ಸುದೀಪ್ 
ಸಿನಿಮಾ ಸುದ್ದಿ

ಅಂಬಿ ನಿಂಗ್ ವಯಸ್ಸಾಯ್ತೋ: ಹಳ್ಳಿ ಹುಡುಗನ ಪಾತ್ರದಲ್ಲಿ ಸುದೀಪ್

ಗುರುದತ್ತ ಗಣಿಗ ನಿರ್ದೇಶಿಸುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಶೂಟಿಂಗ್ ನಲ್ಲಿ ಸೋಮವಾರದಿಂದ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ. ಮುಂದಿನ 20 ...

ಬೆಂಗಳೂರು: ಗುರುದತ್ತ ಗಣಿಗ ನಿರ್ದೇಶಿಸುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಶೂಟಿಂಗ್  ನಲ್ಲಿ ಸೋಮವಾರದಿಂದ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ. ಮುಂದಿನ 20 ದಿನಗಳ ಕಾಲ ಸುದೀಪ್ ಶೂಟಿಂಗ್ ನಲ್ಲಿ ಪಾಲ್ಗೋಳ್ಳಲಿದ್ದಾರೆ,
ಅಂಬರೀಷ್ ಸುಹಾಸಿನಿ ಪ್ರಮುಖ ಪಾತ್ರದಲ್ಲಿ  ನಟಿಸಿದ್ದು,  ಸುದೀಪ್ ಮತ್ತು ಶೃತಿ ಹರಿಹರನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅಂಬಿ ನಿಂಗ್ ವಯಸ್ಸಾಯ್ತು ಸೆಟ್ ನಲ್ಲಿರುವುದು ನನಗೆ ಮನೆಗೆ ಬಂದಂತಾಗಿದೆ, ನನ್ನ ಸಹಾಯಕ ನಿರ್ದೇಶಕ ಗುರು ನಿರ್ದೇಶಕನಾಗಿ ಬಡ್ತಿ ಹೊಂದಿದ್ದಾನೆ, ಮತ್ತೊಬ್ಬ ನನ್ನ ಹುಡುಗ ಸಂಚಿತ್ ಸಿನಿಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ, ಈ ಇಬ್ಬರು ಮಕ್ಕಳು ಸನ್ನಿವೇಶಗಳನ್ನು ನಿರ್ವಹಿಸುತ್ತಿರುವುದು ದೊಡ್ಡ ವಿಷಯವಾಗಿದೆ,  ಅಂಬರೀಷ್ ಮಾಮತಮ್ಮ ಹಾಡಿನ ಶೂಟಿಂಗ್ ನಲ್ಲಿ ಆರಂಭವಾಗಿದ್ದಾರೆ. ಪ್ರೇಮ್ ಬರೆದಿರುವ ಹಾಡಿಗೆ ಅದ್ಭುತವಾಗಿ ಸಂಗೀತ ನೀಡಲಾಗಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ದಿನದ 24 ಗಂಟೆಯೂ ಶೂಟಿಂಗ್ ಪ್ಲಾನ್ ಮಾಡಲಾಗಿದೆ, ಸೋಲೋ ಹಾಡಿನ ಚಿತ್ರೀಕರಣ ಬೆಳಗ್ಗಿನ ಜಾವ ನಡೆಯುತ್ತಿದೆ,.ಆರ್ ಎಸ್ ಸ್ಟುಡಿಯೋದಲ್ಲಿ ರಾತ್ರಿ ಸುದೀಪ್ ಮತ್ತು ಶೃತಿ ಹರಿಹರನ್ ನಟನೆಯ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಯಿತು.ಸಂಜೆ 6 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯವರೆಗೆ ಶೂಟಿಂಗ್ ನಡೆಯುತ್ತಿದೆ, ಅಂಬರೀಷ್ ಭಾಗದ ಶೂಟಿಂಗ್ ಹಗಲು ಹೊತ್ತು ನಡೆಯುತ್ತಿದೆ.
ಈ ಸಿನಿಮಾದಲ್ಲಿ ಸುದೀಪ್ ಹಳ್ಳಿ ಹುಡುಗನ ಪಾತ್ರದಲ್ಲಿ ನಟಿಸಿದ್ದಾರೆ, 1980ರ ದಶಕದ ಸೆಟ್ ಹಾಕಲಾಗಿದ್ದು,  ಅಂಬರೀಷ್ ಯಂಗ್ ವರ್ಸನ್ ನಲ್ಲಿ ಸುದೀಪ್ ನಟಿಸುತ್ತಿದ್ದಾರೆ, ಕಿಚ್ಚ ಸುದೀಪ್ ಅವರ ಈ ಹೊಸ ಲುಕ್ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT