2012ರಲ್ಲಿ ಬಿಡುಗಡೆಯಾಗಿದ್ದ ಮಲಯಾಳಂನ ಸೂಪರ್ ಹಿಟ್ ಸೆಕೆಂಡ್ ಶೋ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಾಣೆ ಮಾಡಿದ್ದ ಸಿಧು ಆರ್ ಪಿಳ್ಳೈ ಅವರ ಮೃತದೇಹ ಗೋವಾದ ಬೀಚ್‌ನಲ್ಲಿ ಪತ್ತೆಯಾಗಿದೆ.
27 ವರ್ಷದ ಸಿಧು ಆರ್ ಪಿಳ್ಳೈ ಜನವರಿ 12ರಂದು ಗೋವಾಕ್ಕೆ ತೆರಳಿದ್ದರು ಎನ್ನಲಾಗಿದೆ. ಇದೀಗ ಸಿಧು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಅವರ ಮೃತದೇಹ ಪತ್ತೆಯಾಗಿದೆ.
ಮಲಯಾಳಂನ ಖ್ಯಾತ ನಟ ದಿಲ್ಕುರ್ ಸಲ್ಮಾನ್ ಜತೆ ಸೆಕೆಂಡ್ ಶೋ ಚಿತ್ರದಲ್ಲಿ ಅಭಿನಯಿಸಿದ್ದರು.
ಸಿಧು ಆರ್ ಪಿಳ್ಳೈ ಅಕಾಲಿಕ ಸಾವಿಗೆ ನಟ ದಿಲ್ಕುರ್ ಸಲ್ಮಾನ್ ಸಂತಾಪ ಸೂಚಿಸಿದ್ದಾರೆ. ಸಿಧು ಕುಟುಂಬಕ್ಕೆ ದುಃಖ ಬರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.