ಕಾವ್ಯ ಶೆಟ್ಟಿ 
ಸಿನಿಮಾ ಸುದ್ದಿ

ಪ್ರೀತಿಗೆ ನಿರ್ದಿಷ್ಟ ಸಮಯವಿಲ್ಲ: ಕಾವ್ಯಾ ಶೆಟ್ಟಿ

ಯೋಜನೆಯಲ್ಲಿ ನಂಬಿಕೆ ಇಟ್ಟುಕೊಳ್ಳದಿರುವ ನಟಿ ಕಾವ್ಯ ಶೆಟ್ಟಿ, ಜೀವನವನ್ನು ಬಂದ ಹಾಗೆ ತೆಗೆದುಕೊಳ್ಳುವವರು...

ಯೋಜನೆಯಲ್ಲಿ ನಂಬಿಕೆ ಇಟ್ಟುಕೊಳ್ಳದಿರುವ ನಟಿ ಕಾವ್ಯ ಶೆಟ್ಟಿ, ಜೀವನವನ್ನು ಬಂದ ಹಾಗೆ ತೆಗೆದುಕೊಳ್ಳುವವರು. ವೃತ್ತಿಯಲ್ಲಿ ಒಳ್ಳೆದು, ಕೆಟ್ಟದು ಎಂದು ಹುಡುಕಲು ಸಾಧ್ಯವಿಲ್ಲ. ಹೀಗಾಗಿ ಯೋಜನೆ ಮಾಡಿಕೊಳ್ಳದೆ ವೃತ್ತಿ ಜೀವನದಲ್ಲಿ ಮುನ್ನಡೆಯುವುದು ಸೂಕ್ತ ಎನ್ನುತ್ತಾರೆ ಕಾವ್ಯಾ ಶೆಟ್ಟಿ. 
ಇವರ 3 ಗಂಟೆ, 30 ದಿನ, 3 ಸೆಕೆಂಡ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಸಮಯದ ಶೀರ್ಷಿಕೆ ಹೊಂದಿರುವ ಸಿನಿಮಾದಲ್ಲಿ ನಟಿಸಿರುವ ಕಾವ್ಯಾ ಸಮಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆಯೇ ಎಂದು ಕೇಳಿದರೆ ಖಂಡಿತವಾಗಿಯೂ, ಸಮಯಕ್ಕೆ ಪ್ರಾಮುಖ್ಯತೆ ಕೊಡುತ್ತೇನೆ, ಸಮಯವೆಂದರೆ ಹಣವೆದ್ದ ಹಾಗೆ. ಸಮಯವನ್ನು ಹಾಳು ಮಾಡುವುದೆಂದರೆ ನನಗೆ ಇಷ್ಟವಾಗುವುದಿಲ್ಲ ಎನ್ನುತ್ತಾರೆ.
ಈ ಚಿತ್ರ ತಯಾರಿಯಲ್ಲಿನ ಪ್ರಯಾಣವನ್ನು ಕಾವ್ಯಾ ಬಹಳ ಇಷ್ಟಪಟ್ಟಿದ್ದಾರಂತೆ. ಥ್ರಿಲ್ಲರ್ ಸಿನಿಮಾದ ಭಾವನೆ ಕೊಟ್ಟರೂ ಕೂಡ ಪ್ರೀತಿಯ ಕುರಿತಾದ ಚಿತ್ರವಿದು. ಪ್ರೀತಿ ಸಮಯಾತೀತವಾದದ್ದು. ಅದು ವಿವಿಧ ಸಂಬಂಧಗಳಲ್ಲಿ ನಿಜವಾದದ್ದು.ಟಿವಿ ಚಾನೆಲ್ ವೊಂದರ ಮಾಲಿಕನ ಪಾತ್ರವನ್ನು ನಾನು ಅಭಿನಯಿಸುತ್ತಿದ್ದು, ಆಕೆಗೆ ಪ್ರೀತಿಸಲು ಸಮಯವಿರುವುದಿಲ್ಲ. ಯಾವಾಗಲೂ ಕೆಲಸವೆಂದು ಇರುತ್ತಾಳೆ. ಆದರೆ ಚಿತ್ರದಲ್ಲಿ ನಾಯಕನಿಗೆ ಎಲ್ಲವೂ ಪ್ರೀತಿಯಾಗಿದ್ದು, ಉಳಿದಿದ್ದೆಲ್ಲವೂ ಅಭೌತಿಕವಾದದ್ದು. ಚಿತ್ರದ ಜೀವಾಳವೇ ಅದು. ಜೀವನದಲ್ಲಿ ಪ್ರೀತಿ ಮತ್ತು ಸಮಯ ಎರಡು ಕೂಡ ಮುಖ್ಯವೇ ಎನ್ನುತ್ತಾರೆ ಕಾವ್ಯಾ.
ಪ್ರೀತಿ ನಿಮಿಷಗಳಲ್ಲಿಯೇ ಹುಟ್ಟಿಕೊಳ್ಳಬಹುದು ಅಥವಾ ಎಂದೆಂದಿಗೂ ಹುಟ್ಟಿಕೊಳ್ಳಬಹುದು ಅಥವಾ ಎಂದಿಗೂ ಹುಟ್ಟಿಕೊಳ್ಳದಿರಬಹುದು. ತಕ್ಷಣವೇ ಪ್ರೀತಿ ಹುಟ್ಟಿಕೊಳ್ಳಬಹುದು ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ. ಒಬ್ಬ ವ್ಯಕ್ತಿಯ ಜೊತೆ ಪ್ರೀತಿ ಹುಟ್ಟಿಕೊಳ್ಳಲು ಕೆಲ ಸಮಯಗಳು ಹಿಡಿದುಕೊಳ್ಳುತ್ತದೆ. ತಾಯಿಯ ಪ್ರೀತಿಯಾದರೆ ಸಹಜವಾದದ್ದು ಮತ್ತು ತಕ್ಷಣವೇ ಹುಟ್ಟಿಕೊಳ್ಳುತ್ತದೆ.
ಮಧುಸೂಧನ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು, ಇದಕ್ಕಾಗಿ ಕಾವ್ಯ ಬಹಳಷ್ಟು ತಯಾರಿ ಮಾಡಿಕೊಂಡಿದ್ದರಂತೆ. ಒಂದೂವರೆ ವರ್ಷ ಸಮಯವನ್ನು ಈ ಚಿತ್ರಕ್ಕಾಗಿ ತೆಗೆದುಕೊಂಡಿದ್ದು ಈ ಮಧ್ಯೆ ಕಾವ್ಯಾ ಸಂಹಾರ ಎಂಬ ಮತ್ತೊಂದು ಸಿನಿಮಾ ಮಾಡಿದ್ದಾರೆ. ಅದು ಕೂಡ ಬಿಡುಗಡೆಗೆ ಸಿದ್ದವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT