ಮುಮ್ಮಟ್ಟಿ ಹುಡುಗಿಯಾಗಿದ್ದರೆ ಅವರನ್ನು ರೇಪ್ ಮಾಡ್ತಿದ್ದೆ! ಹೀಗೆಂದವರಾರು?
ಚೆನ್ನೈ: "ನಟ ಮುಮ್ಮಟ್ಟಿ ಏನಾದರೂ ಯುವಕನಾಗಿದ್ದರೆ ಅಥವಾ ಅವರೇನಾದರೂ ಹುಡುಗಿಯಾದ್ದರೆ ನಾನು ಅವರ ಪ್ರೇಮಪಾಶಕ್ಕೆ ಸಿಲುಕುತ್ತಿದ್ದೆ, ಇಲ್ಲದೆಹೋದಲ್ಲಿ ನಾನು ಅವರನ್ನು ನಿಜವಾಗಿಯೂ ರೇಪ್ ಮಾಡುತ್ತಿದ್ದೆ" ನಿರ್ದೇಶಕ ಮಿಶ್ಕಿನ್ ಹೇಳಿದ್ದಾರೆ.
ಭಾನುವಾರ ಚೆನ್ನೈನಲ್ಲಿ ನಡೆದ ಹಿರಿಯ ನಟ ಮುಮ್ಮಟ್ಟಿ ಅಭಿನಯದ ತಮಿಳು ಚಿತ್ರ’ ಪೆರನ್ಬು’ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. :ಈ ಚಿತ್ರದಲ್ಲಿ ಮುಮ್ಮಟ್ಟಿಯವರ ಅಭಿನಯ ಅದೆಷ್ಟು ಪಕ್ವವಾಗಿದೆ ಎಂದರೆ ನಾನೇನಾದರೂ ಚಿಕ್ಕವನಾಗಿದ್ದು ಮುಮ್ಮಟ್ಟಿ ಯುವತಿಯಾಗಿದ್ದರೆ ನಾನು ಅವರನ್ನು ಅತ್ಯಾಚಾರ ಮಾಡುತ್ತಿದ್ದೆ"
ಹಿರಿಯ ನಟನನ್ನು ಹೊಗಳುವ ಭರದಲ್ಲಿ ಮಿಶ್ಕಿನ್ ಈ ರೀತಿ ಹೇಳಿದ್ದು. "ಮುಮ್ಮಟ್ಟಿ, ನಿವು ಶ್ರೇಷ್ಠ ನಟ ಎನ್ನುವುದನ್ನು ಸಾಬೀತುಪಡಿಸುವ ದೃಶ್ಯವೊಂದು ಈ ಚಿತ್ರದಲ್ಲಿದೆ. ನಾನು ಈ ಮಾತನ್ನು ಹೇಳುಇವುದನ್ನು ಗಮನವಿಟ್ಟು ಕೇಳಿ. ಈ ಚಿತ್ರದಲ್ಲಿ ಇನ್ನಾರಾದರೂ ಈ ಪಾತ್ರ ಮಾಡಿದ್ದರೆ ನನಗೆ ಭಯವಾಗುತ್ತಿತ್ತು.ಈ ವಿಚಾರವಾಗಿ ರಾಮ್ ಅವರನ್ನು ನಾನು ಅಭಿನಂದಿಸುವೆ.ಮುಮ್ಮಟ್ಟಿ ಯುವತಿಯಾಗಿದ್ದರೆ ನಾನು ಅವರ ಪ್ರೇಮದಲ್ಲಿ ಬೀಳುತ್ತಿದ್ದೆ ಇಲ್ಲವೆ ಅತ್ಯಾಚಾರ ಮಾಡುತ್ತಿದ್ದೆ.. ಅವರೊಬ್ಬ ಉತ್ತಮ ನಟ"
ರಾಮ್ ನಿರ್ದೇಶನದ ಪೆರನ್ಬು ಚಿತ್ರ ದಲ್ಲಿ ಮಲಯಾಳಿ ನಟಿ ಅಂಜಲಿ ಅಮೀರ್ ನಾಯಕಿಯಾಗಿದ್ದಾರೆ.ಆಡಿಯೋ ಬಿಡುಗಡೆಕಾರ್ಯಕ್ರಮದಲ್ಲಿ ಸತ್ಯರಾಜ್, ಮುಮ್ಮಟ್ಟಿ, ಅಂಜಲಿ ಅಮೀರ್ ಮೊದಲಾದವರು ಭಾಗವಹಿಸಿದ್ದರು.
ನಿರ್ದೇಶಕ ಮಿಶ್ಕಿನ್ ಅವರ ಹಾಸ್ಯ ಚಟಾಕಿಗೆ ಪ್ರೇಕ್ಷಕರು ದೊಡ್ಡ ಸದ್ದಿನೊಡನೆ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ.