ರಾಜು ಕನ್ನಡ ಮೀಡಿಯಂನ ಕಲಾವಿದರು 
ಸಿನಿಮಾ ಸುದ್ದಿ

ಎಲ್ಲಾ ಭಾಷೆ, ವೀಕ್ಷಕರಿಗೆ ತಲುಪುವ ಚಿತ್ರ ರಾಜು ಕನ್ನಡ ಮೀಡಿಯಂ: ನರೇಶ್ ಕುಮಾರ್

ಫಸ್ಟ್ ರ್ಯಾಂಕ್ ರಾಜು ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ನಲ್ಲಿ ....

ಫಸ್ಟ್ ರ್ಯಾಂಕ್ ರಾಜು ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ನರೇಶ್ ಕುಮಾರ್ ಅವರ ರಾಜು ಕನ್ನಡ ಮೀಡಿಯಂ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಇದೀಗ ತೆಲುಗಿನಲ್ಲಿ ರಿಮೇಕ್ ಸಿನಿಮಾ ತಯಾರಿಸಲು ನಿರ್ದೇಶಕರು ಮುಂದಾಗಿದ್ದಾರೆ.
ಕನ್ನಡ ಚಿತ್ರವೊಂದು ಇನ್ನೊಂದು ಭಾಷೆಯಲ್ಲಿ ತಯಾರಾಗುವುದು ನಮಗೆ ಖುಷಿಯ ವಿಚಾರ. ಮತ್ತು ಅದೇ ನಿರ್ದೇಶಕರನ್ನು ಇನ್ನೊಂದು ಭಾಷೆಯ ರಿಮೇಕ್ ಚಿತ್ರದಲ್ಲಿ ಮಾಡಿಸುತ್ತಿರುವುದು ಇನ್ನೂ ಸಂತಸದ ಸಂಗತಿ ಎನ್ನುತ್ತಾರೆ ನರೇಶ್ ಕುಮಾರ್.
ಫಸ್ಟ್ ರ್ಯಾಂಕ್ ರಾಜು ಚಿತ್ರದಲ್ಲಿ ನಟಿಸಿದ ನಟ ಗುರು ನಂದನ್, ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಮತ್ತು ಛಾಯಾಗ್ರಹಣ ಶೇಖರ್ ಚಂದ್ರ ಕೂಡ ರಾಜು ಕನ್ನಡ ಮೀಡಿಯಂನಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಇರುವ ಇತರರು ಪ್ರಮುಖರೆಂದರೆ ನಿರ್ಮಾಪಕ ಕೆ.ಸುರೇಶ್, ನಟಿಯರಾದ ಆವಂತಿಕಾ ಶೆಟ್ಟಿ ಮತ್ತು ಆಶಿಕಾ ರಂಗನಾಥ್.
ಗ್ರಾಮದಿಂದ ನಗರಕ್ಕೆ ವರ್ಗಾವಣೆಯಾಗುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಜೀವನ ಮತ್ತು ಅದನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ಕೂಡ ಚಿತ್ರದಲ್ಲಿ ತೋರಿಸಲಾಗಿದೆ. ನನ್ನ ಮೊದಲ ಚಿತ್ರದ ಮುಂದುವರಿದ ಪಾತ್ರವೇ ರಾಜು. ಚಿತ್ರದಲ್ಲಿ ರಾಜುವಿನ ಪಾತ್ರ ಕವಿಯಾಗಿದ್ದು, ಕನ್ನಡ ಭಾಷೆಯ ಬಗ್ಗೆ ಅದಮ್ಯ ಪ್ರೀತಿ ಇರುವವನಾಗಿದ್ದಾನೆ. ಕಾಸ್ಮೊಪಾಲಿಟನ್ ನಗರ ಬೆಂಗಳೂರಿಗೆ ಬಂದು ಬದುಕಲು ಕಷ್ಟ ಪಡುವುದನ್ನು ರಾಜು ಕನ್ನಡ ಮೀಡಿಯಂನಲ್ಲಿ ತೋರಿಸಲಾಗಿದೆ.
ಚಿತ್ರದಲ್ಲಿ ಕರ್ನಾಟಕದ ಕೆಲವು ಗೊತ್ತಿಲ್ಲದ ಜನರಿಗೆ ಚಿರಪರಿಚಿತವಲ್ಲದ ತಾಣಗಳನ್ನು ನಿರ್ದೇಶಕರು ಇಲ್ಲಿ ತೋರಿಸಿದ್ದಾರಂತೆ. 
ಚಿತ್ರದ ಮತ್ತೊಂದು ಧನಾತ್ಮಕ ಅಂಶ ಸ್ಟಾರ್ ನಟ ಸುದೀಪ್ ಅವರನ್ನು ಕರೆತಂದಿರುವುದು. ಹಲವು ಬಾರಿ ಯೋಚಿಸಿ ಚಿತ್ರದ ಕಥೆ ಸಿದ್ದವಾದ ನಂತರ ಸುದೀಪ್ ರನ್ನು ಭೇಟಿ ಮಾಡಿದೆವು. ಆ ಪಾತ್ರಕ್ಕೆ ಅವರು ಹೊಂದಿಕೆಯಾಗುತ್ತಾರೆಂದು ಗೊತ್ತಾದ ನಂತರ ಒಪ್ಪಿದರು. ಚಿತ್ರದಲ್ಲಿ ಸುದೀಪ್ ಅವರು ದೊಡ್ಡ ಯಶಸ್ವಿ ಉದ್ಯಮಿಯಾಗಿದ್ದು ಅವರೊಂದು ಮಾರ್ಗದರ್ಶಕರಾಗಿ ಸ್ಫೂರ್ತಿಯಾಗಿ ಕಾಣಿಸಿಕೊಳ್ಳುತ್ತಾರೆ.
ಕರ್ನಾಟಕ ಮತ್ತು ಕನ್ನಡವನ್ನು ಪ್ರೀತಿಸುವವರು ರಾಜು ಕನ್ನಡ ಮೀಡಿಯಂನ್ನು ಇಷ್ಟಪಡುತ್ತಾರೆ. ಇದೊಂದು ಸಂಪೂರ್ಣ ಮನರಂಜನಾ ಚಿತ್ರವಾಗಿದ್ದು ಎಲ್ಲಾ ಭಾಷೆಗಳ ಮತ್ತು ಎಲ್ಲಾ ಪ್ರೇಕ್ಷಕರನ್ನು ತಲುಪಲಿದೆ ಎಂಬ ವಿಶ್ವಾಸ ನಿರ್ದೇಶಕ ನರೇಶ್ ಕುಮಾರ್ ಅವರದ್ದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT