ಬೆಂಗಳೂರು: ಪ್ರೇಮ್ ಕನ್ನಡದ ಅತಿ ದುಬಾರಿ ನಿರ್ದೇಶಕ ಎಂದು ಪ್ರಸಿದ್ಧರಾಗಿದ್ದಾರೆ, ಹಣದ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ, ಕೇವಲ ಸಿನಿಮಾ ಉತ್ತಮವಾಗಿ ಮೂಡಿ ಬರಬೇಕೆಂಬುದೇ ಪ್ರೇಮ್ ಪ್ರಮುಖ ಉದ್ದೇಶ.
ದಿ ವಿಲ್ಲನ್ ಸಿನಿಮಾ ನಿರ್ಮಾಪಕ ಸಿ. ಆರ್ ಮನೋಹರ್ ಈಗಾಗಲೇ ಬಹು ದೊಡ್ಡ ಪ್ರಮಾಣದಲ್ಲಿ ಹಣ ಹೂಡಿದ್ದಾರೆ, ವಿಲ್ಲನ್ ನಲ್ಲಿ ಸುದೀಪ್ ಮತ್ತು ಶಿವರಾಜ್ ಕುಮಾರ್ ನಟಿಸಿದ್ದು, ಆಮಿ ಜಾಕ್ಸನ್ ನಾಯಕಿಯಾಗಿ ನಟಿಸಿದ್ದಾರೆ, ಮಿಥುನ್ ಚಕ್ರವರ್ತಿ ಮತ್ತು ತೆಲುಗು ನಟ ಶ್ರೀಕಾಂತ್ ಅಭಿನಯಿಸಿದ್ದಾರೆ.
ಸುಮಾರು 3 ಕೋಟಿ ರು ವೆಚ್ಚದಲ್ಲಿ ಹಾಡೊಂದನ್ನು ನಿರ್ಮಿಸಲಾಗಿದೆ, ಸುದೀಪ್ ನಟನೆಯ ಈ ಹಾಡಿಗೆ ಅತಿ ವೆಚ್ಚದ ಗ್ರಾಫಿಕ್ ಮಾಡಲಾಗಿದೆ. ಪ್ರೇಮ್ ಸದ್ಯ ಸೌಂಡ್ ಮಿಕ್ಸಿಂಗ್ ಎಂಜಿನೀಯರಿಂಗ್ ಎರಿಕ್ ಪಿಳ್ಳೈ ಜೊತೆ ದಿ ವಿಲ್ಲನ್ ಗಾಗಿ ಕೆಲಸ ಮಾಡುತ್ತಿದ್ದಾರೆ. ಆಶಿಖಿ-2 ಸಿನಿಮಾದಲ್ಲಿ ಗಮನ ಸೆಳೆಯುವ ಕೆಲಸಕ್ಕಾಗಿ GIMa ಪ್ರಶಸ್ತಿ ಲಭಿಸಿದೆ. ಬೆಸ್ಟ್ ರೆಕಾರ್ಡಿಂಗ್ ಎಂಜಿನೀಯರ್ ಪ್ರಶಸ್ತಿ ದೊರೆತಿದೆ, ಸಂಜಯ್ ಲೀಲಾ ಬನ್ಸಾಲ್ ಅವರ ಪದ್ಮಾವತ್ ಸಿನಿಮಾ ದಲ್ಲೂ ಕೆಲಸ ಮಾಡಿದ್ದಾರೆ.
ಎರಿಕ್ ಒಂದು ಕನ್ನಡ ಹಾಡಿಗಾಗಿ 5 ಲಕ್ಷ ರು ಸಂಭಾವನೆ ಪಡೆದುಕೊಳ್ಳುತ್ತಾರೆ. ಪ್ರಮುಖ ಹಾಡುಗಳಿಗೆ ಪರಿಣಿತರಿಂದ ಸಂಗೀತ ಕೊಡಿಸಲಾಗಿದೆ, ಅರ್ಜುನ್ ಜನ್ಯ ಮತ್ತು ಪಿಳ್ಳೈ ವಿಲ್ಲನ್ ಸಿನಿಮಾಗಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.,
ಶಿವಣ್ಣ ಮತ್ತು ಸುದೀಪ್ ನಟನೆಯ ಈ ಸಿನಿಮಾ ಟೀಸರ್ ಈ ತಿಂಗಳಲ್ಲಿ ರೀಲಿಸ್ ಆಗಲಿದೆ. ಬಾಕಿ ಉಳಿದಿರುವ ಕೆಲಸಗಳು ಇನ್ನೆರಡು ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos