ದಿಲೀಪ್ 
ಸಿನಿಮಾ ಸುದ್ದಿ

ಆರೋಪದಿಂದ ಮುಕ್ತನಾಗುವವರೆಗೂ ವಾಪಸ್ಸಾಗುವುದಿಲ್ಲ: 'ಅಮ್ಮ'ಗೆ ದಿಲೀಪ್ ಹೇಳಿಕೆ!

ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಿಂದ ಮುಕ್ತನಾಗುವವರೆಗೂ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(ಅಮ್ಮ)ಕ್ಕೆ ವಾಪಸ್ಸಾಗುವುದಿಲ್ಲ ಎಂದು ಆರೋಪ ಎದುರಿಸುತ್ತಿರುವ ನಟ ದಿಲೀಪ್ ಕಲಾವಿದರ ಸಂಘಕ್ಕೆ...

ಕೊಚ್ಚಿ: ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಿಂದ ಮುಕ್ತನಾಗುವವರೆಗೂ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(ಅಮ್ಮ)ಕ್ಕೆ ವಾಪಸ್ಸಾಗುವುದಿಲ್ಲ ಎಂದು ಆರೋಪ ಎದುರಿಸುತ್ತಿರುವ ನಟ ದಿಲೀಪ್ ಕಲಾವಿದರ ಸಂಘಕ್ಕೆ ತಿಳಿಸಿದ್ದಾರೆ. 
ಖ್ಯಾತ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ನಟ ದಿಲೀಪ್ ಮತ್ತೆ  ಕಲಾವಿದರ ಸಂಘಕ್ಕೆ ಅಧ್ಯಕ್ಷರಾಗುವುದಕ್ಕೆ  ಮೂವರು ನಟಿಯರು ತೀವ್ರ ವಿರೋಧ ವ್ಯಕ್ತಪಡಿಸಿ, ಈ ಕುರಿತು ಚರ್ಚಿಸಲು ತುರ್ತು ಸಭೆ ಕರೆಯುವಂತೆ ಒತ್ತಾಯಿಸಿದ್ದರು. 
ಅಧ್ಯಕ್ಷರಾಗುವುದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕಲಾವಿದರ ಸಂಘದ ಕಾರ್ಯದರ್ಶಿ ಎಡವೆಲ ಬಾಬುಗೆ ಪತ್ರ ಬರೆದಿದ್ದು, ಭಾನುವಾರದಂದು ನಡೆದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ತಮ್ಮನ್ನು ಅಮಾನತುಗೊಳಿಸಲು ಕೈಗೊಂಡಿರುವ ನಿರ್ಣಯ ಕಾನೂನಾತ್ಮಕವಲ್ಲ ಎಂದು ಹೇಳಿದ್ದಾರೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ನನಗೆ ಸಂತಸವಿದೆ. ಆದರೆ ನಾನು ತಪ್ಪೇ ಮಾಡದ ವಿಷಯಕ್ಕೆ ನನ್ನ ವಿರುದ್ಧ ಆರೋಪ ಹೊರಿಸಲಾಗಿದೆ. ನಾನು ಆರೋಪ ಮುಕ್ತನಾಗುವವರೆಗೆ ಕಲಾವಿದರ ಯಾವುದೇ ಸಂಘದಲ್ಲೂ ಸಕ್ರಿಯನಾಗಿರಲು ಬಯಸುವುದಿಲ್ಲ, ಕಲಾವಿದರ ಸಂಘದಲ್ಲಿ ನನ್ನ ಹೆಸರು ಉಲ್ಲೇಖಿಸಿ ಟೀಕಾ ಪ್ರಹಾರ ನಡೆಸಿರುವುದು ನನಗೆ ನೋವುಂಟುಮಾಡಿದೆ, ಕಲಾವಿದರ ಸಂಘಕ್ಕೆ ಆಯ್ಕೆಯಾಗಿರುವ ಹೊಸ ಸಮಿತಿಗೆ ನಾನು ಶುಭಕೋರುತ್ತೇನೆ ಎಂದು ಪತ್ರದಲ್ಲಿ ದಿಲೀಪ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ; ಟ್ರಂಪ್ ಮಾರ್ಮಿಕ ನುಡಿ, ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ

Hubli Love jihad case: ವಿಡಿಯೋ ಇರೋದು ನಿಜ, ಆದ್ರೆ… ಪ್ರಜ್ಞೆ ತಪ್ಪಿದ್ದರೆ ವಿಡಿಯೋದಲ್ಲಿ ಹೇಗೆ ಆ್ಯಕ್ಟಿವ್ ಆಗಿರುತ್ತಾಳೆ?: Sameer Mulla ಸ್ಫೋಟಕ ಹೇಳಿಕೆ!

'ಸಿಎಂ ಸಿದ್ದರಾಮಯ್ಯ ತಮ್ಮ ಮಗನನ್ನು ವಸೂಲಿ ಮಾಡಲು ರಾಜಕೀಯಕ್ಕೆ ಕರೆತಂದಿದ್ದಾರೆ': ಹೆಚ್ ಡಿ ಕುಮಾರಸ್ವಾಮಿ

Kerala: ಕಾಂಗ್ರೆಸ್ ಸಂಸದ Shashi Tharoor ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಮಹಾರಾಷ್ಟ್ರ: ನಾಸಿಕ್ ಬಳಿ ಬಾವಿಗೆ ಬಿದ್ದ ಕಾರು; ಒಂದೇ ಕುಟುಂಬದ 9 ಮಂದಿ ಸಾವು-Video

SCROLL FOR NEXT