ಚಿನ್ನೇಗೌಡ 
ಸಿನಿಮಾ ಸುದ್ದಿ

ಟ್ವಿಟ್ಟರ್ ವಾರ್ ಗೆ ಕಾರಣವಾಯ್ತು ಚಲನಚಿತ್ರ ವಾಣಿಜ್ಯ ಮಂಡಳಿ ಹೊಸ ಅಧ್ಯಕ್ಷರ ಡಬ್ಬಿಂಗ್ ವಿವಾದ!

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ ಎಸ್.ಎ ಚಿನ್ನೇಗೌಡ ವಿವಾದದ ಕೇಂದ್ರ ಬಿಂದುವಾಗಿದ್ದಾರೆ...

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ ಎಸ್.ಎ ಚಿನ್ನೇಗೌಡ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ಚಿನ್ನೇಗೌಡರ ಡಬ್ಬಿಂಗ್ ವಿರೋಧ ಹೇಳಿಕೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಕನ್ನಡ ಗ್ರಾಹಕರ ಕೂಟ ಕಾರ್ಯಕರ್ತರು ಟ್ವೀಟ್ ವಾರ್ ಮಾಡಿದ್ದಾರೆ. #ಕೆಎಫ್ಐಕನ್ನಡ ದ್ರೋಹ #ಡಬ್ಬಿಂಗ್ ಬೇಕು ಮುಂತಾದ ಶ್ಲೋಗನ್ ಅಡಿಯಲ್ಲಿ ಸಾವಿರಾರು ಟ್ವೀಟಿ ಬಂದಿವೆ.
ನಾನು ಡಬ್ಬಿಂಗ್ ವಿರೋಧಿ ಎಂಬ ಹೇಳಿಕೆ ನೀಡಿ ಚಿನ್ನೆಗೌಡ ವಿವಾದಕ್ಕೆ ಕಾರಣವಾಗಿದ್ದಾರೆ, ಕನ್ನಡದಲ್ಲಿ ಡಬ್ಬಿಂಗ್ ಗೆ  ಅವಕಾಶ ಕೋರಿ ಸುಪ್ರಿಂಕೋರ್ಟ್ ನಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಕನ್ನಡ ಗ್ರಾಹಕರ ಕೂಟದ ಅಧ್ಯಕ್ಷ ಗಣೇಶ್  ಚೇತನ್ ಹೇಳಿದ್ದಾರೆ,
ಕೆಎಫ್ ಸಿಸಿ ಅಧ್ಯಕ್ಷ ಚಿನ್ನೆಗೌಡ  ನಾನು ಡಬ್ಬಿಂಗ್ ವಿರೋಧಿ, ಹೀಗಾಗಿ ಪ್ರೇಕ್ಷಕರು ಸಿನಿಮಾಗಳನ್ನು ಅವರವರ ಮೂಲ ಭಾಷೆಗಳಲ್ಲಿಯೇ ನೋಡಬೇಕು ಎಂದು ಹೇಳಿಕೆ ನೀಡಿದ ನಂತರ ಕನ್ನಡ ಗ್ರಾಹಕರ ಕೂಟ ಸೋಷಿನಯಲ್ ಮೀಡಿಯಾದಲ್ಲಿ ಚಿನ್ನೇಗೌಡ ವಿರುದ್ಧ ಕ್ಯಾಂಪೇನ್ ಆರಂಭಿಸಿದೆ.
ಸುದೀರ್ಘಕಾಲದ ಡಬ್ಬಿಂಗ್ ವಿವಾದವನ್ನು ಚಿನ್ನಗೌಡ ಮೈಮೇಲೆ ಎಳೆದುಕೊಂಡಿದ್ದಾರೆ. ಭಾಷಾ  ಹಕ್ಕುಗಳ ಕಾರ್ಯಕರ್ತರು ಟಿವಿ ಚಾನೆಲ್ ಗಳಿಗೆ ಪತ್ರ ಬರೆದು ಡಬ್ಬಿಂಗ್ ವಿಷಯವನ್ನು ಪ್ರಮೋಟ್ ಮಾಡುವಂತೆ ಕೇಳಿದ್ದಾರೆ. 
ಈ ಬಗ್ಗೆ ಚಿನ್ನೇಗೌಡ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ, ಪ್ರಕರಣ ಕೋರ್ಟ್ ನಲ್ಲಿರುವುದರಿಂದ ವಾಣಿಜ್ಯ ಮಂಡಳಿ ಕಡೆಯಿಂದ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಡಬ್ಬಿಂಗ್ ವಿಷಯ ನಮ್ಮನ್ನು ಸಮಸ್ಯೆಯಲ್ಲಿ ಸಿಲುಕಿಸುತ್ತದೆ,  ನಾವು ಏನಾದರೊಂದು ಹೇಳಿದರೇ ನಮ್ಮನ್ನು ಕೋರ್ಟ್ ಗೆ ಎಳೆಯಲಾಗುತ್ತದೆ ಎಂದು ಚಿನ್ನೇಗೌಡ ತಿಳಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ಡಬ್ಬಿಂಗ್ ವಿಷಯ ಎಳೆದಾಡುತ್ತಿದೆ, ಕಲಾವಿದರ ಸಂಘ ಮತ್ತು ನಿರ್ಮಾಪಕರ ಸಂಘ ಇದನ್ನು ವಿರೋಧಿಸುತ್ತಿದೆ, ಸಿಟಿಜನ್ ರೈಟ್ ಗ್ರೂಪ್  ಇದರ ವಿರುದ್ಧ ಹೋರಾಡುತ್ತಿದೆ.
ಸೋಷಿಯಲ್ ಮೀಡಿಯಾ ಮೂಲಕ ಸಾಮಾನ್ಯ ವ್ಯಕ್ತಿಯೂ ಕೂಡ ಪ್ರಕರಣದ ಪರವಾಗಿ ನಿಲ್ಲಬೇಕಿದ. ಭಾಷಾ ಹಕ್ಕು ಜನ ತಮಗೆ ಯಾವ ಭಾಷೆ ಬೇಕೋ ಅದರಲ್ಲಿ  ತಮಗಿಷ್ಟವಾದ ಮನರಂಜೆನ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಗಣೇಶ್ ಚೇತನ್ ಹೇಳಿದ್ದಾರೆ,. ಸಿನಿಮಾ, ಧಾರವಾಹಿ, ಕಾರ್ಟೂನ್ ಗಳನ್ನು ಕನ್ನಡದಲ್ಲಿ ಡಬ್ ಮಾಡಿ ಪ್ರಸಾರ ಮಾಡುವುದನ್ನು ತಡೆಯಬೇಕೆಂಬ ಲಾಬಿಗಳು ನಡೆಯುತ್ತುವೆ ಎಂದು ಆರೋಪಿಸಿದ್ದಾರೆ.
ಕನ್ನಡಿಗರು ಯಾವುದನ್ನು ನೋಡಬೇಕು ಯಾವುದನ್ನು ನೋಡಬಾರದು ಎಂದು ನಿರ್ಧರಿಸುವ ಹಕ್ಕು ಚಿನ್ನೇಗೌಡರಿಗಿಲ್ಲ ಎಂದು ಬಿಜೆಪಿ ಶಾಸಕ ಸಿ.,ಟಿ ರವಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!