ಕೇರಳದ ತ್ರಿಶೂರ್ ನಲ್ಲಿ ನೆರವೇರಿದ ನಟಿ ಭಾವನಾ ಮದುವೆಯ ಚಿತ್ರಗಳು 
ಸಿನಿಮಾ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟಿ ಭಾವನಾ; ನಿರ್ಮಾಪಕ ನವೀನ್ ಜೊತೆ ವಿವಾಹ

ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ತಾರೆ ಭಾವನಾ ಮತ್ತು ...

ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ತಾರೆ ಭಾವನಾ ಮತ್ತು ಸ್ಯಾಂಡಲ್ ವುಡ್ ಚಿತ್ರ ನಿರ್ಮಾಪಕ ನವೀನ್ ಅವರ ಮದುವೆ ಇಂದು ಬೆಳಗ್ಗೆ 9.30ಕ್ಕೆ ಕೇರಳದ ತ್ರಿಶೂರ್ ನಲ್ಲಿರುವ ತಿರುವಂಬಾಡಿ ದೇವಸ್ಥಾನದಲ್ಲಿ ನೆರವೇರಿತು.
ವಿವಾಹದಲ್ಲಿ ಎರಡೂ ಕುಟುಂಬಸ್ಥರ ಸದಸ್ಯರು ಮತ್ತು ಆಪ್ತ ಸ್ನೇಹಿತ ವರ್ಗದವರು ಭಾಗವಹಿಸಿದ್ದರು. ಭಾವನ ಮೂಲತಃ ತ್ರಿಶೂರ್ ನವರಾಗಿದ್ದಾರೆ. 
ಆಭರಣ ಬಣ್ಣದ ಲೇಬಲ್'ಎಮ್ ಸೀರೆಯಲ್ಲಿ ಮಿಂಚಿದ ವಧು ಭಾವನಾ ಅದಕ್ಕೆ ಒಪ್ಪುವ ಟೆಂಪಲ್ ಜ್ಯುವೆಲ್ಲರಿಯನ್ನು ಧರಿಸಿ ಸುಂದರವಾಗಿ ಕಾಣುತ್ತಿದ್ದರು. 
ಇಂದು ಸಂಜೆಯೇ ತ್ರಿಶೂರ್ ನ ಲುಲು ಕನ್ವೆಷನ್ ಸೆಂಟರ್‌ನಲ್ಲಿ ನಿಗದಿಯಾಗಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ಚಿತ್ರೋದ್ಯಮದವರು ಮತ್ತು ಇತರ ವಿಐಪಿಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ನಟಿ ಭಾವನಾ ಮತ್ತು ನಿರ್ಮಾಪಕ ನವೀನ್  ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಕಳೆದ ವರ್ಷ ಮಾರ್ಚ್ 9ರಂದು ತ್ರಿಶೂರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ನಿಶ್ಚಿತಾರ್ಥ ಕಳೆದ ವರ್ಷದ ಮಾರ್ಚ್‌ನಲ್ಲೇ ನೆರವೇರಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!