ಕೃಷಿ ತಾಪಂಡ 
ಸಿನಿಮಾ ಸುದ್ದಿ

'ಕನ್ನಡಕ್ಕಾಗಿ ಒಂದನ್ನು ಒತ್ತಿ' ಸಿನಿಮಾದಲ್ಲಿ ನನ್ನ ಪಾತ್ರ ಖುಷಿ ನೀಡಿದೆ : ಕೃಷಿ ತಾಪಂಡ

ಕುಶಾಲ್ ಗೌಡ ನಿರ್ದೇಶನದ ಕನ್ನಡಕ್ಕಾಗಿ ಒಂದನ್ನು ಒತ್ತಿ ತಮ್ಮ ವೃತ್ತಿ ಜೀವನದಲ್ಲಿ ವಿಶೇಷ ಚಿತ್ರ ಎಂದು ನಟಿ ಕೃಷಿ ...

ಕುಶಾಲ್ ಗೌಡ ನಿರ್ದೇಶನದ ಕನ್ನಡಕ್ಕಾಗಿ ಒಂದನ್ನು ಒತ್ತಿ ತಮ್ಮ ವೃತ್ತಿ ಜೀವನದಲ್ಲಿ ವಿಶೇಷ ಚಿತ್ರ ಎಂದು ನಟಿ ಕೃಷಿ ತಾಪಂಡ ಭಾವಿಸಿದ್ದಾರೆ. ನಾಡಿದ್ದು ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದ್ದು ಹಲವು ಕಲಾವಿದರನ್ನು ಚಿತ್ರ ಒಳಗೊಂಡಿದ್ದರೂ ಕೂಡ ನಾಯಕಿಯ ಸುತ್ತ ಕಥೆ ಸುತ್ತಿಕೊಂಡಿದೆ ಎನ್ನುತ್ತಾರೆ.

ಈ ಚಿತ್ರದಲ್ಲಿ ನಾನು ಎರಡು ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಒಂದು, ಕಾಲೇಜಿಗೆ ಹೋಗುವ ಯುವತಿ ಪಾತ್ರವಾಗಿದ್ದು ಇನ್ನೊಂದನ್ನು ಕುತೂಹಲವಾಗಿ ಇರಿಸಲಾಗಿದೆ. ಅದು ಚಿತ್ರ ಬಿಡುಗಡೆಯಾದ ದಿವ ಗೊತ್ತಾಗಲಿದೆ ಎನ್ನುತ್ತಾರೆ ಕೃಷಿ. ನಿರ್ದೇಶಕರು ತಮಗೆ ವಿಶಿಷ್ಟ ಪಾತ್ರ ಕೊಟ್ಟಿದ್ದಾರೆ ಎಂದು ಖುಷಿಯಾಗಿದ್ದಾರೆ ಅವರು.

ನನ್ನ ಪಾತ್ರಗಳಲ್ಲಿ ಪ್ರಯೋಗ ಮಾಡುವುದೆಂದರೆ ನನಗೆ ಇಷ್ಟ. ಆದರೆ ಅನೇಕ ನಿರ್ದೇಶಕರು ಬಬ್ಲಿ ಪಾತ್ರಗಳನ್ನು ಹಿಡಿದುಕೊಂಡು ಕಥೆ ಹೇಳಿಕೊಂಡು ಬರುತ್ತಾರೆ. ನನ್ನ ಆಫ್ ಸ್ಕ್ರೀನ್ ನೋಟ ಅಂತಹ ಪಾತ್ರಗಳಿಗೆ ಹೊಂದಿಕೆಯಾಗಬಹುದೆಂದು ಎಂದು ಭಾವಿಸುವುದಾಗಿರಬಹುದು. ಸರಿಯಾದ ಪಾತ್ರಗಳು ಸಿಗುವ ಚಿತ್ರಗಳಿಗಾಗಿ ನಾನು ಕಾಯುತ್ತಿದ್ದೇನೆ. ಅದು ನನ್ನ ವೃತ್ತಿ ಜೀವನದಲ್ಲಿ ಮೈಲಿಗಲ್ಲಾಗಿರಬೇಕು. ಕನ್ನಡಕ್ಕಾಗಿ ಅಂತಹ ಪಾತ್ರ ಹೊಂದಿರುವ ಚಿತ್ರ ಎಂದು ಭಾವಿಸುತ್ತೇನೆ ಎನ್ನುತ್ತಾರೆ ಕೃಷಿ.

ಇದೊಂದು ಲವ್ ಸ್ಟೋರಿ. ಅದರಲ್ಲಿ ಹಲವು ಟ್ವಿಸ್ಟ್ ಗಳು ಬರುತ್ತವೆ. ಇದು ರಿಮೇಕ್ ಚಿತ್ರವಲ್ಲ ಎಂದು ಸ್ಪಷ್ಟನೆ ನೀಡಿದರು. ತಮಿಳಿನಲ್ಲಿ ಇಂತಹದ್ದೇ ಶೀರ್ಷಿಕೆಯ ಚಿತ್ರವೊಂದಿದ್ದು ಆ ಚಿತ್ರದ ರಿಮೇಕ್ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ಸ್ವಮೇಕು ಸಿನಿಮಾ ಎಂದರು.
ಕೃಷಿಗೆ ಜೋಡಿಯಾಗಿ ಶತಮರ್ಶನ್ ಅವಿನಾಶ್ ನಟಿಸಿದ್ದರೆ ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಕೂಡ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel