ಆಮ್ ಜಾಕ್ಸನ್, ಶಿವರಾಜ್ ಕುಮಾರ್, ಕುರಿ ಪ್ರತಾಪ್ ಮತ್ತು ನಿರ್ದೇಶಕ ಪ್ರೇಮ್ 
ಸಿನಿಮಾ ಸುದ್ದಿ

ರಾಜ್ ಕುಮಾರ್-ಮಂಜುಳಾ ಜೋಡಿಯನ್ನು ವಿಲನ್ ನಲ್ಲಿ ತೆರೆಯ ಮೇಲೆ ತಂದ ಪ್ರೇಮ್

ತಮ್ಮ ಚಿತ್ರಗಳಲ್ಲಿ ಸೃಜನಶೀಲತೆಯನ್ನು ತರುವ ನಿರ್ದೇಶಕ ಪ್ರೇಮ್ ಇದೀಗ ದಿ ವಿಲನ್ ಚಿತ್ರದಲ್ಲಿ ಕೂಡ ಸಂಪೂರ್ಣ ...

ತಮ್ಮ ಚಿತ್ರಗಳಲ್ಲಿ ಸೃಜನಶೀಲತೆಯನ್ನು ತರುವ ನಿರ್ದೇಶಕ ಪ್ರೇಮ್ ಇದೀಗ ದಿ ವಿಲನ್ ಚಿತ್ರದಲ್ಲಿ ಕೂಡ ಸಂಪೂರ್ಣ ವಿಭಿನ್ನ ನೋಟವನ್ನು ತರಲು ಮುಂದಾಗಿದ್ದಾರೆ. 
ಚಿತ್ರದ ನಾಯಕರಾದ ಸುದೀಪ್ ಮತ್ತು ಶಿವರಾಜ್ ಕುಮಾರ್ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡರೆ ಶಿವರಾಜ್ ಕುಮಾರ್ ಮತ್ತು ಆಮಿ ಜಾಕ್ಸನ್ ಪಾತ್ರದಲ್ಲಿ ಹಳೆಯ ಕನ್ನಡ ಚಿತ್ರದ ಮನಸ್ಥಿತಿಯನ್ನು ತರಲು ಮುಂದಾಗಿದ್ದಾರೆ. ರಾಜ್ ಕುಮಾರ್ ಮತ್ತು ಮಂಜುಳ ನಟಿಸಿರುವ ನೀ ನನ್ನ ಗೆಲ್ಲಲಾರೆ ಚಿತ್ರದಿಂದ ಜೀವ ಹೂವಾಗಿದೆ ಭಾವ ಜೇನಾಗಿದೆ ಸಾಲನ್ನು ತರಲು ಯೋಜನೆ ಹಾಕಿಕೊಂಡಿದ್ದಾರೆ.
ಸಿಟಿ ಎಕ್ಸ್ ಪ್ರೆಸ್ ಗೆ ಇದರ ಫೋಟೋ ಲಭ್ಯವಾಗಿದ್ದು ರಾಜ್ ಕುಮಾರ್ ಅವರ ಯುವಕನ ಪಾತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಮಂಜುಳಾ ಅವರ ಯೌವ್ವನದ ಪಾತ್ರದಲ್ಲಿ ಆಮಿ ಜಾಕ್ಸನ್ ಕಾಣಿಸಿಕೊಳ್ಳುತ್ತಿದ್ದಾರೆ.ಇದಕ್ಕಾಗಿ ಶಿವರಾಜ್ ಕುಮಾರ್ ಸಫಾರಿ ಸೂಟ್ ಧರಿಸಿದರೆ ಆಮಿ ಜಾಕ್ಸನ್ ಬಿಳಿ ಸೀರೆ ತೊಟ್ಟುಕೊಂಡಿದ್ದಾರೆ. 
''ನಾನು ಎಷ್ಟೇ ಪ್ರಯತ್ನಪಟ್ಟರೂ ಕೂಡ ಇದರ ಫೋಟೋಗಳನ್ನು ರಹಸ್ಯವಾಗಿಡಲು ಸಾಧ್ಯವಾಗಿಲ್ಲ, ಅದು ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಆದರೆ ಸುದೀಪ್ ಅವರ ಹೊಸ ಅವತಾರವನ್ನು ರಹಸ್ಯವಾಗಿಟ್ಟುಕೊಳ್ಳಬೇಕೆಂದು ಅಂದುಕೊಂಡಿದ್ದೇನೆ ಎನ್ನುತ್ತಾರೆ ನಿರ್ದೇಶಕ ಪ್ರೇಮ್.
ಇದು ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಲ್ಲಿಸುತ್ತಿರುವ ಕಾಣಿಕೆಯಾಗಿದೆ. ರಾಜ್ ಕುಮಾರ್ ಅವರನ್ನು ತೆರೆಯ ಮೇಲೆ ನೋಡಿದಂತೆ ಜನರಿಗೆ ಭಾಸವಾಗಬೇಕು. ಬೆಳಗ್ಗೆಯಿಂದ ಕನಿಷ್ಟ 15 ಬಾರಿ ಈ ದೃಶ್ಯವನ್ನು ನಾನು ವೀಕ್ಷಿಸಿದ್ದು ಆದರೂ ನನಗೆ ತೃಪ್ತಿಯಾಗಿಲ್ಲ. ಆಮಿ ಜಾಕ್ಸನ್ ಅವರು ಇದನ್ನು ಮಾನಿಟರ್ ನಲ್ಲಿ ನೋಡುವಾಗ ಖುಷಿಪಟ್ಟು ನೆಗೆದಿದ್ದರು. ರಾಜ್ ಕುಮಾರ್ ಮತ್ತು ಮಂಜುಳಾ ನಟಿಸಿದ ಹಾಡಿನ ಸಂದರ್ಭವನ್ನು ನೋಡಿ ಅದರಂತೆ ಮಾಡಲು ಪ್ರಯತ್ನಪಟ್ಟಿದ್ದಾರೆ. ಚೆನ್ನಾಗಿ ಅಭಿನಯಿಸಿದ್ದಾರೆ ಎಂದರು.
ಈಗಿನ ಶೆಡ್ಯೂಲ್ ನ ಚಿತ್ರೀಕರಣ ಇನ್ನು ಕೆಲ ದಿನಗಳಲ್ಲಿ ಮುಗಿಯಲಿದ್ದು ಮಾತಿನ ಭಾಗದ ಕೆಲಸವನ್ನು ಮುಗಿಸುವ ಸಿದ್ದತೆಯಲ್ಲಿದ್ದಾರೆ. ಇನ್ನು ನಾಲ್ಕು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿವೆ. ಸಿಆರ್ ಮನೋಹರ್ ನಿರ್ಮಾಣದಲ್ಲಿ ಅದ್ದೂರಿ ತಾರಾಗಣದಲ್ಲಿ ತಯಾರಾಗುತ್ತಿರುವ ವಿಲನ್ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಗಿರ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT