ರಾಜು ಕನ್ನಡ ಮೀಡಿಯಂ ನ ಒಂದು ದೃಶ್ಯ
ಬೆಂಗಳೂರು: ನಟಿ ಆಶಿಕಾ ರಂಗನಾಥ್ ಮತ್ತೆ ಶಾಲಾ ದಿನಗಳಿಗೆ ಮರಳಿದ್ದಾರೆ. ವಿಶೇಷವಾಗಿ ಒಂಭತ್ತನೇ ತರಗತಿ ವಿದ್ಯಾರ್ಥಿನಿಯಾಗಿ ಶಾಲಾ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವ ದೃಶ್ಯ ಚಿತ್ರೀಕರಣದ ವೇಳೆ ಆಕೆ ತಮ್ಮ ಶಾಲಾ ದಿನಗಳ ನೆನಪಿಗೆ ಮರಳಿದ್ದರು.
"ನಾನು ಶಾಲಾ ದಿನಗಳನ್ನು ಪ್ರೀತಿಸುತ್ತೇನೆ. ಸ್ಕರ್ಟ್ ಹಾಗೂ ಶೂ ಹಾಕಿಕೊಂಡು ಶಾಲಾ ವಿದ್ಯಾರ್ಥಿಗಳೊಡನೆ ಕಳೆಯುವುದು ಅತ್ಯಂತ ಖುಷಿಯ ಸಂಗತಿಯಾಗಿದೆ. ಇಂಗ್ಲಿಷ್ ಮಾದ್ಯಮದಲ್ಲಿ ಅಧ್ಯಯನ ಮಾಡಿದ ನನಗೆ, ಒಂದು ಹಳ್ಳಿಯಲ್ಲಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುವ ಅನುಭವ ಹೇಗಿರುತ್ತದೆ ಎನ್ನುವುದನ್ನು ನಾನು ಕಂಡುಕೊಂಡೆ. ನಾನು ಚಿತ್ರೀಕರಣ ಸಮಯದಲ್ಲಿ ದೂರದಿಂದ ನನ್ನನ್ನು ನೋಡುವ ವಿದ್ಯಾರ್ಥಿಗಳ ಮುಖಗಳ ಮೇಲಿದ್ದ ಮುಗ್ಧತೆಯನ್ನು ಗಮನಿಸಿದ್ದೇನೆ. ಇದು ಒಂದು ಮೋಜಿನ ಅನುಭವವಾಗಿತ್ತು. ನನ್ನ ಶಾಲಾದಿನಗಳಲ್ಲಿನ ನೆನಪುಗಳು ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ, ಏಕೆಂದರೆ ನಾನು ಈ ಚಿತ್ರಕ್ಕಾಗಿ ಆಯ್ಕೆಯಾದಾಗ ನನ್ನ ಮೊದಲ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದೆ." ನಟಿ ಆಶಿಕಾ ಹೇಳಿದರು.
ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಕಥೆಯು ಶಾಲಾ ದಿನಗಳ್ ಜತೆಜತೆಗೆ ಪ್ರೇಮ, ಪ್ರಣಯ ವಿಚಾರಗಳಿಂದ ಕೂಡಿದೆ. ಆದರೆ ಇದು ಆಶಿಕಾಗೆ ಸಂಬಂಧಿಸಿರದ ವಿಚಾರ, "ನಿಜ ಜೀವನದಲ್ಲಿ ನಾನು ಈ ಅನುಭವ ಪಡೆದಿಲ್ಲ" ಅವರು ಹೇಳುತ್ತಾರೆ.
"ನನ್ನ ವೃತ್ತಿಜೀವನದ ಪ್ರಾರಂಭದಲ್ಲಿ ನನಗೆ ಈ ಪಾತ್ರ ಸಿಕ್ಕಿತ್ತು. ನಾನು ಒಂದೂವರೆ ವರ್ಷಗಳ ಹಿಂದೆ ಈ ಚಿತ್ರದ ದೃಶ್ಯಗಳಲ್ಲಿ ನಟಿಸಿದ್ದದ್ದು ನನಗೆ ನೆನಪಿದೆ. ಇದಾದ ನಂತರ ನಾನು ಮುಗುಳು ನಗೆ, ಮಾಸ್ ಲೀಡರ್ ಗಳಲ್ಲಿ ಕಾಣಿಸಿಕೊಂಡೆ. ಈಗ ರ್ಯಾಂಬೋ 2 ಮತ್ತು ತಾಯಿಗೆ ತಕ್ಕ ಮಗ ದಲ್ಲಿ ನಟಿಸುತ್ತಿದ್ದೇನೆ". ಆಶಿಕಾ ನುಡಿದರು.
ನರೇಶ್ ಕುಮಾರ್ ನಿರ್ದೇಶನದ ರಾಜು ಕನ್ನಡ ಮೀಡಿಯಂ ಗುರುನಂದನ್ ಮತ್ತು ಅವಂತಿಕಾ ಶೆಟ್ಟಿ ಅವರ ಅಭಿನಯದ ಚಿತ್ರವಾಗಿದೆ. ಈ ಚಿತ್ರದಲ್ಲಿ ಆಶಿಕಾಳ ಪಾತ್ರವು ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದರೂ ಆ ಪಾತ್ರವು ಕಥೆಗೆ ಅತ್ಯಂತ ಮುಖ್ಯವಾಗಿತ್ತು ಎನ್ನುವುದು ಆಶಿಕಾ ಅಭಿಪ್ರಾಯ.
ಪ್ರಸ್ತುತ ನಟಿ ರ್ಯಾಂಬೋ 2 ಚಿತ್ರದ ಹಾಡಿನ ಶೂಟಿಂಗ್ ನಲ್ಲಿದ್ದು ಇದಾದ ನಂತರ ಫೆಬ್ರವರಿ ಮೊದಲ ವಾರದಿಂದ ತಾಯಿಗೆ ತಕ್ಕ ಮಗ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಆದರೆ ನಟಿ ಒಮ್ಮಿಂದೊಮ್ಮೆಗೆ ಬಹು ಸಂಖ್ಯೆಯ ಚಿತ್ರಗಳಲ್ಲಿ ನಟಿಸಲು ಇಷ್ಟವಿಲ್ಲ. "ಸಾಕಷ್ಟು ಕೆಲಸವನ್ನು ಮಾಡಬೇಕಾಗಿದೆ ಆದರೆ ನನ್ನ ವೈಯಕ್ತಿಕ ಜೀವನಕ್ಕೆ ಸಹ ಸಮಯ ಬೇಕು. ನಾನು ಒತ್ತಡದಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ, " ಆಶಿಕಾ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos