ಸಿನಿಮಾ ಸುದ್ದಿ

ಅನಾರೋಗ್ಯದಿಂದ ಬೇಸತ್ತು ಖ್ಯಾತ ಹಿರಿಯ ನಟಿಯ ಮಗಳು ಆತ್ಮಹತ್ಯೆಗೆ ಶರಣು

Srinivasamurthy VN
ಹೈದರಾಬಾದ್​: ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಅನ್ನಪೂರ್ಣಾ ಅವರ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೂಲಗಲ ಪ್ರಕಾರ ಅನ್ನಪೂರ್ಣ ಅವರ ಪುತ್ರಿ 35 ವರ್ಷದ ಕೀರ್ತಿ ಎಂಬುವವರು ತಮ್ಮ ಹೈದರಾಬಾದ್ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. 35 ವರ್ಷದ ಕೀರ್ತಿ ಅವರು ಈಗ್ಗೆ 3 ಮೂರು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಅವರಿಗೆ ಒಂದು ಹೆಣ್ಣು ಮಗು ಕೂಡ ಇತ್ತು. 
ಬಂಜಾರ ಪೊಲೀಸ್​ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಪದೇ ಪದೇ ಅನಾರೋಗ್ಯದಿಂದ ಬೇಸತ್ತಿದ್ದ ಕೀರ್ತಿ
ಇನ್ನು ಪ್ರಾಥಮಿಕ ಮಾಹಿತಿಗಳ ಆಧಾರದನ್ವಯ ಕೀರ್ತಿ ಅವರು ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದರಂತೆ. ಬಹುಶ- ಇದು ಅವರ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಮೃತ ದೇಹವನ್ನು ಓಸ್ಮಾನಿಯಾ ಸಾಮಾನ್ಯ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಸ್ಥಳಾಂತರಿಸಲಾಗಿದೆ. ಸೆಕ್ಷನ್​ 174 ಅಪರಾಧ ಪ್ರಕ್ರಿಯೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. 
SCROLL FOR NEXT