ನವದೆಹಲಿ: ಕಾಲ್ ಡ್ರಾಪ್ ರೆಕಾರ್ಡ್ (ಸಿಡಿಆರ್) ಕೇಸ್ಗಳಲ್ಲಿ ಈಚೆಗೆ ಬಾಲಿವುಡ್ ನಟ ನವಾಜ್ ಸಿದ್ದಿಕಿ ಅವರ ಹೆಸರು ಕಂಡುಬಂದ ಬಳಿಕ ಕಂಗನಾ ರಾಣಾವತ್ ಅವರ ಹೆಸರು ಕೇಳಿಬರುತ್ತಿದೆ.
ಈ ಬಾರಿ ಸಿಡಿಆರ್ ಕೇಸ್ನಲ್ಲಿ ಕಂಗನಾ ರಾಣಾವತ್ ಮತ್ತು ಜಾಕಿ ಶ್ರಾಫ್ ಅವರ ಪತ್ನಿ ಆಯೇಶಾ ಹೆಸರು ಉಲ್ಲೇಖವಾಗಿರುವುದು ವಿವಾದಕ್ಕೆ ಕಾರಣವಾಗಿದೆ.
ಸಿಡಿಆರ್ ವಿವಾದದ ಕೇಸಿನಲ್ಲಿ ತನ್ನ ಸಹೋದರಿಯಾಗಿರುವ "ಕ್ವೀನ್' ಚಿತ್ರದ ನಟಿ ಕಂಗನಾ ರಾಣಾವತ್ ಹೆಸರನ್ನು ಉಲ್ಲೇಖೀಸಿರುವ ಪೊಲೀಸ್ ಅಧಿಕಾರಿ ವಿರುದ್ಧ ರಂಗೋಲಿ ಚಾಂದೇಲ್ ಹರಿಹಾಯ್ದಿದ್ದಾರೆ.
ತನಿಖೆಯ ವೇಳೆ ಕಂಗನಾ ರಾಣಾವತ್ ಅವರು ಹೃತಿಕ್ ರೋಶನ ಅವರ ಮೊಬೈಲ್ ನಂಬರನ್ನು ಆರೋಪಿ ರಿಜ್ವಾನ್ ಸಿದ್ದಿಕಿ ಜತೆಗೆ 2016ರಲ್ಲಿ ಹಂಚಿಕೊಂಡಿದ್ದುದು ಗೊತ್ತಾಗಿದೆ. ಆದರೆ ಇದಕ್ಕೆ ಕಾರಣವೇನೆಂಬುದು ಗೊತ್ತಾಗಿಲ್ಲ ಎಂದು ಡಿಸಿಪಿ ಹೇಳಿದ್ದಾರೆ.
ಬಂಧಿತ ಲಾಯರ್ ರಿಜ್ವಾನ್ ಸಿದ್ದಿಕಿ ಅವರನ್ನು ತನಿಖಾಧಿಕಾರಿಗಳು ಪ್ರಶ್ನಿಸಿದುದನ್ನು ಅನಸರಿಸಿ ಥಾಣೆ ಪೊಲೀಸರಿಗೆ ನಟ ಸಾಹಿಲ್ ಖಾನ್ ಅವರ ಕಾಲ್ ಡಿಟೇಲ್ಸ್ಗಳು ಸಿಕ್ಕಿದವು.
ಆಯೇಶಾ ಶ್ರಾಫ್ ಅವರು ಈ ವಿವರಗಳನ್ನು ರಿಜ್ವಾನ್ ಸಿದ್ದಿಕಿಯೊಂದಿಗೆ ಹಂಚಿಕೊಂಡಿರುವುದನ್ನು ಪತ್ತೆ ಹಚ್ಚಲಾಯಿತು ಎಂಬುದಾಗಿ ಥಾಣೆ ಪೊಲೀಸ್ ಕ್ರೈಮ್ ಬ್ರಾಂಚ್ ಡಿಸಿಪಿ ಅಭಿಷೇಕ್ ತ್ರಿಮುಖೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics