’ಚಿಲ್ಲಂ’ ನಲ್ಲಿ ಮನೋರಂಜನ್ ಫಸ್ಟ್ ಲುಕ್ ಹೀಗಿದೆ ನೋಡಿ 
ಸಿನಿಮಾ ಸುದ್ದಿ

’ಚಿಲ್ಲಂ’ ನಲ್ಲಿ ಮನೋರಂಜನ್ ಫಸ್ಟ್ ಲುಕ್ ಹೀಗಿದೆ ನೋಡಿ

ಮನೋರಂಜನ್ ಅಭಿನಯದ ’ಚಿಲ್ಲಂ’ ಚಿತ್ರದ ಚಿತ್ರೀಕರಣ ಕಳೆದ ಐದು ದಿನಗಳಿಂಡ ಬೆಂಗಳೂರಿನಲ್ಲಿ ನಡೆಯುತ್ತಿದ್ದು ಮಹಿಳಾ ನಿರ್ದೇಶಕಿ ಜೆ. ಚ್ಂದ್ರಕಲಾ ಈ ಚಿತ್ರದ ಕುರಿತಂತೆ.....

ಬೆಂಗಳೂರು: ಮನೋರಂಜನ್ ಅಭಿನಯದ ’ಚಿಲ್ಲಂ’ ಚಿತ್ರದ ಚಿತ್ರೀಕರಣ ಕಳೆದ ಐದು ದಿನಗಳಿಂಡ ಬೆಂಗಳೂರಿನಲ್ಲಿ ನಡೆಯುತ್ತಿದ್ದು  ಮಹಿಳಾ ನಿರ್ದೇಶಕಿ ಜೆ. ಚ್ಂದ್ರಕಲಾ ಈ ಚಿತ್ರದ ಕುರಿತಂತೆ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ. ವಿಶಿಷ್ಟ ಕಥಾ ಹಂದರವುಳ್ಳ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಅಚ್ಚರಿ ಇಲ್ಲ ಎನ್ನುವ ನಿರ್ದೇಶಕಿ ತಾವು ಸರಿಯಾದ ದಿಕ್ಕಿನತ್ತ ಸಾಗುತ್ತಿದ್ದೇನೆಂದು ಹೇಳುತ್ತಾರೆ.
ಪ್ರಿಯಾಂಕಾ ತಿಮ್ಮಯ್ಯ ನಾಯಕಿಯಾಗಿರುವ ಈ ಚಿತ್ರದಲ್ಲಿ ಬಾಲಿವುಡ್ ನಟ ನಾನಾ ಪಾಟೇಕರ್ ಹಾಗೂ ನಟ , ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ವಿ;ಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಸುಮನ್ ರಂಗನಾಥ್ ಸಹ ಅಭಿನಯಿಸಿರುವ ಈ ಚಿತ್ರದ ಮುಂದಿನ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಯೋಜನೆಗೊಂಡಿದ್ದು ಇದಾಗಲೇ ಚಿತ್ರತಂಡವು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.
ಎಕ್ಸ್ ಪ್ರೆಸ್ ಗೆ ಚಿಲ್ಲಂ ಚಿತ್ರದ ಕೆಲ ಸ್ಟಿಲ್ ಗಳು ಸಿಕ್ಕಿದ್ದು ಇದರಲ್ಲಿ ಮನೋರಂಜನ್ ’ಕೆಟ್ಟ ಹುಡುಗ’ನ ಗೆಟಪ್ ನಲ್ಲಿದ್ದಾರೆ.ಕೆದರಿದ ತಲೆಗೂದಲು, ಒರಟು ಗಡ್ಡ, ಹೊಳೆಯುವ ಕಣ್ಣುಗಳಿಂದ ಕೈಯಲ್ಲಿ ಬಂದೂಕು ಹಿಡಿದಿರುವ ನಟನ ಸ್ಟಿಲ್ ನೋಡಲು ಸಾಕಷ್ಟು ಕುತೂಹಲ ಹುಟ್ಟಿಸುವಂತಿದೆ. ಡ್ರಗ್ಸ್ ಮಾಫಿಯಾದ ಸುತ್ತ ಹೆಣೆದಿರುವ ಈ ಚಿತ್ರ್ದ ಕಥೆಯಲ್ಲಿ ನಾಯಕ ಗುರು ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
"ಸೆಟ್ ನಲ್ಲಿ ಕೆಲವೇ ದಿನಗಳನ್ನು ಕಂಡಿದ್ದರೂ ನಾನು ಮನೋರಂಜನ್ ಒಬ್ಬ ನಿರ್ದೇಶಕರ ನಟನೆಂದು ಹೇಳಲು ಬಯ್ಸುತ್ತೇನೆ.ಸ್ಟಾರ್ ನಟರಾದ ರವಿಚಂದ್ರನ್ ಅವರ ಮಗನಾಗಿದ್ದರೂ ಅವರಿಗೆ ಅದಾವ ಹೆಚ್ಚುಗಾರಿಕೆ ಎನಿಸಿಲ್ಲ.ಚಿತ್ರೀಕರಣದಲ್ಲಿ ಅವರು ಪಾಲ್ಗೊಂಡಿದ್ದಾಗಲೇ ಅವರ ಮೇಲಿನ ವಿಶ್ವಾಸ ದ್ವಿಗುಣವಾಗಿತ್ತು. ಪಾತ್ರಕ್ಕೆ ಏನು ಬೇಕೆನ್ನುವುದನ್ನು ಅರ್ಥೈಸಿಕೊಂಡು ಅವರು ಅಭಿನಯಿಸುತ್ತಾರೆ" ಚಾಂದ್ರಕಲಾ ಹೇಳಿದ್ದಾರೆ.
ಚಿಲ್ಲಂ ನಲ್ಲಿ ನಟಿಸುತ್ತಿರುವ ಎಲ್ಲಾ ಕಲಾವಿದರೂ ಪಾತ್ರಗಳ ಒಳಹೊಕ್ಕು ನಟಿಸಿದ್ದಾರೆ ಎನ್ನುವ ನಿರ್ದೇಶಕಿ ಇದರಲ್ಲಿ ಹಿರಿಯ ನಟ ದೇವರಾಜ್ ಸಹ ಇದ್ದಾರೆ ಎಂದರು.ದಿವಾಕರ್, ರಾಘವ್ ನಾಥ್, ಭರತ್ ಸೇರಿ ಅನೇಕರು ಮನೋರಂಜನ್ ಅವರ ಸ್ನೇಹಿತರಾಗಿ ಕಾಣಿಸಿಕೊಳ್ಳುತ್ತಾರೆ. ಛಾಯಾಗ್ರಾಹಕ ನವೀನ್ ಕುಮಾರ್ ಸಹ ಉತ್ತಮ ಕೆಲಸ ಮಾಡಿದ್ದಾರೆ ಎಂದರು. "ನಮ್ಮ ಸಂಬಂಧ ಚೆನ್ನಾಗಿ ವರ್ಕ್ ಔಟ್ ಆಗಿದೆ ಎಂದುಕೊಳ್ಳುತ್ತೇನೆ, ಛಾಯಾಗ್ರಾಹಕರ ಕೆಲಸ ಪರಿಶೀಲಿಸಿದಾಗ ನಾನು ಎಷ್ಟೋ ಬಾರಿ ಇಂಗ್ಲೀಷ್ ಚಿತ್ರದ ಶಾಟ್ ತೆಗೆದ ಹಾಗೆ ಭಾಸವಾಗಿದೆ" ಛಾಯಾಗ್ರಹಣ ಕೆಲಸವನ್ನು ಮೆಚ್ಚುತ್ತಾ ಚಂದ್ರಕಲಾ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಚಿತ್ರತಂಡ ಚಿಕ್ಕಮಗಲೂರು, ಗೋವಾಗಳಲ್ಲಿ ಚಿತ್ರೀಕರಣ ನಡೆಸಲಿದ್ದೇವೆ ಎಂದ ನಿರ್ದೇಶಕಿ ನಾವು ಹೊಸ ತಾಣಗಳ ಹುಡುಕಾಟದಲ್ಲಿದ್ದೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿಕೆ.ಶಿವಕುಮಾರ್; ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT