ರಾಜ್ ಬಿ ಶೆಟ್ಟಿ ಮತ್ತು ಕವಿತಾ ಗೌಡ
ಬೆಂಗಳೂರು: ಒಂದು ಮೊಟ್ಟೆಯ ಕಥೆ, ಅನ್ನೋ ಸದಭಿರುಚಿಯ ಸಿನಿಮಾ ಗಾಂಧಿನಗರದಲ್ಲಿ ದೊಡ್ಡ ಇಂಪ್ಯಾಕ್ಟ್ ಮಾಡಿತ್ತು. ಈ ಹೊಸ ಅಲೆ ಸೃಷ್ಟಿಸಿದವರು ರಾಜ್ ಬಿ ಶೆಟ್ಟಿ, ನಿರ್ದೇಶನ ಹಾಗೂ ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈಗ ಮತ್ತೊಂದು ಸಲೆ ತೆರೆ ಮೇಲೆ ಮಿಂಚಲು ಸಿದ್ಧವಾಗಿದ್ದಾರೆ ರಾಜ್. ಬಿ ಶೆಟ್ಟಿ
ತುರ್ತು ನಿರ್ಗಮನ ಮತ್ತು ಮಾಯಬಜಾರ್ ಸಿನಿಮಾ ಮುಗಿಸಿ ಬಂದಿರುವ ರಾಜ್ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಅನ್ನೋ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಚಮಕ್ ಮತ್ತು ಅಯೋಗ್ಯ ಚಿತ್ರಗಳಿಗೆ ಬಂಡವಾಳ ಹೂಡಿದ್ದ ಚಂದ್ರಶೇಖರ್ ಈ ಸಿನಿಮಾದ ನಿರ್ಮಾಪಕ. ಚಿತ್ರದ ಪೋಸ್ಟರ್ ಗಳು ಪ್ರಾಮಿಸಿಂಗ್ ಆಗಿದ್ದು, ಕಾರ್ಪೊರೇಟ್ ಲುಕ್ ನಲ್ಲಿ ರಾಜ್ ಕಾಣಿಸಿಕೊಂಡಿದ್ದಾರೆ. ಸುಜಯ್ ಶಾಸ್ತ್ರಿ ನಿರ್ದೇಶನ ಮಾಡುತ್ತಿದ್ದಾರೆ. ಎಂಜಿ ಶ್ರೀನಿವಾಸ್ ಜೊತೆ ಕೆಲಸ ಮಾಡಿದ ಅನುಭವವಿದೆ, ಇದೇ ಮೊದಲ ಬಾರಿಗೆ ಸ್ವತಂತ್ರ್ಯ. ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಸದ್ಯ ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ನಟಿಸುತ್ತಿರುವ ಕವಿತಾ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದೇ ಮುಗ್ಧತೆ, ಅದೇ ಸೈಲೆಂಟ್ ನೇಚರ್ ನಿಂದ ರಾಜ್ ಮತ್ತೊಮ್ಮೆ ಪ್ರೇಕ್ಷಕರ ಎದುರು ಬರೋಕೆ ಸಿದ್ಧರಾಗಿದ್ದಾರೆ. ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿದ್ದು, ಇಷ್ಟರಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದೆ.