ಹಿರಿಯ ನಟ ಚಂದ್ರಶೇಖರ್ 
ಸಿನಿಮಾ ಸುದ್ದಿ

ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯ ತಾರೆ ಕಣ್ಮರೆಯಾಗಿದ್ದಾರೆ. ಎಡ ಕಲ್ಲು ಗುಡ್ಡದ ಮೇಲೆ ಚಿತ್ರ ಖ್ಯಾತಿಯ ಚಂದ್ರಶೇಖರ್​ ಅವರು ಹೃದಯಾಘಾತದಿಂದ ...

ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೊಬ್ಬ ಹಿರಿಯ ತಾರೆ ಕಣ್ಮರೆಯಾಗಿದ್ದಾರೆ. ಎಡ ಕಲ್ಲು ಗುಡ್ಡದ ಮೇಲೆ ಚಿತ್ರ ಖ್ಯಾತಿಯ ಚಂದ್ರಶೇಖರ್​ ಅವರು ಹೃದಯಾಘಾತದಿಂದ ಕೆನಡಾದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆನಡಾದ ಒಟ್ಟಾವಾದ ನಿವಾಸದಲ್ಲಿ ಬೆಳಗಿನ ಜಾವ ನಿಧನರಾಗಿದ್ದಾರೆ. ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿ, ಕ್ರಮೇಣ ಆ ಸಮಸ್ಯೆ ಹೆಚ್ಚಾಗಿತ್ತು. ಚಂದ್ರಶೇಖರ್​ ಅವರು ಪತ್ನಿ ಶೀಲಾ ಮತ್ತು ಮಗಳು ತಾನಿಯಾರನ್ನ ಅಗಲಿದ್ದಾರೆ.
ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಚಂದ್ರಶೇಖರ್ ಅನೇಕ ಕನ್ನಡ ಚಿತ್ರರಂಗದಲ್ಲಿ ನಾಯಕ ಹಾಗೂ ಖಳನಾಯಕನ ಪಾತ್ರಗಳಲ್ಲಿ ಮಿಂಚಿದರು. 
ಬಾಲ ನಟರಾಗಿ ಚಿತ್ರರಂಗ ಪ್ರವೇಶಿಸಿದ ಅವರು ಪಡುವಾರಲ್ಲಿ ಪಾಂಡವರು, ವಂಶವೃಕ್ಷ, ರಾಜ ನನ್ನ ರಾಜ, ಶಿವಲಿಂಗ, ಅಸ್ತಿತ್ವ, ರೋಸ್, ಕಾರಂಜಿ, ಜೀವ, ಪೂರ್ವಾಪರ, ಮಳೆ ಬಂತು ಮಳೆ, ಮಾನಸ ಸರೋವರ ಸೇರಿದಂತೆ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಚಂದ್ರಶೇಖರ್ ಅತೀ ಹೆಚ್ಚು ಖ್ಯಾತಿ ಗಳಿಸಿದ್ದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಎಡಕಲ್ಲು ಗುಡ್ಡದ ಮೇಲೆ ಚಿತ್ರದಿಂದ. ಡಾ. ರಾಜ್​ಕುಮಾರ್​ರಂತಹ ಅವರ ಜೊತೆ ರಾಜ ನನ್ನ ರಾಜ ಚಿತ್ರದಲ್ಲಿ ಚಂದ್ರಶೇಖರ್​ ನಟಿಸಿದ್ದರು.
ಕಳೆದ ವಾರ ತೆರೆ ಕಂಡ 3 ಗಂಟೆ 30 ದಿನ 30 ಸೆಕೆಂಡ್ ಅವರು ನಟಿಸಿದ ಕೊನೆಯ ಸಿನಿಮಾ. 10 ದಿನಗಳ ಹಿಂದಷ್ಟೇ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಬಳಿಕ ಬೆಂಗಳೂರಿನಿಂದ ಕೆನಡಾಗೆ ತೆರಳಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT