ಹಂಬಲ್ ಪೊಲಿಟಿಷಿಯನ್ ನೋಗರಾಜ್ ಚಿತ್ರ ತಂಡ 
ಸಿನಿಮಾ ಸುದ್ದಿ

ಸ್ಟಾರ್ ನಟರ ಚಿತ್ರಗಳಿಗೆ ಗೇಟ್ ಪಾಸ್ ನೀಡಿದ ಹಂಬಲ್ ಪೊಲಿಟಿಷಿಯನ್

ಪರಭಾಷಾ ಚಿತ್ರಫಳ ಹಾವಳಿಯಿಂದಾಗಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಲಭಿಸುತ್ತಿಲ್ಲ ಎನ್ನುವ ಮಾತು ಚಿತ್ರೋದ್ಯಮದಲ್ಲಿ ಆಗಾಗ ಕೇಳಿ ಬರುತ್ತದೆ.

ಬೆಂಗಳೂರು: ಪರಭಾಷಾ ಚಿತ್ರಫಳ ಹಾವಳಿಯಿಂದಾಗಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಲಭಿಸುತ್ತಿಲ್ಲ ಎನ್ನುವ ಮಾತು ಚಿತ್ರೋದ್ಯಮದಲ್ಲಿ ಆಗಾಗ ಕೇಳಿ ಬರುತ್ತದೆ. ಆದರೆ ಹಂಬಲ್  ಪೊಲಿಟಿಷಿಯನ್ ನೋಗರಾಜ್' ಚಿತ್ರದ ವಿಚಾರದಲ್ಲಿ ಇದು ಸ್ವಲ್ಪ ಬದಲಾಗಿದೆ. ಒಂದೇ ವಾರದಲ್ಲಿ ಬಹು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗಿದ್ದು ಸಹ ದ್ಯಾನಿಶ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು.  ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದ್ದ ಪವನ್ ಕಲ್ಯಾಣ್ ಅಭಿನಯದ ಚಿತ್ರವನ್ನು ತೆಗೆದು ಹಂಬಲ್ ಪೊಲಿಟಿಷಿಯನ್..... ಪ್ರದರ್ಶನಕ್ಕೆ ಅನುವು ಮಾಡಿ ಕೊಡಲಾಯಿತು.
ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕಿದ ಮೆಚ್ಚುಗೆಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಚಿತ್ರವು ಬಿಡುಗಡೆಯಾದ ಸಮಯದಿಂದಲೂ ಹೌಸ್ ಫುಲ್ ಪ್ರದರ್ಶ್ನ ಕಾಣುತ್ತಿದ್ದು ಇದರಿಂದಾಗಿ ಇನ್ನಷ್ಟು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಪ್ರಾರಂಭದಲ್ಲಿ 90 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಚಿತ್ರ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತಮವಾಗಿರುವ ಕಾರಣ ಇದೀಗ 140 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. "ನಾವು ಹೂಡಿಕೆ ಮಾಡಿದ್ದ ಹಣ ಇದಾಗಲೇ ಹಿಂದಿರುಗಿದ್ದು ಇನ್ನೂ ಮೂರು, ನಾಲ್ಕು ಪಟ್ಟು ಹಣ ಗಳಿಸುವ ನಂಇಕೆ ನಮಗಿದೆ" ಪುಷ್ಕರ್ ಹೇಳಿದ್ದಾರೆ.
ಕೇವಲ ಲಾಭವಷ್ಟೇ ಅಲ್ಲ ದಕ್ಷಿಣದ ಮೆಗಾ ಸ್ಟಾರ್ ಗಳದ ಪವನ್ ಕಲ್ಯಾಣ್, ಸೂರ್ಯ, ವಿಕ್ರಮ್ ರಂತಹಾ ನಟರ ಚಿತ್ರಗಳು ಕಳೆದ ವಾರ ಬಿಡುಗಡೆಯಾಗಿದ್ದು ಸಹ ಹಂಬಲ್ ಪೊಲಿಟಿಷಿಯನ್... ಚೆನ್ನಾಗಿ ಸದ್ದು ಮಾಡುತ್ತಿರುವುದು ಚಿತ್ರತಂಡದ ಖುಷಿಗೆ ಕಾರಣವಾಗಿದೆ.
ಇದೇ ವೇಳೆ ಚಿತ್ರವು ಅಮೆರಿಕಾ, ಆಸ್ಟ್ರೇಲಿಯಾ, ನ್ಜಿಲ್ಯಾಂಡ್ ನಲ್ಲಿ ಸಹ ತೆರೆ ಕಂಡಿದ್ದು ವಿಶ್ವದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಪುಷ್ಕರ್ ಇನ್ನೂ ಒಂದು ಸರ್ ಪ್ರೈಸ್ ಹೊಂದಿದ್ದು ಅದೇನು ಎನ್ನುವುದನ್ನು ಮುಂಬರುವ ದಿನಗಳಲ್ಲಿ ಹೇಳಲಿದ್ದಾರೆ.ಹಂಬಲ್ ಪೊಲಿಟಿಷಿಯನ್... ಚಿತ್ರ ಹಿಂದಿ ಅಥವಾ ಇತರೆ ಭಾಷೆಗೆ ರಿಮೇಕ್ ಆಗುವ ಸುದ್ದಿ ಅದಾಗಿರುವ ಸಾಧ್ಯತೆ ಇದ್ದಿರಬಹುದು. ಆದರೆ ನಾವು ಅದೇನೆಂದು ತಿಳಿಯಲು ಇನ್ನಷ್ಟು ದಿನ ಕಾಯುವುದು ಅನಿವಾರ್ಯ.
ದ್ಯಾನಿಶ್ ನಲ್ಲಿ ಅದ್ಭುತ ನಟನಿದ್ದಾರೆ. ಅವರ ನಟನೆಯಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಅವರಲ್ಲಿದೆ ಎನ್ನುವ ಪುಷಕ್ರ್ "ನಾನು ಯಾವ ಸಮಯದಲ್ಲಾದರೂ ನಟ ದ್ಯಾನಿಶ್ ಮತ್ತು ನಿರ್ದೇಶಕ ಸಾದ್ ಖಾನ್ ಜೊತೆ ಕೆಲಸ ಮಾಡಲು ಸಿದ್ದನಿದ್ದೇನೆ" ಎಂದರು. ಹಂಬಲ್ ಪೊಲಿಟಿಷಿಯನ್... ಚಿತ್ರ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಹೇಮಂತ್ ಎಂ. ರಾವ್ ಮತ್ತು ರಕ್ಷಿತ ಶೆಟ್ಟಿ ಇವರುಗಳ ಜಂಟಿ ನಿರ್ಮಾಣದಲ್ಲಿ ಮೂಡಿಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT