ತರುಣ್ ಶಿವಪ್ಪ, ಶರಣ್, ತರುಣ್ ಸುಧೀರ್, ಮತ್ತು ಹರಿ ಸಂತೋಷ್
ಬೆಂಗಳೂರು: ಅನಿಲ್ ಕುಮಾರ್ ನಿರ್ದೇಶನದ ರ್ಯಾಂಬೋ-2 ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ.ಸದ್ಯಕ್ಕೆ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಸ್ಟೇಜ್ ನಲ್ಲಿದೆ, ಹೀಗಾಗಿ ಶರಣ್ ಮುಂದಿನ ಪ್ರಾಜೆಕ್ಟ್ ಗಾಗಿ ಸಿದ್ಧತೆ ನಡೆಸಿದ್ದಾರೆ. ಜೊತೆಗೆ ಯೋಗಣ್ಣ ಮುದ್ದಣ್ಣ ಸಿನಿಮಾಗಾಗಿ ತಯಾರಿ ನಡೆಸಿದ್ದಾರೆ.
ಈ ಸಿನಿಮಾಗಾಗಿ ಸೋಮವಾರ ಸರಳ ಮೂಹೂರ್ತ ಸಮಾರಂಭ ಕೂಡ ನಡೆಯಿತು.ಹರಿ ಸಂತೋಷ್ ನಿರ್ದೇಶನದ ಸಿನಿಮಾಗೆ ಕಾಲೇಜ್ ಕುಮಾರ್ ಖ್ಯಾತಿಯ ತರುಣ್ ಸುದೀರ್ ಕಥೆ ಬರೆದಿದ್ದಾರೆ, ಈ ಸಿನಿಮಾಗೆ ತರುಣ್ ಶಿವಪ್ಪ ನಿರ್ಮಾಣ ಮಾಡುತ್ತಿದ್ದಾರೆ.
ಮುಂದಿನ 10 ದಿನಗಳು ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ, ರವಿಶಂಕರ್ ಕೂಡ ಸಿನಿಮಾದಲ್ಲಿ ನಟಿಸಿದ್ದು, ಮುಂದಿನ ಕೆಲ ದಿನಗಳಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಶರಣ್ ಗೆ ನಾಯಕಿಗಾಗಿ ಹುಡುಕಾಟ ಆರಂಭವಾಗಿದೆ.