ಬೆಂಗಳೂರು: ಅಭಿಷೇಕ್ ಚೊಚ್ಚಲ ಅಭಿನಯದ ಅಮರ್ ಸಿನಿಮಾ ಕೊಯಂಬತ್ತೂರಿನಲ್ಲಿ ಶೂಟಿಂಗ್ ಮುಗಿಸಿ ನಮ್ಮ ಊರಿಗೆ ಶಿಫ್ಟ್ ಆಗಿದೆ. ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ನಾಗಶೇಖರ್ ನಿರ್ದೇಶನ ಸಿನಿಮಾ ಸದ್ಯ ಆಚಾರ್ಯ ಪಾಠಶಾಲೆಯಲ್ಲಿ ನಡೆಯುತ್ತಿದೆ,
ಕಳೆದ 10 ದಿನಗಳಿಂದ ಇಲ್ಲಿ ಫೈಟಿಂಗ್ ಸೀನ್ ಶೂಟಿಂಗ್ ನಡೆಯುತ್ತಿದ್ದು ಅನ್ಬಾರಿವ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
ತಮಿಳು, ತೆಲುಗು ಮತ್ತು ಮಲಯಾಳಿ ಸಿನಿಮಾ ಹಾಗೂ ಕಬಾಲಿ ಚಿತ್ರಕ್ಕೂ ಸ್ಟಂಟ್ ಮಾಡಿದ್ಜು ಅಭಿಷೇಕ್ ಸಿನಿಮಾಗೂ ಸಾಹಸ ನಿರ್ದೇಶನ ಮಾಡಿದ್ದಾರೆ,
ಇಬ್ಬರು ಸ್ಟಂಟ್ ನಿರ್ದೇಶಕರು ಅಮರ್ ಚಿತ್ರದ ಸೆಟ್ ನಲ್ಲಿದ್ದು, ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದ್ದು, ಮಣಿಪಾಲ್ ಮಲ್ಪೆ ಮತ್ತು ಮಡಿಕೇರಿಗಳಲ್ಲಿ ಚಿತ್ರೀಕರಣ ನಡೆಯಲಿದೆ. ತಾನ್ಯ ಹೊಪೆ ಮತ್ತು ಸುಧಾರಾಣಿ ಅಭಿನಯಿಸಿದ್ದಾರೆ. ಅರ್ಜನ್ ಜನ್ಯ ಸಂಗೀತ ನೀಡಿದ್ದಾರೆ.