ಯಶ್ 
ಸಿನಿಮಾ ಸುದ್ದಿ

ಕೆಜಿಎಫ್ ಚಿತ್ರದಲ್ಲಿ ಯಶ್‌‌ಗೆ ಬೈಕ್ ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ!

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಸಹ ಒಂದಾಗಿದ್ದು ಚಿತ್ರದ ಹಲವು ಕುತೂಹಲಕಾರಿ ಸಂಗತಿಗಳು ಹೊರಬರುತ್ತಿವೆ...

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಸಹ ಒಂದಾಗಿದ್ದು ಚಿತ್ರದ ಹಲವು ಕುತೂಹಲಕಾರಿ ಸಂಗತಿಗಳು ಹೊರಬರುತ್ತಿವೆ. 
ಕೆಜಿಎಫ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾದಾಗ ಚಿತ್ರದಲ್ಲಿ ಯಶ್ ಲುಕ್, ಕಾಸ್ಟ್ಯೂಮ್ ಹೇಗಿರಲಿದೆ ಎಂಬುದು ಬಹಿರಂಗಗೊಂಡಿತ್ತು. ಜತೆಗೆ ಪೋಸ್ಟರ್ ನಲ್ಲಿ ಯಶ್ ಬೈಕ್ ಮೇಲೆ ಕುಳಿತಿದ್ದು ಇದು ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿ ಮಾಡಿತ್ತು. ಅಂತೆಯೇ ಆ ಬೈಕ್ ವಿನ್ಯಾಸದ ಹಿಂದೆಯೂ ಒಂದು ಕಥೆಯಿದೆ. 
ಇದೀಗ ಆ ಬೈಕ್ ವಿನ್ಯಾಸಗೊಳಿಸಿದ್ದು ಯಾರು ಎಂಬುದು ಮಾಹಿತಿ ಗೊತ್ತಾಗಿದೆ. ಕೆಜಿಎಫ್ ಚಿತ್ರದ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿರುವ ಭುವನ್ ಗೌಡ. ಈ ರಾಯಲ್ ಎನ್ ಫಿಲ್ಡ್ ಟ್ರಯಂಫ್ ಬೈಕನ್ನು ಚಿತ್ರಕ್ಕಾಗಿ ಡಿಸೈನ್ ಮಾಡಿದ್ದಾರೆ. ಕಾಂಟಿನೆಂಟಲ್ ಜಿಟಿ ಮಾದರಿಯ ಬೈಕ್ ಗೆ ಹೊಸ ಬಗೆಯ ಟಚ್ ನೀಡಿ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. 
ಇನ್ನು ಬೈಕ್ ವಿನ್ಯಾಸ ಮಾಡಿರುವ ಭುವನ್ ಗೌಡ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಬೈಕ್ ಡಿಸೈನ್ ಮಾಡಿರುವ ಶೈಲಿ ಬಗ್ಗೆ ಸಾಕಷ್ಟು ಮೆಚ್ಚುಗೆ ಕೇಳಿಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಶಾಕಿಂಗ್ Video: CJP ಪ್ರತಿಭಟನೆ ತಡೆಯಲು ಬ್ಯಾರಿಕೇಡ್‌ ಮಾತ್ರವಲ್ಲ, ರಸ್ತೆಯಲ್ಲಿ ಸ್ಪೈಕ್ ಸ್ಟ್ರಿಪ್‌ ಅಳವಡಿಕೆ!

ಜ್ಞಾನೇಶ್ ಕುಮಾರ್, ಪ್ರಧಾನಿ ಮೋದಿ ಇಬ್ಬರೂ ಮನೆಗೆ ಹೋಗುತ್ತಾರೆ, ನಂತರ ಪ್ರಜಾಪ್ರಭುತ್ವದ ದುರಸ್ತಿ: ರಾಹುಲ್ ಗಾಂಧಿ

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?