ನವದೆಹಲಿ: ಒರು ಅಡಾರ್ ಲವ್ ಚಿತ್ರದ ಒಂದೇ ಒಂದು ದೃಶ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಬಿಂದುವಾಗಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ ವೊಂದಕ್ಕೆ ಬಾರಿ ಪ್ರಮಾಣದ ಸಂಭಾವನೆ ಪಡೆಯುತ್ತಿದ್ದಾರಂತೆ.
ಹೌದು.. ತಮ್ಮ ಚೊಚ್ಚಲ ಚಿತ್ರ "ಒರು ಅಡಾರ್ ಲವ್'ನಲ್ಲಿನ ಹಾಡೊಂದರಲ್ಲಿ ಕಣ್ಣು ಹೊಡೆದು ಹುಡುಗರ ಹೃದಯ ದೋಚಿದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ಇನ್ನು ಇನ್‌ಸ್ಟಾಗ್ರಾಂನಲ್ಲಿ ತಾವು ಹಾಕುವ ಪೋಸ್ಟ್‌ಗೆ ತಲಾ 8 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರಂತೆ.
ಅಚ್ಚರಿಯಾದರೂ ಇದು ಸತ್ಯ. "ಒರು ಅಡಾರ್ ಲವ್' ಚಿತ್ರದ ಹಾಡುಗಳ ಕೆಲ ಸೆಕೆಂಡ್‌ಗಳ ತುಣುಕುಗಳು ಡಿಜಿಟಲ್ ದುನಿಯಾದಲ್ಲಿ ಈಕೆಯನ್ನು ಖ್ಯಾತಿಯ ಉತ್ತುಂಗಕ್ಕೇರಿಸಿವೆ. ಜನಪ್ರಿಯತೆಯಲ್ಲಿ, ಈಶಾ ಗುಪ್ತಾ, ಸನ್ನಿ ಲಿಯೋನ್ ರನ್ನೇ ಹಿಂದಿಕ್ಕಿರುವ ಇವರು, ಇನ್‌ಸ್ಟಾಗ್ರಾಂ ನಲ್ಲಿ ಬರೊಬ್ಬರಿ 50 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಅತಿ ಹೆಚ್ಚು "ಹುಡುಕಾಟ"ಕ್ಕೆ ಗುರಿಯಾದ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಹಾಗಾಗಿಯೇ, ಇವರ ಪ್ರತಿ ಪೋಸ್ಟಿಂಗ್‌ಗೆ ಇನ್‌ಸ್ಟಾಗ್ರಾಂ 8 ಲಕ್ಷ ರೂ. ನೀಡಲಿದೆಯಂತೆ.
ಇಷ್ಟೇ ಅಲ್ಲದೇ ಟ್ವಿಟರ್ ನಲ್ಲಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಫಾಲೋವರ್ ಗಳ ಸಂಖ್ಯೆ ದೊಡ್ಡದೇ ಇದೆ. ಇನ್ನು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ನಟನೆಯ ಒರು ಅಡಾರ್ ಲವ್ ಚಿತ್ರ ಚಿತ್ರೀಕರಣಗ ಹಂತದಲ್ಲಿದ್ದು, ಜೂನ್ ವೇಳೆ ಚಿತ್ರ ಬಿಡುಗಡೆಗೆ ಸಿದ್ಧವಾಗಲಿದೆ. ಚಿತ್ರ ತಂಡ ತಿಳಿಸಿರುವಂತೆ ಜೂನ್ 14ರಂದು ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.