ತಾಯಿಗೆ ತಕ್ಕ ಮಗ ಚಿತ್ರದ ದೃಶ್ಯ, ಬಲ ಚಿತ್ರದಲ್ಲಿ ನಿರ್ದೇಶಕ ಶಶಾಂಕ್ 
ಸಿನಿಮಾ ಸುದ್ದಿ

ಶಶಾಂಕ್ ಮಡಿಲಿಗೆ ತಾಯಿಗೆ ತಕ್ಕ ಮಗ

ನಿರ್ದೇಶಕ ಶಶಾಂಕ್ ಅವರ ಹೋಮ್ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿರುವ ....

ನಿರ್ದೇಶಕ ಶಶಾಂಕ್ ಅವರ ಹೋಮ್ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿರುವ ತಾಯಿಗೆ ತಕ್ಕ ಮಗ ಚಿತ್ರದ ನಿರ್ದೇಶನದಿಂದ ರಘು ಕೋವಿ ಮತ್ತು ವೇದ್ ಗುರು ಹೊರ ನಡೆದಿದ್ದಾರೆ. ಇದೀಗ ಚಿತ್ರದ ನಿರ್ದೇಶನವನ್ನು ಸ್ವತಃ ಶಶಾಂಕ್ ಅವರೇ ವಹಿಸಿಕೊಂಡಿದ್ದಾರೆ.
ಕೃಷ್ಣ ಅಜಯ್ ರಾವ್, ಆಶಿಕಾ ರಂಗನಾಥ್ ಮತ್ತು ಸುಮಲತಾ ಅಭಿನಯದ ತಾಯಿಗೆ ತಕ್ಕ ಮಗ ಶಶಾಂಕ್ ಅವರ ಹೋಮ್ ಬ್ಯಾನರ್ ನಡಿ ತಯಾರಾಗುತ್ತಿರುವ ಮೊದಲ ಚಿತ್ರ. ಆರಂಭದಲ್ಲಿ ಇಬ್ಬರು ನಿರ್ದೇಶಕರು ಚಿತ್ರವನ್ನು ನಿರ್ದೇಶಿಸುತ್ತಿರುವುದು ಎಂದು ಮಾತುಕತೆಯಾಗಿತ್ತು. ಆದರೆ ಇದೀಗ ಅವರಿಬ್ಬರೂ ಪ್ರಾಜೆಕ್ಟ್ ನಿಂದ ಹೊರಬಂದಿದ್ದು ಶಶಾಂಕ್ ಅವರೇ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ತಾಯಿಗೆ ತಕ್ಕ ಮಗ ಚಿತ್ರ ಆರಂಭವಾಗುವ ಹೊತ್ತಿಗೆ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರವನ್ನು ನಿರ್ದೇಶನ ಮಾಡುವ ಮಾತುಕತೆಯನ್ನು ನಡೆಸಿದ್ದರು ನಿರ್ದೇಶಕ ಶಶಾಂಕ್. ಇದೀಗ ಆ ಚಿತ್ರದ ಶೂಟಿಂಗ್ ಆರಂಭ ಮುಂದೆ ಹೋಗಿರುವುದರಿಂದ ತಾಯಿಗೆ ತಕ್ಕ ಮಗ ನಿರ್ದೇಶನಕ್ಕೆ ಶಶಾಂಕ್ ಅವರಿಗೆ ಸಮಯ ಹೊಂದಿಸಿಕೊಳ್ಳಲು ಸುಲಭವಾಗಿದೆ. 
ಪುನೀತ್ ರಾಜ್ ಕುಮಾರ್ ಅವಪು ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಪವನ್ ಒಡೆಯರ್ ನಿರ್ದೇಶನದ ಚಿತ್ರ ಮುಗಿದ ನಂತರವಷ್ಟೇ ಶಶಾಂಕ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.
ಶಶಾಂಕ್ ಅವರ ಈ ನಿರ್ಧಾರ ತಾಯಿಗೆ ತಕ್ಕ ಮಗ ಚಿತ್ರದ ಕಲಾವಿದರಿಗೆ ಕೂಡ ಖುಷಿಯಾಗಿದೆ. ನನ್ನ ಹೋಮ್ ಬ್ಯಾನರ್ ನಡಿ ತಯಾರಾಗುತ್ತಿರುವ ಚಿತ್ರ ಮೊದಲನೆಯದಾಗಿರುವುದರಿಂದ ನೀವೇ ಏಕೆ ನಿರ್ದೇಶನ ಮಾಡಬಾರದು ಎಂದು ನನ್ನ ಸ್ನೇಹಿತರು, ಹಿತೈಷಿಗಳು ಹೇಳುತ್ತಿದ್ದರು. ಆದರೆ ಪುನೀತ್ ರಾಜ್ ಕುಮಾರ್ ಸಿನಿಮಾವನ್ನು ನಿರ್ದೇಶಿಸಬೇಕಾಗಿದ್ದರಿಂದ ನನಗೆ ಎರಡೂ ಚಿತ್ರಗಳನ್ನು ಏಕಕಾಲಕ್ಕೆ ನಿರ್ದೇಶನ ಮಾಡಲು ಸಾಧ್ಯವಾಗಿರಲಿಲ್ಲ. ನನ್ನ ಹೋಮ್ ಬ್ಯಾನರ್ ನಡಿ ತಯಾರಾಗುತ್ತಿರುವ ಮೊದಲ ಚಿತ್ರವನ್ನು ನಾನೇ ನಿರ್ದೇಶನ ಮಾಡಬೇಕೆಂದು ಹಣೆಯಲ್ಲಿ ಬರೆದಿತ್ತು ಎನಿಸುತ್ತದೆ. ಹೀಗಾಗಿ ಅದು ಸಾಧ್ಯವಾಗಿದೆ. ಪುನೀತ್ ಸಿನಿಮಾ ಮುಂದೆ ಹೋಗಿರುವುದರಿಂದ ನನಗೆ ಈಗ ಹಾದಿ ಸುಗಮವಾಯಿತು ಎನ್ನುತ್ತಾರೆ ಶಶಾಂಕ್. 
ತಾಯಿಗೆ ತಕ್ಕ ಮಗ ಚಿತ್ರಕ್ಕೆ ಜುಡ ಸ್ಯಾಂಡಿಯವರ ಸಂಗೀತ ಮತ್ತು ಶೇಖರ್ ಚಂದ್ರು ಛಾಯಾಗ್ರಹಣ ಒದಗಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT