ಶ್ರೀಮನ್ನಾರಾಯಣ ಚಿತ್ರದ ಟೀಸರ್
ಬೆಂಗಳೂರು: ಕಿರಿಕ್ ಪಾರ್ಟಿ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ನಟ ರಕ್ಷಿತ್ ಶೆಟ್ಟಿ 35ನೇ ವಸಂತಕ್ಕೆ ಕಾಲಿಟ್ಟದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ನಟ ರಕ್ಷಿತ್ ಪೊಲೀಸ್ ಅಧಿಕಾರಿಯ ಗೆಟಪ್ ನಲ್ಲಿದ್ದು, ಕಳ್ಳರ ಹಿಡಿಯಲು ಹೋಗಿ ಅವರೇ ಸಿಕ್ಕಿಬೀಳುವ ಹಾಸ್ಯಮಯ ದೃಶ್ಯ ಚಿತ್ರದ ಕುರಿತ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ದಬಾಂಗ್ ಸ್ಟೈಲ್ ನಲ್ಲಿ ರಕ್ಷಿತ್ ಶೆಟ್ಟಿ ಎಂಟ್ರಿ ಕೊಟ್ಟರೂ, ಗ್ಯಾಂಗ್ ವೊಂದನ್ನು ಹಿಡಿಯುವಾಗ ತಾವೇ ಸಿಕ್ಕಿ ಬೀಳುತ್ತಾರೆ. ಪರೋಡಿ ಪೊಲಿಸ್ ಲುಕ್ ನಲ್ಲಿರುವ ರಕ್ಷಿತ್ ಗೆ ಆ ಗ್ಯಾಂಗ್ ಸದಸ್ಯರು ಕೋಳ ತೊಡಿಸುತ್ತಾರೆ.
ಬಳಿಕ ರಕ್ಷಿತ್ ತಮಗೆ ತಾವೇ ಜನ್ಮದಿನ ಶುಭ ಕೋರುತ್ತಾರೆ. ಈ ಟೀಸರ್ ಮೂಲಕ ಈ ಚಿತ್ರ ಪಕ್ಕಾ ಹಾಸ್ಯಮಯ ಚಿತ್ರ ಎಂಬ ಸುಳಿವನ್ನು ಚಿತ್ರತಂಡ ಬಿಟ್ಟುಕೊಟ್ಟಿದ್ದು, ಪ್ರಸ್ತುತ ಯೂಟ್ಯೂಬ್ ನಲ್ಲಿ ಟೀಸರ್ ಅನ್ನು 92 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇನ್ನು ಚಿತ್ರ ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics