ಬೆಂಗಳೂರು: ಬೆಂಗಳೂರು ಮೂಲದ ಬೆಡಗಿ ರುಕ್ಷಾರ್ ಮಿರ್ ತಾನು ಕಣ್ಣಡದ ರನ್ ಆಂಟನಿ, ಕಟ್ಟೆ ನಂತರ ತೆಲುಗಿನ ಕೃಷ್ಣಾರ್ಜುನ ಯುದ್ಧಂ ನಲ್ಲಿ ಅಭಿನಯಿಸುತ್ತಿದ್ದು ಅದು ಅವರ ವೃತ್ತಿ ಜೀವನಕ್ಕೆ ಬ್ರೇಕ್ ತಂದು ಕೊಡಲಿದೆ ಎನ್ನುತ್ತಾರೆ. "ಚಿತ್ರೀಕರಣಕ್ಕೆ ಇನ್ನು ಒಂಭತ್ತು ದಿನಗಳು ಮಾತ್ರ ಉಳಿದಿದೆ. ನನ್ನ ಪಾತ್ರದ ಚಿತ್ರೀಕರಣವು ಫೆಬ್ರವರಿ 9ರ ಹೊತ್ತಿಗೆ ನಡೆಯಲಿದ್ದು ನಿರ್ಮಾಪಕರು ಏಪ್ರಿಲ್ 9ಕ್ಕೆ ಚಿತ್ರ ಬಿಡುಗಡೆ ಮಾಡಲಿದ್ದಾರೆ" ನಟಿ ತಿಳಿಸಿದರು.
ಟಾಲಿವುಡ್ ನ ಪ್ರಸಿದ್ಧ ನಟರೊಂದಿಗೆ ಪರದೆಯ ಹಂಚಿಕೊಳ್ಳುವ ಅನುಭವ ಕುರಿತು ಹೇಳಿ? ಇದು ನಿಮಗೆ ಮುಂದಿನ ದಿನಗಳಲ್ಲಿ ಹೇಗೆ ನೆರವಾಗಲಿದೆ?
"ಇಂದು ಎರಡು ಬಾಷೆಗಳ ಚಿತ್ರೋದ್ಯಮದ ನಡುವಿನ ಅಂತರ ತೀರಾ ಚಿಕ್ಕದಾಗಿದೆ. ನಾವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರೋದ್ಯಮದ ಬೆಳವಣಿಗೆಯನ್ನು ತಿಳಿದುಕೊಳ್ಳುವುದು ಸಾಧ್ಯವಾಗಿದೆ. ನನಗೆ ನಾನಿ ಅವರಂತಹಾ ನಟರೊಡನೆ ಅಭಿನಯಿಸುವ ಅವಕಾಶ ದಕ್ಕಿದ್ದು ನಿಜಕ್ಕೂ ಸಂತಸ ತಂದಿದೆ.ಚಿತ್ರದಲ್ಲಿ ನನ್ನ ಪಾತ್ರದ ವಿಚಾರವಾಗಿ ನಾನೀಗಲೇ ಏನೂ ಹೇಳಲಾರೆ. ಚಿತ್ರ ಬಿಡುಗಡೆಯಾಗುವ ವೇಳೆ ಆ ಬಗೆಗೆ ಹೇಳಲು ಬಯಸುತ್ತೇನೆ. ಆದರೆ ಇಷ್ಟಂತೂ ಸತ್ಯ, ನನ್ನ ಪಾತ್ರ ಪ್ರೇಕ್ಷಕರಿಗೆ ಮೆಚ್ಚುಗೆ ಆಗುವಂತಿದೆ."
ಈ ನಡುವೆ ತೆಲುಗಿನಲ್ಲಿ ಕೆಲ ಸ್ಕ್ರಿಪ್ಟ್ ಹುಡುಕುತ್ತಿದ್ದು ಸ್ಯಾಂಡಲ್ ವುಡ್ ನಿಂದ ಬರುವ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. "ಬೆಂಗಳೂರು ನನ್ನ ತವರು, ಸ್ಯಾಂಡಲ್ ವುಡ್ ನಿಂದಲೇ ನನ್ನ ವೃತ್ತಿ ಜೀವನ ಪ್ರಾರಂಭ ಮಾಡಿದ್ದೆನ್ನುವುದನ್ನು ನಾನೆಂದೂ ಮರೆಯುವುದಿಲ್ಲ." ರುಕ್ಷಾರ್ ಮಿರ್ ನುಡಿದರು.