ಉಪೇಂದ್ರ 
ಸಿನಿಮಾ ಸುದ್ದಿ

ಫಿಟ್ನೆಸ್ ಚಾಲೆಂಜ್ ಗೆ ಉಪೇಂದ್ರ ಸಡ್ಡು; ಉಪ್ಪಿ ಪ್ರಕಾರ ಫಿಟ್ನೆಸ್ ಅಂದ್ರೆ ಏನು?

ಸೆಲೆಬ್ರಿಟಿಗಳು ಮತ್ತು ಜನಪ್ರಿಯ ವ್ಯಕ್ತಿಗಳ ಫಿಟ್ನೆಸ್ ಚಾಲೆಂಜ್ ಇತ್ತೀಚೆಗೆ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ...

ಬೆಂಗಳೂರು: ಸೆಲೆಬ್ರಿಟಿಗಳು ಮತ್ತು ಜನಪ್ರಿಯ ವ್ಯಕ್ತಿಗಳ ಫಿಟ್ನೆಸ್ ಚಾಲೆಂಜ್ ಇತ್ತೀಚೆಗೆ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಟ್ರೆಂಡಿಯಾಗಿರುವ ವಿಷಯವಾಗಿದೆ. ಖ್ಯಾತ ವ್ಯಕ್ತಿಗಳು ಜಿಮ್ ನಲ್ಲಿ ಬೆವರಿಳಿಸುವ, ಕಸರತ್ತು ಮಾಡುವ ವಿಡಿಯೊ ಮಾಡಿ ಅಪ್ ಲೋಡ್ ಮಾಡಿ ದೇಹವನ್ನು ದಂಡಿಸುವುದು ಹೇಗೆ, ಸದೃಢ ಶರೀರವನ್ನು ಕಾಪಾಡುವುದು ಹೇಗೆ ಎಂಬಿತ್ಯಾದಿಗಳ ಕುರಿತು ತೋರಿಸಿಕೊಡುತ್ತಾರೆ. ನಂತರ ತಮಗಿಷ್ಟ ಬಂದ ವ್ಯಕ್ತಿಗಳಿಗೆ ಚಾಲೆಂಜ್ ನ್ನು ರವಾನಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟಿಗ ವಿರಾಟ್ ಕೊಹ್ಲಿಯಿಂದ ಹಿಡಿದು ಅನೇಕ ಜನಪ್ರಿಯ ವ್ಯಕ್ತಿಗಳು ಈಗಾಗಲೇ ಈ ಸವಾಲನ್ನು ಸ್ವೀಕರಿಸಿ ಸದೃಢ ಕಾಯುವ ಕೆಲಸದಲ್ಲಿ ನಿರತರಾಗಿದ್ದಾರೆ.

 #HumFitToIndiaFit ಎಂಬ ಹ್ಯಾಶ್ ಟಾಗ್ ನೊಂದಿಗೆ ದೈಹಿಕ ಕಸರತ್ತು ನಡೆಸುವ ವಿಡಿಯೊವನ್ನು ಇತ್ತೀಚೆಗೆ ನಟ ಕಿಚ್ಚ ಸುದೀಪ್ ಅಪ್ ಲೋಡಿ ಮಾಡಿ ನಂತರ ಸವಾಲನ್ನು ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಕೆಲವರಿಗೆ ರವಾನಿಸಿದ್ದರು. ತಮ್ಮ ಪೈಲ್ವಾನ ಚಿತ್ರದ ಶೀರ್ಷಿಕೆಯನ್ನು ನೀಡಿ bringout phailwan in you ಎಂಬ ನೂತನ ಸವಾಲನ್ನು ಹುಟ್ಟುಹಾಕಿದ್ದರು. ಯಾವ ಕೆಲಸ ಮಾಡುವುದಿದ್ದರೂ ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಯೋಚಿಸುವ ಉಪೇಂದ್ರ ಅವರು ಕಿಚ್ಚ ಸುದೀಪ್ ಅವರ ಸವಾಲನ್ನು ಸ್ವೀಕರಿಸಿ ಕೆಲ ದಿನ ಸುಮ್ಮನಾಗಿದ್ದರು.

ನಂತರ ಒಂದು ದಿನ ಇದ್ದಕ್ಕಿದ್ದಂತೆ ಸೀದಾ ತಮ್ಮ ತೋಟಕ್ಕೆ ಹೋಗಿ ಗುದ್ದಲಿ ಹಿಡಿದು ಪಕ್ಕಾ ಹಳ್ಳಿಯ ಕೃಷಿಕನಂತೆ ಮಣ್ಣು ಅಗೆಯುವ ವಿಡಿಯೊ ಮಾಡಿ ಅಪ್ ಲೋಡ್ ಮಾಡಿದ್ದಾರೆ. ''ನನ್ನ ಪ್ರಕಾರ ಬೆಸ್ಟ್ ವರ್ಕೌಟ್ ಅಂದರೆ ಈ ತರಹ ಪ್ರಕೃತಿ ಮಡಿಲಲ್ಲಿ ಹೊಲದಲ್ಲಿ ಕೆಲಸ ಮಾಡೋದು, ಏನಂತೀರಾ ಸುದೀಪ್ ಅವರೇ'' ಎಂದು ಕೇಳಿದ್ದಾರೆ. ಇವರ ಈ ವಿಡಿಯೊ ಈಗ ವೈರಲ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ನಿಮ್ಮ ಮಾತು ಸಂಪೂರ್ಣವಾಗಿ ಒಪ್ಪುವಂತದ್ದು ಎಂದು ಹೇಳಿದ್ದಾರೆ.

ಫಿಟ್ನೆಸ್ ಚಾಲೆಂಜ್ ಸವಾಲಿನಲ್ಲಿ ಉಪೇಂದ್ರ ಅವರ ವಿಡಿಯೊ ವಿಶಿಷ್ಟವಾಗಿ ಕಾಣುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಇಲ್ಲ ಪರಿಣಾಮ ಎದುರಿಸಬೇಕಾಗುತ್ತದೆ: ಕಾಂಗ್ರೆಸ್ ಗೆ 'ಅಹಿಂದ' ಎಚ್ಚರಿಕೆ

ಮಮತಾಗೆ ಬಿಗ್ ಶಾಕ್; TMC ವಿಭಜನೆ? ತೃಣಮೂಲ ಕಾಂಗ್ರೆಸ್ ನ 50 ಶಾಸಕರು, 20 ಸಂಸದರು ಬಿಜೆಪಿ ಸೇರ್ಪಡೆ?

KPCCಗೆ ಮೇಜರ್ ಸರ್ಜರಿ: ನಟಿ ಭಾವನಾ, ನಿಕೇತ್ ರಾಜ್ ಮೌರ್ಯ ಸೇರಿ 31 ಪದಾಧಿಕಾರಿಗಳಿಗೆ ಗೇಟ್‌ಪಾಸ್‌!

ನಾವು ಕಳವಳ ವ್ಯಕ್ತಪಡಿಸಿದೆವು, ಆದ್ರೆ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದರು: ಸಚಿವ ಎಚ್.ಕೆ.ಪಾಟೀಲ್

SCROLL FOR NEXT