ನಟಿ ಶ್ರದ್ದಾ ಶ್ರೀನಾಥ್ ವಿವಿಧ ಭಾಷೆಗಳ ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಬೇಡಿಕೆಯ ನಟಿಯಾಗಿದ್ದಾರೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಜೊತೆಯಲ್ಲಿ ರುಸ್ತುಂ ನಲ್ಲಿ ನಾಯಕಿಯಾಗಿರುವ ಶ್ರದ್ದಾ ಶ್ರೀನಾಥ್ ,ತಿಂಗಮನಸು ದುಲಿಯಾ ಮೂಲಕ ಚೊಚ್ಚಲ ಬಾರಿಗೆ ಬಿ- ಟೌನ್ ಪ್ರವೇಶಿಸಿದ್ದಾರೆ.
ಈಗ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ಮಾಧವನ್ ಜೊತೆಗೆ ಮಾರಾ ಚಿತ್ರದಲ್ಲೂ ಆಕೆ ಅಭಿನಯಿಸುತ್ತಿದ್ದಾರೆ. ಇದು ಮಾಧವನ್ ಜೊತೆಗೆ ನಟಿಸುತ್ತಿರುವ ಎರಡನೇ ಚಿತ್ರವಾಗಿದೆ. ಮೂರು ಚಿತ್ರಗಳನ್ನು ಶ್ರದ್ದಾ ಶ್ರೀನಾಥ್ ತಿಂಗಳ ಹಿಂದೆಯೇ ಒಪ್ಪಿಕೊಂಡಿದ್ದಾರೆ. ಮಾರಾ ಸಿನಿಮಾವನ್ನು ದಿಲೀಪ್ ಕುಮಾರ್ ಈ ಚಿತ್ರ ನಿರ್ದೇಶಿಸುತ್ತಿದ್ದು, ಬುಧವಾರ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.
ಈ ಹಿಂದೆಯೇ ಮಾಧವನ್ ಜೊತೆಯಲ್ಲಿ ನಟಿಸಿರುವ ಶ್ರದ್ದಾ ಶ್ರೀನಾಥ್, ಇಬ್ಬರು ಮತ್ತೊಂದು ಚಿತ್ರದಲ್ಲಿ ಒಟ್ಟಾಗಿದ್ದು, ತೆರೆ ಮೇಲೆ ಚೆನ್ನಾಗಿ ಮೂಡಿಬರುವ ವಿಶ್ವಾಸದಲ್ಲಿದ್ದಾರೆ. ಮಾರಾದಲ್ಲಿನ ಕಥೆ ವಿವರಿಸಿದ ಅವರು, ಇದೊಂದು ಯುವತಿ ಹಾಗೂ ಹಿರಿಯ ವಯಸ್ಸಿನ ವ್ಯಕ್ತಿ ನಡುವಿನ ಪ್ರೇಮ ಕಥೆಯಾಗಿದ್ದು, ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದರು.
ಮೂರು ಭಾಷೆಗಳ ಮೂರು ಚಿತ್ರಗಳೂ ವಿಭಿನ್ನ ಅನುಭವ ನೀಡುತ್ತಿವೆ. ಮುಂಬೈಯಲ್ಲಿ ನಾನೂ ಚಿತ್ರ ಮಾಡಿರುವುದು ಯಾರೊಬ್ಬರಿಗೂ ಗೊತ್ತಿರಲಿಲ್ಲ. ಮತ್ತೊಂದು ಕಡೆ ಶಿವಣ್ಣನ ಜೊತೆಯಲ್ಲಿನ ಸಿನಿಮಾ ಮಾಡುವುದೆಂದರೆ ಮನೆಯಲ್ಲಿನ ವಾತಾವರಣದಂತಿರುತ್ತದೆ. ಅವರೊಂದಿಗೆ ವಿಶ್ವಾಸ, ನಂಬಿಕೆಯಿಂದ ಕೆಲಸ ಮಾಡಬಹುದು ಸ್ಯಾಂಡಲ್ ವುಡ್ ಹಾಗೂ ಕಾಲಿವುಡ್ ನಲ್ಲಿ ಭಿನ್ನ ಅನುಭವ ಪಡೆದಿರುವುದಾಗಿ ಶ್ರದ್ದಾ ಶ್ರೀನಾಥ್ ಹೇಳುತ್ತಾರೆ.
ನಗರದಿಂದ ನಗರಕ್ಕೆ ಜಿಗಿಯುತ್ತಾ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದು, ರುಸ್ತುಂನಲ್ಲಿ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕೆಲಸದ ಶೈಲಿ ಹೊಸ ಅನುಭವ ನೀಡಿದೆ ಎನ್ನುತ್ತಾರೆ.
ಶಿವಣ್ಣ ಪೂರ್ಣ ಶಕ್ತಿಯುತ ನಟ
ಮೂರು ದಿನ ರುಸ್ತುಂ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಶ್ರದ್ಧಾ ಶ್ರೀನಾಥ್, ಚಿತ್ರೀಕರಣದ ವೇಳೆಯಲ್ಲಿ ಶಿವಣ್ಣನೊಂದಿಗೆ ಮಾತುಕತೆ ನಡೆಸುತ್ತಿದ್ದಾರಂತೆ. ಶಿವಣ್ಣ ಮಾನವೀಯತೆಯುಳ್ಳವರಾಗಿದ್ದು, ಅವರ ವಯಸ್ಸು ಕಂಡುಹಿಡಿಯುವುದೇ ಆಗೋದೆಲ್ಲಾ, ಅವರೊಬ್ಬ ಸದೃಢ ಶಕ್ತಿಯುತ ಮನುಷ್ಯರಾಗಿದ್ದಾರೆ ಎನ್ನುತ್ತಾರೆ.
ಮಾಧವನ್ , ನನ್ನಗೂ ಉತ್ತರ ಭಾರತ ಸಂಪರ್ಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics