀಕರಣದ ದೃಶ್ಯ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದ್ದು, ಚಿತ್ರೀಕರಣದಲ್ಲಿ ತೊಡಗಿದ್ದ ಶ್ರೇಯಸ್ ಸಮರ ಕಲೆಗಳನ್ನೂ ಕರಗತ ಮಾಡಿಕೊಂಡಿದ್ದಾರೆ. ಸಾಹಸಮಯ ಚಿತ್ರೀಕರಣದಲ್ಲಿ ಶ್ರೇಯಸ್ ಮಂಜುಗೆ ಬಾಲಿವುಡ್ ನ ಟೈಗರ್ ಶ್ರಾಫ್ ಅವರೇ ಸ್ಪೂರ್ತಿಯಾಗಿದ್ದು" ಟೈಗರ್ ಅವರ ಆಕ್ಷನ್ ಕಲೆಗಳು ಇಷ್ಟವಾಗುತ್ತವೆ. ಆದರೆ ನನಗೆ ನನ್ನದೇ ಆದ ಛಾಪು ಮೂಡಿಸಿ ನನ್ನ ಪ್ರತಿಭೆಯ ಮೂಲಕ ಗುರುತಿಸಿಕೊಳ್ಳಬೇಕೆಂಬ ಆಸೆ ಇದೆ ಎಂದಿದ್ದಾರೆ.
ಈ ಪ್ರೋಮೋ ಮೂಲಕ ಚಿತ್ರ ತಂಡ ನನ್ನನ್ನು ಪರಿಚಯ ಮಾಡಲಿದ್ದು ಮುಹೂರ್ತ ನಡೆದ ಮರುದಿನವೇ ಪ್ರೋಮೋ ಬಿಡುಗಡೆಯಾಗಲಿದೆ ಎಂದು ಶ್ರೇಯಸ್ ಹೇಳಿದ್ದಾರೆ.