ಸಿನಿಮಾ ದೃಶ್ಯ, ಒಳಚಿತ್ರದಲ್ಲಿ ನಿರ್ದೇಶಕ ಹರಿ 
ಸಿನಿಮಾ ಸುದ್ದಿ

ಸೂರಿ ದುನಿಯಾದಂತಲ್ಲ ಯೋಗಿ ದುನಿಯಾ, ಮೆಜೆಸ್ಟಿಕ್ ನ ಕಥೆಯಿದು: ನಿರ್ದೇಶಕ ಹರಿ

ದುನಿಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡಿದ್ದ ನಿರ್ದೇಶಕ ಸೂರಿ ಮತ್ತೆ ಇನ್ನೊಂದು...

ದುನಿಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡಿದ್ದ ನಿರ್ದೇಶಕ ಸೂರಿ ಮತ್ತೆ ಇನ್ನೊಂದು ಅಂತಹ ಸಿನಿಮಾ ಮಾಡುವುದು ಅಸಾಧ್ಯ ಎಂದಿದ್ದರು. ಆದರೆ ಹೊಸಬ ನಿರ್ದೇಶಕ ಹರಿ ಅದರ ಮುಂದುವರಿದ ಭಾಗವನ್ನು ತಯಾರಿಸುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಯೋಗಿ ನಾಯಕನಾಗಿ ನಟಿಸಿದ್ದಾರೆ.

ಈ ವಾರ ಚಿತ್ರ ತೆರೆಗೆ ಬರಲಿದ್ದು ನಿರ್ದೇಶಕ ಹರಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಭೂಗತ ಜಗತ್ತಿನ ಕಥೆ ಹೊಂದಿದ ದುನಿಯಾ ಸಿನಿಮಾ 2007ರಲ್ಲಿ ಬಿಡುಗಡೆಯಾಯಿತು. ಆ ಚಿತ್ರದ ರೀತಿ ನನ್ನ ಚಿತ್ರವಿರುವುದಿಲ್ಲ.ಸೂರಿ ದುನಿಯಾ ರೀತಿಯಲ್ಲಿ ನಾನು ಈ ಚಿತ್ರವನ್ನು ಮಾಡಲು ಪ್ರಯತ್ನಿಸಿಲ್ಲ. ನನ್ನ ದುನಿಯಾ ಮುಂದುವರಿದ ಚಿತ್ರ ಜೂಜಿಗೆ ಸಂಬಂಧಪಟ್ಟದ್ದು ಎನ್ನುತ್ತಾರೆ.

ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರೇದಶ ಮೆಜೆಸ್ಟಿಕ್ ನ್ನು ಸೆರೆಹಿಡಿಯಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಅದು ರಾತ್ರಿ ವೇಳೆಯಲ್ಲಿ. ಪ್ರತಿ ರಾತ್ರಿ ಮೆಜೆಸ್ಟಿಕ್ ಸುತ್ತಮುತ್ತ ಹತ್ತು ಹಲವು ಆಸಕ್ತಿಕರ ವಿಷಯಗಳು ಇಲ್ಲಿ ಸಿಗುತ್ತವೆ. ಅವರ ಜೀವನ ಹೇಗಿರುತ್ತದೆ ಎಂದು ತಿಳಿಯಲು ಪ್ರಯತ್ನಿಸಿದ್ದೇನೆ. ಮೆಜೆಸ್ಟಿಕ್ ನ್ನು ತಮ್ಮ ನೆಲೆಯಾಗಿ ಮಾಡಿಕೊಂಡಿರುವ ಜನರ ಜೀವನದ ಬಗ್ಗೆ ದುನಿಯಾ 2 ಚಿತ್ರವಿದೆ ಎನ್ನುತ್ತಾರೆ.

ಇಲ್ಲಿಯೇ ಜನ ಪ್ರಯಾಣವನ್ನು ಆರಂಭಿಸುವುದು ಮತ್ತು ಕೊನೆಗೊಳಿಸುವುದು. ಇಲ್ಲಿಗೆ ಬರುವಾಗ ಖಾಲಿಯಾಗಿ ಬರುತ್ತೇವೆ, ಹೋಗುವಾಗ ಹಲವು ನೆನಪುಗಳಿರುತ್ತವೆ. ಮೆಜೆಸ್ಟಿಕ್ ಪ್ರದೇಶದಲ್ಲಿಯೇ ಹುಟ್ಟಿ ಬೆಳೆದ ನಿರ್ದೇಶಕ ಹರಿ ಇಲ್ಲಿನ ಪಾತ್ರಗಳನ್ನು ಚೆನ್ನಾಗಿ ಅಧ್ಯಯನ ಮಾಡಿದ್ದಾರೆ. ಇಲ್ಲಿ ಪ್ರಯಾಣಿಕರು, ಜೂಜುಕೋರರು, ಜೋಡಿಗಳು ಇರುತ್ತಾರೆ.

ಯೋಗಿಯವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಾಮಾನ್ಯ ಹುಡುಗನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಹಿತಾ ಚಂದ್ರಶೇಖರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಂಜುನಾಥ್ ನಾಯ್ಕ್ ಅವರ ಛಾಯಾಗ್ರಹಣ ಮತ್ತು ಬಿಜೆ ಭರತ್ ಅವರ ಸಂಗೀತವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT