ಚಮಕ್ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಗಣೇಶ್ ಪಿ.ವಾಸು ನಿರ್ದೇಶನದಲ್ಲಿ ಹಿರಿಯ ನಟ ಜಗ್ಗೇಶ್ ಜೊತೆ ಅಭಿನಯಿಸಲು ಮುಂದಾಗಿರುವುದಕ್ಕೆ ಖುಷಿಯಾಗಿದ್ದಾರೆ.
ಪಿ.ವಾಸು ಅವರ ಚಿತ್ರದಲ್ಲಿನ ಪಾತ್ರಕ್ಕೆ ನನ್ನನ್ನು ಯೋಚಿಸಿರುವುದಕ್ಕೆ ನಾನು ಬಹಳ ಖುಷಿಯಾಗಿದ್ದೇನೆ. ನಾನು ಜಗ್ಗೇಶ್ ಸರ್ ಜೊತೆಗೆ ಕೆಲಸ ಮಾಡಲು ತುಂಬಾ ಉತ್ಸುಕನಾಗಿದ್ದೇನೆ ಎನ್ನುತ್ತಾರೆ ಗಣೇಶ್.
ಚಿತ್ರದ ಕಥೆಯ ವಿವರಗಳನ್ನು ಕೇಳಲು ಇನ್ನೂ ಬಾಕಿ ಇದ್ದು, ನಿರ್ದೇಶಕರು ಮತ್ತು ನಿರ್ಮಾಪಕರ ಜೊತೆ ಅಂತಿಮ ಮಾತುಕತೆ ನಡೆಯಬೇಕಿದೆ. ಎಲ್ಲವೂ ಅಂತಿಮವಾದ ನಂತರ ಮಾತನಾಡುವುದು ಒಳ್ಳೆಯದೆಂದು ನನಗನ್ನಿಸುತ್ತದೆ.
ಪ್ರಶಾಂತ್ ರಾಜ್ ನಿರ್ದೇಶನದ ಮುಂದಿನ ಚಿತ್ರ ಆರೆಂಜ್ ನಲ್ಲಿನ ಕೆಲಸಕ್ಕೆ ಗಣೇಶ್ ಸಿದ್ಧರಾಗುತ್ತಿದ್ದಾರೆ. ಆ ಚಿತ್ರ ಅಂತಿಮ ಹಂತದಲ್ಲಿದೆ.