ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ದಿ ವಿಲ್ಲನ್ ಸಿನಿಮಾ ಹಾಡು ರೀಲಿಸ್ ಆಗಿದ್ದು ಯೂ ಟ್ಯೂಬ್ ನಲ್ಲಿ ಭಾರೀ ಹವಾ ಮೂಡಿಸಿದೆ.
ಪ್ರೇಮ್ ಸಾಹಿತ್ಯ ಬರೆದಿರುವ ಮಚ್ಚು ಗಿಚ್ಚು ಹಿಡಿದವನಲ್ಲ ಎಂಬ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಶಂಕರ್ ಮಹದೇವನ್ ಮತ್ತು ಬಸ್ರು ಹಿನ್ನೆಲೆ ಗಾಯನ ನೀಡಿದ್ದಾರೆ.
ಹಾಡು ಬಿಡುಗಡೆಯಾದ 3 ಗಂಟೆಯಲ್ಲಿ ಬರೋಬ್ಬರಿ 2 ಲಕ್ಷ ಜನ ವಿಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.