ಬೆಂಗಳೂರು: ಇಂದು ಚಿತ್ರನಟಿ ಶ್ರೀಲೀಲಾ ಅವರ ಜನ್ಮದಿನ. ಆದರೆ ಇದಕ್ಕಾಗಿ ಅವರೇನೂ ಉಡುಗೊರೆ ಕೇಳುತ್ತಿಲ್ಲ. ಬದಲಾಗಿ ಅವರು ಚೇತನ್ ಕುಮಾರ್ನಿರ್ದೇಶನದ ಚಿತ್ರವೊಂದು ಅವರಿಗೆ ಯಶಸ್ಸು ತಂದುಕೊಡಲಿದೆಯಂತೆ, .ಎಪಿ ಅರ್ಜುನ್ ಅವರ ’ಕಿಸ್’ ನಲ್ಲಿ ಕಾಣಿಸಿಕೊಂಡಿದ್ದ ಈ ನಟಿ ಇದೀಗ ತಮ್ಮ ಎರಡನೇ ಚಿತ್ರದಲ್ಲಿ ಕನ್ನಡದ ಶ್ರೀಮುರಳಿ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರದ ಕುರಿತಂತೆ ಎಕ್ಸ್ ಪ್ರೆಸ್ ಜತೆ ನಟಿ ಮಾತನಾಡಿದ್ದು "ನನನ್ಗೆ ಕನ್ನಡದ ಶ್ರೀಮುರಳಿ ಜತೆ ಅಭಿನಯಿಸುವ ಅವಕಾಶ ದೊರೆತದ್ದು ನನ್ನ ಪಾಲಿಗೆ ಮರೆಯಲಾಗದ ಹುಟ್ಟುಹಬ್ಬದ ಉಡುಗೊರೆ" ಎಂದಿದ್ದಾರೆ.
"ಇದು ನನ್ನ ಪಾಲಿಗೆ ಅಚ್ಚರಿದಾಯಕವಾದ ಪ್ರಾಜಕ್ಟ್ ಆಗಿದ್ದು ಇದೊಂದು ಅತ್ಯುತ್ತಮ ಪ್ರಾಜಕ್ಟ್ ಆಗಿದ್ದು ಈ ಪ್ರಾಜಕ್ಟ್ ನನಗೆ ಸಿಗಲಿದೆ ಎಂದಾಗ ನನಗೆ ನಾನು ’ರಾಜಕುಮಾರಿ’ ಎಂದೇ ಭಾಸವಾಗಿತ್ತು. ನಾನು ಶ್ರೀಮುರಳಿ ಜತೆ ಅಭಿನಯಿಸುತ್ತೇನೆ, ಅವರ ಚಿತ್ರದ ನಾಯಕಿಯಾಗುತ್ತೇನೆ ಎನ್ನುವುದು ನನಗೆ ನಂಬಲೂ ಸಾಧ್ಯವಾಗುತ್ತಿಲ್ಲ"
ಸ್ಯಾಂಡಲ್ ವುಡ್ ನ ಖ್ಯಾತ ನಟರ್ ಜತೆ ಅಭಿನಯಿಸಬೇಕೆಂದು ಸದಾ ಹಂಬಲಿಸುತ್ತಿದ್ದ ಶ್ರೀಲೀಲಾ ಶ್ರೀಮುರಳಿಯೊಡನೆ ತೆರೆಯ ಮೇಲೆ ಕಾಣಿಸಿಕೊಳ್ಳಬೇಕೆಂದು ಬಹು ದಿನಗಳಿಂದಲೂ ಕನಸು ಕಂಡಿದ್ದಾರೆ."ನಾನಿನ್ನೂ ಸಾಧಿಸಬೇಕಾಗಿರುವುದು ಬಹಳವೇ ಇದೆ, ಆದರೆ ನನ್ನ ವೃತ್ತಿ ಜೀವನದ ಪ್ರಾರಂಭದಲ್ಲೇ ಇಂತಹಾ ಸ್ಟಾರ್ ನಟನ ಜತೆ ಅಭಿನಯಿಸುವ ಅವಕಾಶ ನನಗೆ ದೊರೆಯಲಿದೆ ಎಂದೆಣಿಸಿರಲಿಲ್ಲ, ದೈವ ನನಗೆ ವರ ನೀಡಿದೆ.. ಈ ಕ್ಷಣದಲ್ಲಿ ನಾನು ಅದೃಷ್ಟಶಾಲಿಯಾಗಿದ್ದೇನೆ " ಎಂದಿದ್ದಾರೆ.
"ಪ್ರಾರಂಭದಲ್ಲಿ ನನಗೆ ಕೆಲವು ಟೆಸ್ಟ್ ಆಕ್ಟಿಂಗ್ ಗೆ ಕಳಿಸಲಾಗುಇತ್ತು ಆದರೆ ಹಾಗೆ ಕೆಲ ಟೆಸ್ಟ್ ಗಳು ನಡೆದ ಬಳಿಕ ನನಗೆ ಸಿಕ್ಕಿದ ಅವಕಾಶ ಉತ್ತಮವಾಗಿತ್ತು. ಸೆಟ್ ನಲ್ಲಿ ಶ್ರೀಮುರಳಿ ನನಗೆ ಬಹಳವಾಗಿ ಸಹಾಯ ಮಾಡಿದ್ದಾರೆ"
ತನ್ನ ಮೊದಲ ಚಿತ್ರ ಬಿಡುಗಡೆಗೆ ಮುನ್ನವೇ ಶ್ರೀಲೀಲಾಗೆ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ಅವಕಾಶಗಳು ಸಿಗುತ್ತಿದ್ದು ಅವರು ಮಾತ್ರ ಪ್ರಥಮ ಚಿತ್ರ ಬಿಡುಗಡೆಯಾದ ಬಳಿಕ ಬೇರೆ ಯೋಜನೆಗಳನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಶ್ರೀಮುರಳಿ ಅವರೊಡನೆ ನಟಿಸುವ ಅವಕಾಶ ಬಂದಾಗ ಮಾತ್ರ ನಾನು ತಕ್ಷಣ ಒಪಿಗೆ ಸೂಚಿಸಿದ್ದೆ, ಅವರು ಪ್ರತಿಕ್ರಯಿಸಿದರು.
ಶ್ರೀಮುರಳಿ ಅಭಿನಯದ ಹೊಸ ಚಿತ್ರಕ್ಕೆ ಇನ್ನೂ ಸೂಕ್ತ ಟೈಟಲ್ ಇಡಬೇಕಿದೆ. ಆದರೆ ನಿರ್ದೇಶಕ ಚೇತನ್ ಕುಮಾರ್ ನಾಯಕಿ ಸ್ಥಾನಕ್ಕೆ ಶ್ರೀಲೀಲಾ ಸೂಕ್ತ ಆಯ್ಕೆಯಾಗಿದ್ದಾರೆ ಎನ್ನುತ್ತಾರೆ. "ಶ್ರೀಲೀಲಾಉತ್ತಮ ನಟಿ, ಕೌಟುಂಬಿಕ ಕಥಾ ಹಂದರದ ಚಿತ್ರಕ್ಕೆ ಇವರು ಸೂಟ್ ಆಗುತ್ತಾರೆ. ನಾನು ಅವರ ಮೊದಲ ಚಿತ್ರದ ದೃಶ್ಯಗಳನ್ನು ನೊಡಿದ್ದು ಆಕೆ ಉತ್ತಮ ನಟಿ ಎನ್ನುವುದು ಸಾಬೀತಾಗಿದೆ. ನನ್ನ ಚಿತ್ರಕ್ಕೆ ಆಕೆ ಸರಿಯಾದ ಆಯ್ಕೆ ಎಂದು ಪ್ರತಿಯೊಬ್ಬರೂ ದೃಢಪಡಿಸಿದ್ದಾರೆ" ಚೇತನ್ ಹೇಳೀದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics