ಹೈದರಾಬಾದ್: ದಕ್ಷಿಣ ಭಾರತ ಚಿತ್ರರಂಗದ 2018ನೇ ಸಾಲಿನ ಸೌತ್ ಫಿಲಂ ಫೇರ್ ಪ್ರಶಸ್ತಿ ಪ್ರದಾನ ನಿನ್ನೆ ಹೈದರಾಬಾದ್ ನಲ್ಲಿ ನಡೆಯಿತು. ದಕ್ಷಿಣ ಭಾರತ ಚಿತ್ರರಂಗದ ಗಣ್ಯರು ಹಾಜರಿದ್ದರು.
2018 ನೇ ಸಾಲಿನ ಸೌತ್ ಫಿಲಂ ಫೇರ್ ಪ್ರಶಸ್ತಿಯಲ್ಲಿ ಕನ್ನಡ ಚಿತ್ರಗಳಲ್ಲಿ, ‘ರಾಜಕುಮಾರ’ ಚಿತ್ರಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ‘ಬ್ಯೂಟಿಫುಲ್ ಮನಸ್ಸುಗಳು’ ಚಿತ್ರಕ್ಕಾಗಿ ನಟಿ ಶೃತಿ ಹರಿಹರನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಪುನೀತ್ ರಾಜ್ಕುಮಾರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ತಮ್ಮ ಬಾಲ್ಯದಿನಗಳಲ್ಲಿ ಅಪ್ಪಾಜಿ ಜೊತೆ ಸ್ವೀಕರಿಸಿದ್ದ ಪ್ರಶಸ್ತಿಯನ್ನು ನೆನಪಿಸಿಕೊಂಡರು. ಶೃತಿ ಹರಿಹರನ್ ಬ್ಯೂಟಿಫುಲ್ ಮನಸ್ಸುಗಳು ಸಿನಿಮಾಕ್ಕಾಗಿ ಈ ಸಾಲಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.
ತಮಿಳಿನಲ್ಲಿ ‘ಆರಂ’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ‘ವಿಕ್ರಮ್ ವೇದ’ ಚಿತ್ರಕ್ಕಾಗಿ ನಟ ವಿಜಯ್ ಸೇತುಪತಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ‘ಆರಂ’ ಚಿತ್ರಕ್ಕೆ ನಟಿ ನಯನತಾರ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ತೆಲುಗುವಿನಲ್ಲಿ ‘ಬಾಹುಬಲಿ-2’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ‘ಅರ್ಜುನ್ ರೆಡ್ಡಿ’ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ‘ಫೀದಾ’ ಚಿತ್ರಕ್ಕೆ ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
2018 ನೇ ಸಾಲಿನ ಸೌತ್ ಫಿಲಂ ಫೇರ್ ಪ್ರಶಸ್ತಿ ಪಡೆದವರು:
ಅತ್ಯುತ್ತಮ ನಟ – ಪುನೀತ್ ರಾಜ್ಕುಮಾರ್(ರಾಜಕುಮಾರ್)
ಅತ್ಯುತ್ತಮ ನಟಿ – ಶೃತಿ ಹರಿಹರನ್ (ಬ್ಯೂಟಿಫುಲ್ ಮನಸ್ಸುಗಳು)
ಅತ್ಯುತ್ತಮ ನಿದೇಶಕ – ತರುಣ್ ಸುಧೀರ್ (ಚೌಕ)
ಅತ್ಯುತ್ತಮ ಗೀತರಚನೆಕಾರ – ವಿ.ನಾಗೇಂದ್ರ ಪ್ರಸಾದ್(ಚೌಕ)
ಅತ್ಯುತ್ತಮ ಚಿತ್ರ – ಒಂದು ಮೊಟ್ಟೆಯ ಕಥೆ
ಅತ್ಯುತ್ತಮ ಹಿನ್ನೆಲೆ ಗಾಯಕ – ಆರ್ಮನ್ ಮಲ್ಲಿಕ್(ಚಕ್ರವರ್ತಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ –ಅನುರಾಧ ಭಟ್(ಚೌಕ)
ಅತ್ಯುತ್ತಮ ಸಂಗೀತ ನಿರ್ದೇಶಕ –ಭರತ್ ಬಿಜೆ(ಬ್ಯೂಟಿಫುಲ್ ಮನಸ್ಸುಗಳು)
ವಿಮರ್ಶಕರ ಪ್ರಶಸ್ತಿ – ಧನಂಜಯ್(ಅಲ್ಲಮ್ಮ)
ವಿಮರ್ಶಕರ ಪ್ರಶಸ್ತಿ – ಶ್ರದ್ಧ ಶ್ರೀನಾಥ್(ಆಪರೇಷನ್ ಅಲುಮೇಲಮ್ಮ)