ಹೈದರಾಬಾದ್: ಆಂಧ್ರ ಪ್ರದೇಶ ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಜೀವನಾಧಾರಿತ ತೆಲುಗು ಸಿನಿಮಾದಲ್ಲಿ ಮಮ್ಮೂಟಿ ನಟಿಸಿದ್ದು ಸಿನಿಮಾ ಟೀಸರ್ ಬಿಡುಗಡೆಯಾಗಿದೆ.
ಯಾತ್ರಾ ಎಂಬುದು ಸಿನಿಮಾ ಟೈಟಲ್ ಆಗಿದ್ದು ವೈಎಸ್ ಆರ್ ಎಂದೇ ಪ್ರಸಿದ್ಧರಾಗಿದ್ದರು. ವೈಎಸ್ ಆರ್ ಜನ್ಮ ದಿನಾಚರಣೆಯಂದು ಟೀಸರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೇವಲ 24 ಗಂಟೆಗಳ ಅವಧಿಯಲ್ಲಿ ಈವರೆಗೂ 903,595 ಮಂದಿ ವೀಕ್ಷಕರು ಟೀಸರ್ ವೀಕ್ಷಣೆ ಮಾಡಿದ್ದಾರೆ.
ಮಮ್ಮೂಟಿ ರಾಜಕಾರಣಿಗಳ ಟ್ರೇಡ್ ಮಾರ್ಕ್ ಆದ ಬಿಳಿ ಬಟ್ಟೆ ಧರಿಸಿದ್ದು ವೈಎಸ್ ಆರ್ ಅವರಂತೆಯೇ ಕಾಣುತ್ತಾರೆ, ನಾನು ತಿಳಿದುಕೊಳ್ಳಬೇಕು, ನಾನು ಕೇಳಬೇಕು, ಹಾಗೂ ಕಡಪದ ಪ್ರತಿಯೊಂದು ಮನೆಗೂ ಭೇಟಿ ನೀಡಬೇಕು, ಅವರ ಹೃದಯದ ಬಡಿತವನ್ನು ನಾನು ಕೇಳಬೇಕು, ಎಂದು ಹೇಳಿದ್ದಾರೆ, ನಾನು ಪಾದಯಾತ್ರೆ ಮಾಡಬೇಕು, ಒಂದು ವೇಳೆ ಅದರಲ್ಲಿ ಯಶಸ್ವಿಯಾದರೇ ಮೊಂಡುತನ , ವಿಫಲವಾದರೇ ಮೂರ್ಖತನ ಎಂದು ನನ್ನನ್ನು ಕರೆಯುತ್ತಾರೆ ಎಂದು ಹೇಳಿ ಮಮ್ಮೂಟಿ ಮನೆಯಿಂದ ಹೊರ ಬರುತ್ತಾರೆ.
ಯಾತ್ರಾ ಟೀಸರ್ ಒಂದು ಹೆಜ್ಜೆ ಗುರುತಿನ ಲೋಗೋ ಜೊತೆಗೆ ಕೊನೆಗೊಳ್ಳುತ್ತದೆ. 2003 ರಲ್ಲಿ ವೈಎಸ್ ಆರ್ ಇಡೀ ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡಿದ್ದರು, 1475 ಕಿಮೀ ಕಾಲ್ನಡಿಗೆ ಮಾಡಿದ್ದರು, ಹೀಗಾಗಿ 2004 ಮತ್ತು 2009 ರಲ್ಲಿ ರಲ್ಲಿ ನಡೆದ ಚುನಾವಣೆಯಲ್ಲಿ ವಿಜಯ ಸಾಧಿಸಿದರು.
ಮತ್ತೊಂದು ವಿಶೇಷವೆಂದರೇ ಮಮ್ಮೂಟಿ ತೆಲುಗಿನಲ್ಲಿ ಡಬ್ಬಿಂಗ್ ಕೂಡ ಮಾಡಿದ್ದಾರೆ. ಆನಂದೋ ಬ್ರಹ್ಮ ಖ್ಯಾತಿಯ ಮಹಿ ಆರ್ ರಾಘವ್ ಯಾತ್ರಾ ನಿರ್ದೇಶಿಸಿದ್ದು, ವಿಜಯ್ ಚಿಲ್ಲಾ ಮತ್ತು ಶಶಿ ದೇವಿರೆಡ್ಡಿ ನಿರ್ಮಾಣ ಮಾಡಿದ್ದಾರೆ,
ರಾನ್ ರಮೇಶ್, ಅನಸೂಯ, ಪೊಸನಿ ಕೃಷ್ಣ ಮುರುಳಿ, ವಿನೋದ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos