ರಶ್ಮಿಕಾ ಮಂದಣ್ಣ 
ಸಿನಿಮಾ ಸುದ್ದಿ

'ವಿೃಥ್ರಾ' ಚಿತ್ರದಲ್ಲಿ ತನಿಖಾಧಿಕಾರಿಯಾಗಿ ರಶ್ಮಿಕಾ ಮಂದಣ್ಣ!

ಸ್ಯಾಂಡಲ್'ವುಡ್'ನ ಹಾಲುಗೆನ್ನೆಯ ಚೆಲುವೆ, ಬಹ ರಶ್ಮೀಕಾ ಮಂದಣ್ಣ ಅವರು 'ವಿೃಥ್ರಾ' ಚಿತ್ರದಲ್ಲಿ ತನಿಖಾಧಿಕಾರಿಯಾಗಿ ಪ್ರಮೋಶನ್ ಪಡೆದಿದ್ದಾರೆ.

ಸ್ಯಾಂಡಲ್'ವುಡ್'ನ ಹಾಲುಗೆನ್ನೆಯ ಚೆಲುವೆ, ಬಹ ರಶ್ಮೀಕಾ ಮಂದಣ್ಣ ಅವರು 'ವಿೃಥ್ರಾ' ಚಿತ್ರದಲ್ಲಿ ತನಿಖಾಧಿಕಾರಿಯಾಗಿ ಪ್ರಮೋಶನ್ ಪಡೆದಿದ್ದಾರೆ. 
ಹೊಸ ನಿರ್ದೇಶಕ ಗೌತಮ್ ಅಯ್ಯರ್ ಅವರ ಪ್ರಥಮ ಪ್ರಯತ್ನಕ್ಕೆ ಎಸ್ ಎಂದಿರುವ ರಶ್ಮಿಕಾ ಅವರು, ಚಿತ್ರದಲ್ಲಿ ಕ್ರೈ ಬ್ರಾಂಚ್ ಸಬ್ ಇನ್ಸ್'ಪೆಕ್ಟರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 
ಇದಲ್ಲದೆ ಚಿತ್ರದಲ್ಲಿ ರಶ್ಮಿಕಾ ಅವರು ಚೆಸ್ ಪ್ಲೇಯರ್ ಕೂಡ ಆಗಿದ್ದು, ಹೀಗಾಗಿ ಚಿತ್ರವೊಂದು ಮೈಂಡ್ ಗೇಮ್ ಎಂದೇ ಹೇಳಲಾಗುತ್ತಿದೆ. 
ಕಾಲ್ಪನಿಕ ಕಥೆಯ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರದ ತಂಡ ಚಿತ್ರದ ಅಧಿಕೃತ ಪೋಸ್ಟರ್'ನ್ನು ಬಿಡುಗಡೆ ಮಾಡಿದೆ. ಚಿತ್ರಕ್ಕೆ ವಿೃಥ್ರಾ ಎಂದು ಶೀರ್ಷಿಕೆ ನೀಡಲಾಗಿದೆ. ಚಿತ್ರಕ್ಕೆಂದೇ ಕಾಲ್ಪನಿಕ ಪದವನ್ನು ಹುಟ್ಟುಹಾಕಲಾಯಿತು. ಚಿತ್ರದ ಶೀರ್ಷಿಕೆಯೇ ಕಥೆಯನ್ನು ಹೇಳುತ್ತದೆ. ಆದರೆ, ಶೀರ್ಷಿಕೆಯ ಅರ್ಥವನ್ನು ಹೇಳಲು ಹೋದರೆ, ಚಿತ್ರದ ಕಥೆ ಹೇಳಿದಂತಾಗುತ್ತದೆ. ಚಿತ್ರ ನೋಡಿದ ಬಳಿಕ ವೀಕ್ಷಕರಿಗೆ ಶೀರ್ಷಿಕೆಗೂ ಚಿತ್ರಕ್ಕೂ ಇರುವ ನಂಟನ್ನು ತಿಳಿಯಲಿದೆ. ಅಲ್ಲಿಯವರೆಗೂ ಸ್ವಲ್ಪ ಕುತೂಹಲಗಳಿರಲಿ ಎಂದು ನಿರ್ದೇಶಕ ಗೌತಮ್ ಅವರು ಹೇಳಿದ್ದಾರೆ. 
ಆಗಸ್ಟ್ ಮೊದಲ ವಾರದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ತಲೆಯಲ್ಲಿ ಏನಾದರೂ ಹೊಳೆಯುತ್ತಿದ್ದಂತೆಯೇ ಕುಳಿತು ಕಥೆ ಬರೆಯಲು ಆರಂಭಿಸುತ್ತೇನೆ. ಚಿತ್ರದ ಸ್ಕ್ರೀಪ್ಲೇಗೆ ಕೆಲ ಲೇಖನಗಳು ಸಹಾಯ ಮಾಡಿವೆ. ನನ್ನ ಕಥೆಗೆ ಇದೇ ಅವಿಭಾಜ್ಯ ಅಂಶವಾಗಿದೆ ಎಂದು ತಿಳಿಸಿದ್ದಾರೆ. 
ನಟ ರಕ್ಷಿತ್ ಶೆಟ್ಟಿಯವರ ನಿರ್ಮಾಣ ಸಂಸ್ಥೆ ಪರಮ್ ವಾಹ್ ಸ್ಟುಡಿಯೋದಲ್ಲಿ ನಾನು ಕೆಲಸ ಮಾಡುತ್ತಿದ್ದೆ. 777 ಟಾರ್ಲಿ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದೆ. ಇದೇ ಸಂದರ್ಭದಲ್ಲಿ ರಶ್ಮಿಕಾ ಅವರಿಗೆ ಹೊಂದಾಣಿಕೆಯಾಗುವ ಪಾತ್ರವೊಂದು ನನ್ನ ತಲೆಯಲ್ಲಿತ್ತು. ಕಿರಿಕ್ ಪಾರ್ಟಿ ಚಿತ್ರದಲ್ಲಿ ರಶ್ಮಿಕಾ ಅವರು ಸಾನ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಭಿನ್ನ ಪಾತ್ರದಲ್ಲಿ ಅವರು ತೋರಿಸುವ ಕುರಿತು ಆಲೋಚನೆ ಮಾಡಿದ್ದೆ. ರಶ್ಮಿಕಾ ಅವರ ಮುಖದಲ್ಲಿ ಮುಗ್ಧತೆಯಿದ. ಅಲ್ಲದೆ, ಅತ್ಯುತ್ತಮ ನಟಿ ಕೂಡ ಆಗಿದ್ದಾರೆ. ಆಫ್ ಸ್ಕ್ರೀನ್ ನಲ್ಲಿಯೂ ರಶ್ಮಿಕಾ ಅವರನ್ನು ನಾನು ನೋಡಿದ್ದರಿಂದ ಅವರನ್ನು ನಡವಳಿಕೆಗೆ ಹೊಂದುವಂತಹ ಪಾತ್ರವನ್ನು ರಚನೆ ಮಾಡಿದ್ದೆ. 
ಪಾತ್ರಗಳ ಆಯ್ಕೆ. ತಂತ್ರಜ್ಞರ ಅಂತಿಮ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವತ್ತ ನಿರ್ಮಾಪಕರು ಚಿಂತನೆಗಳನ್ನು ನಡೆಸುತ್ತಿದ್ದಾರೆ. ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT