ಸಾಧು ಕೋಕಿಲಾ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಲೈಂಗಿಕ ದೌರ್ಜನ್ಯ ಪ್ರಕರಣ: ಹಾಸ್ಯ ನಟ ಸಾಧು ಕೋಕಿಲಗೆ ನಿರೀಕ್ಷಣಾ ಜಾಮೀನು

ಮಸಾಜ್ ಸೆಂಟರ್'ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಎದುರಿಸುತ್ತಿದ್ದ ಹಾಸ್ಯ ನಟ ಸಾಧು ಕೋಕಿಲಾ ಅವರಿಗೆ ನ್ಯಾಯಾಲಯದ ನಿರೀಕ್ಷಣಾ ಜಾಮೀನು ನೀಡಿದೆ...

ಮೈಸೂರು: ಮಸಾಜ್ ಸೆಂಟರ್'ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಎದುರಿಸುತ್ತಿದ್ದ ಹಾಸ್ಯ ನಟ ಸಾಧು ಕೋಕಿಲಾ ಅವರಿಗೆ ನ್ಯಾಯಾಲಯದ ನಿರೀಕ್ಷಣಾ ಜಾಮೀನು ನೀಡಿದೆ. 
ಮೈಸೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಧು ಕೋಕಿಲ ಅವರಿಗೆ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ. 
ಬೋಗಾದಿಯ ರೈಲ್ವೆ ಬಡಾವಣೆಯ 'ಲೈಕ್ ಟ್ರೆಂಡ್ ಹಾಗೂ ಫ್ಯಾಮಿಲಿ ಸಲೂಮ್' ಮೇಲೆ ಕೆಲ ದಿನಗಳ ಹಿಂದಷ್ಟೇ ದಾಳಿ ನಡೆಸಿದ್ದ ಸರಸ್ವತಿಪುರಂ ಠಾಣೆಯ ಪೊಲೀಸರು 24 ವರ್ಷದ ಮಹಿಳೆಯೊಬ್ಬರನ್ನು ವೇಶ್ಯಾವಾಟಿಕೆ ಜಾಲದಿಂದ ರಕ್ಷಣೆ ಮಾಡಿದ್ದರು. ವಿಚಾರಣೆ ವೇಳೆ ಮಹಿಳೆ ಹಾಸ್ಯ ನಟರು ಹಾಗೂ ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಸಂಗತಿಯನ್ನು ಬಹಿರಂಗಪಡಿಸಿದ್ದರು. 
ಪ್ರಕರಣದ ಬಳಿಕ ಬಂಧನ ಭೀತಿ ಎದುರಿಸುತ್ತಿದ್ದ ಸಾಧು ಕೋಕಿಲಾ ಅವರು ಜಾಮೀನು ಮಂಜೂರು ಮಾಡುವಂತೆ ಕೋರಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಜ.1ರಂದು ಅರ್ಜಿ ಸಲ್ಲಿಸಿದ್ದರು. 
ಪ್ರಕರಣ ಸಂಬಂಧ ನಟ ಮಂಡ್ಯ ರಮೇಶ್ ವಿರುದ್ಧ ಕೂಡ ಆರೋಪಗಳು ಕೇಳಿಬಂದಿದ್ದು, ಆರೋಪಗಳನ್ನು ತಳ್ಳಿಹಾಕುತ್ತಿರುವ ರಮೇಶ್ ಅವರು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೆ. 9ರಂದು ಗೃಹ ಸಚಿವಾಲಯದೊಂದಿಗೆ ಮಾತುಕತೆಗೆ ಮುನ್ನ ಹೋರಾಟ ತೀವ್ರ: ಲಡಾಖ್ ಉನ್ನತ ಮಂಡಳಿ ಎಚ್ಚರಿಕೆ

ಕೇರಳಂನ ತ್ರಿಶೂರ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ತಮಿಳು ನಾಡಿನ ಎಂಟು ಮಂದಿ ಸಾವು, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

ಪ್ರಧಾನಿ ಮೋದಿ ಮೆಚ್ಚಿದ ಇಡ್ಲಿ ನಿಂಗಮ್ಮನಿಗೆ ಸಂಕಷ್ಟ: ಅಂಗಡಿ ನಡೆಸದಂತೆ GBA ಅಧಿಕಾರಿಗಳ ವಾರ್ನಿಂಗ್!

CJP ಪ್ರತಿಭಟನೆ ವೇಳೆ ಹೆಸರು ದುರುಪಯೋಗ: 'ಬಲಪಂಥೀಯ' ಇನ್‌ಫ್ಲ್ಯುಯೆನ್ಸರ್ ವಿರುದ್ಧ ಕೇಸ್ ದಾಖಲಿಸಿದ ಚಿರಾಗ್ ಪಾಸ್ವಾನ್