ಬೆಂಗಳೂರು: ಸತತ 49 ವರ್ಷಗಳ ಚಿತ್ರ ಪ್ರದರ್ಶಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದ ನಟರಾಜ ಥಿಯೇಟರ್ ಪ್ರದರ್ಶನ ನಿಲ್ಲಿಸಲಿದೆ, ಮಾಲೀಕ ಮತ್ತು ಬಾಡಿಗೆದಾರರ ನಡುವಿನ ಲೀಸ್ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಚಿತ್ರ ಪ್ರದರ್ಶನ ಸ್ಥಗಿತಗೊಳ್ಳಲಿದೆ.
ಚಿತ್ರಮಂದಿರ ತುಂಬಾ ಹಳೇಯದಾಗಿದ್ದು, ಮಾಲೀಕರು ನವೀಕರಿಸಲು ಆಸಕ್ತಿ ತೋರುತ್ತಿಲ್ಲ ಎಂದು ಆಸ್ತಿ ಮಾಲೀಕ ಜೆ.ಸಿ ವಿಶ್ವೇಶ್ವರ ಹೇಳಿದ್ದಾರೆ.ಸಿನಿಮಾ ಹಾಲ್ ಕಾರ್ಯ ನಿರ್ವಹಣೆ ಮಾಡುವುದು ದುಬಾರಿ ವೆಚ್ಚ ವಾಗುತ್ತದೆ ಎಂದು ಹೇಳಿದ್ದಾರೆ,
1970 ರಲ್ಲಿ ಮೊತ್ತ ಮೊದಲ ಬಾರಿಗೆ ಚಿತ್ರ ಪ್ರದರ್ಶನ ಆರಂಭವಾಯಿತು, ಪ್ರತಿ ಬಾರಿ ಕಾವೇರಿ ನದಿ ವಿವಾದ ಉಂಟಾದಾಗಲು, ಚಿತ್ರ ಪ್ರದರ್ಶನ ಮಾಡುವುದು ಕಷ್ಟವಾಗುತ್ತದೆ ಎಂದು ವಿಶ್ವೇಶ್ವರ ಅವರ ಸಂಬಂಧಿ ವೀರಭದ್ರ ಪ್ರಸನ್ನ ತಿಳಿಸಿದ್ದಾರೆ, ಶ್ರೀರಾಮಪುರ ಮತ್ತು ಯಶವಂತಪುರ ಪ್ರದೇಶಗಳಲ್ಲಿ ತಮಿಳುಜನ ಹೆಚ್ಚಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತಮಿಳು ಚಿತ್ರ ಪ್ರದರ್ಶನ ಮಾಡಲಾಗುತ್ತದೆ. ಬೆಂಗಳೂರಿನ ಅತಿ ದೊಡ್ಡ 2ನೇ ಥಿಯೇಟರ್ ಇದಾಗಿದೆ, 1,100 ಜನ ಕುಳಿತುಕೊಳ್ಳುವ ಚಿತ್ರಮಂದಿರ ಇದಾಗಿದೆ.
19 ಸಾವಿರ ಚದರ ಅಡಿ ಪ್ರದೇಶದ ಈ ಥಿಯೇಟರ್ ಮೂರು ಭಾಗವಾಗಿ ವಿಭಜಿಸಲಾಗಿದೆ, ಮುಂದಿನ ಮತ್ತು ಹಿಂದಿನ ಭಾಗ ವಿಶ್ವೇಶ್ವರ ಅವರಿಗೆ ಸೇರಿದ್ದು ಅವರನ್ನು ಮಾರಾಟ ಮಾಡಲು ಬಯಸಿದ್ದಾರೆ, ಆದರೆ ಥಿಯೇಟರ್ ಮಧ್ಯಭಾಗದ್ದು ನನ್ನ ತಂದೆಗೆ ಸೇರಿದ್ದು, ಅದನ್ನು ಉಳಿಸಿಕೊಳ್ಳಲು ಬಯಸಿದ್ದಾರೆ.
ಥಿಯೇಟರ್ ನಡೆಸಲು ನಮ್ಮಿಂದ ಸಾಧ್ಯವಿಲ್ಲ, ಥಿಯೇಟರ್ ನಲ್ಲಿ 40 ಮಂದಿ ಕೆಲಸ ಮಾಡುತ್ತಿದ್ದು ಅವರೆಲ್ಲಾ ಕೆಲಸ ಕಳೆದುಕೊಳ್ಳಲಿದ್ದಾರೆ, ಈಗಾಗಲೇ ಪ್ರೊಜೆಕ್ಟರ್, ಪರದೆ, ಕುರ್ಚಿಗಳು ಹಾಗೂ ಸೌಂಡ್ ಸಿಸ್ಟಮ್ ಸೇರಿದಂತೆ ಹಲವು ಯಂತ್ರೋಪಕರಣಗಳನ್ನು ಮಾರಾಟ ಮಾಡಲಾಗಿದೆ.
2017ರ ಡಿಸೆಂಬರ್ ಗೆ ಲೀಸ್ ಅವಧಿ ಮುಕ್ತಾಯವಾಗಿದ್ದು, ಮಾಲೀಕರಿಗೆ ಅದನ್ನು ವಾಪಸ್ ನೀಡಲಾಗಿದೆ,100 ವರ್ಷದ ಹಳೇಯ ಈ ಆಸ್ತಿ ಜೆ.ಚಿನ್ನಪ್ಪ ಎಂಬುವರಿಗೆ ಸೇರಿದ್ದು ಅವರ ಮೂವರು ಮಕ್ಕಳಿಗೆ ಭಾಗ ಮಾಡಿ ಹಂಚಲಾಗಿದೆ. ಇದರ ಅಂದಾಜು ಬೆಲೆ 40 ಕೋಟಿ ರು ಇದೆ.
ನಗರದಲ್ಲಿದ್ದ ಹಲವಾರು ಸಿಂಗಲ್ ಸ್ಕ್ರೀನ್ ಥಿಯೇಟರ್ ಇದಾಗಿದ್ದು, ಮಲ್ಟಿಫ್ಲೆಕ್ಸ್ ಅಬ್ಬರದಲ್ಲಿ ಚಿತ್ರ ಮಂದಿರಗಳು ಸ್ಥಗಿತಗೊಳ್ಳುತ್ತಿವೆ, ಇದು ಸಿನಿಮಾ ಪ್ರೇಕ್ಷಕರಿಗೆ ಬಹು ದೊಡ್ಡ ನಷ್ಟ ಎಂದು ಹಿರಿಯ ನಟ ನಿರ್ಮಾಪಕ ದ್ವಾರಕೀಶ್ ಹೇಳಿದ್ದಾರೆ.
ಈ ಆಸ್ತಿ ವಿವಾದ ನ್ಯಾಯಾಲಯದಲ್ಲಿದ್ದು, ಸದ್ಯಕ್ಕೆ ಆಸ್ತಿ ಮಾರಾಟ ಮಾಡುವ ಉದ್ದೇಶವಿಲ್ಲ, ನಮ್ಮ ಪೂರ್ವಜರು ಇದನ್ನು ಉಳಿಸಿಕೊಳ್ಳಲು ಬಯಸಿದ್ದಾರೆ ಎಂದು ವೀರಭದ್ರ ಪ್ರಸನ್ನ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos