ಬೆಂಗಳೂರು: ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮಾನ್ ನಾರಾಯಣ ಸಿನಿಮಾದಲ್ಲಿ ಸಾನ್ವಿ ಶ್ರೀವಾತ್ಸವ್ ನಟಿಸುತ್ತಿದ್ದಾರೆ. ಸಚಿನ್ ನಿರ್ದೇಶನವಿದ್ದು ಬಾಗಲಕೋಟೆಯ ಸುತ್ತಮುತ್ತ ನಡೆದ ಶೂಟಿಂಗ್ ನಲ್ಲಿ ಸಾಬೇಬ ಚಿತ್ರದ ನಾಯಕಿ ಭಾಗವಹಿಸಿದ್ದರು.
ಮೇಕಪ್ ಮಾಡಿಕೊಳ್ಳುವ ಬ್ಯುಸಿಯಲ್ಲಿದ್ದ ಸಾನ್ವಿ ಕೆಲ ಕಾಲ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದರು. ಬಹಳ ದೀರ್ಘ ಕಾಲದವರೆಗೆ ನಾನು ನಿರುದ್ಯೋಗಿ ಆಗಿದ್ದೆ ಎಂಬ ಭಾವನೆ ಕಾಡುತ್ತಿತ್ತು. ವಿಲ್ಲನ್ ನಲ್ಲಿ ಸಣ್ಣ ಡ್ಯಾನ್ಸ್ ಸೀಕ್ವೆನ್ಸ್ ನಲ್ಲಿ ಭಾಗವಹಿಸಿದ್ದೆ, ನಾನು ಒಂದು ತಿಂಗಳಿಂದ ಒಂದೇ ಒಂದು ಹೆಜ್ಜೆ ಕೂಡ ಇಟ್ಟಿಲ್ಲ, ಹಲವು ದಿನಗಳಿಂದ ಚಿತ್ರೀಕರಣದಿಂದ ದೂರವಿದ್ದ ಕಾರಣ ನಾನು ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಬೆಳಗ್ಗೆ 10 ಗಂಟೆಗೆ ಶೂಟಿಂಗ್ ಆರಂಭವಾಗುತ್ತದೆ. ಹೀಗಾಗಿ ಬೆಳಗ್ಗೆ 6 ಗಂಟೆಗೆ ನಾನು ಎದ್ದು ರೆಡಿಯಾಗಿ ಸೆಟ್ ಗೆ ಬರುತ್ತೇನೆ ಎಂದು ಹೇಳಿದ್ದಾರೆ. ಒಂದೂವರೆ ವರ್ಷದ ಹಿಂದೆ ಸಚಿನ್ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದರು, ಸಾಹೇಬ ಶೂಟಿಂಗ್ ವೇಳೆ ಸಹಿ ಮಾಡಿದ್ದಾಗಿ ತಿಳಿಸಿದ್ದಾರೆ,
ಕಥೆ ನನಗೆ ತುಂಬಾ ಇಷ್ಟವಾಯಿತು, ಆದರೆ ನಂತರ ಕಥೆಯಲ್ಲಿ ಸ್ವಲ್ಬ ಬದಲಾವಣೆಯಾಗಿತ್ತು, ಹೀಗಾಗಿ ನಾನು ಕಥೆಗೆ ಸೂಕ್ತವಾಗಿದ್ದೇನೆಯೇ ಎಂಬ ಗೊಂದಲ ಮೂಡುತ್ತಿತ್ತು. ಕಳೆದ ಒಂದು ವರ್ಷದಿಂದ ನನ್ನ ಕಥೆಯ ಬಗ್ಗೆ ಹೇಳುವಂತೆ ಪ್ರತಿ ತಿಂಗಳು ಸಚಿನ್ ಗೆ ತೊಂದರೆ ಕೊಡುತ್ತಿದ್ದೆ. ಇದೆಲ್ಲದರ ಮಧ್ಯೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ನಾನು ರಕ್ಷಿತ್ ಶೆಟ್ಟಿ ಭೇಟಿಯಾಗಿದ್ದೆ, ನನ್ನ ಪಾತ್ರ ಉತ್ತಮವಾಗಿರುತ್ತದೆ ಎಂದು ಅವರು ಭರನಸೆ ನೀಡಿದ್ದರು.,ಹೀಗಾಗಿ ನಾನು ತಾಳ್ಮೆಯಿಂದ ಕಾಯುತ್ದಿದ್ದೆ.
ಹೊಸದಾಗಿರುವ ಕತೆ ಕೇಳಿ ಸಾನ್ವಿ ತುಂಬಾ ಸಂತೋಷವಾಗಿದ್ದಾರೆ, ನಾನು ಕಥೆಯಲ್ಲಿ ತುಂಬಾ ಮುಳುಗಿಹೋಗಿದ್ದೇನೆ, ಇದು ಸಂಪೂರ್ಣ ಗ್ಲಾಮರಸ್ ರೋಲ್ ಎಂದು ನಾನು ಹೇಳಲಾರೆ, ಇದರಲ್ಲಿ ನಾನು ಸರಳ ಹುಡುಗಿಯ ಪಾತ್ರದಲ್ಲಿ ನಟಿಸಿದ್ದೇನೆ, ಸಿನಿಮಾದಲ್ಲಿ ಹಲವು ಟ್ವಿಸ್ಟ್ ಮತ್ತು ರಹಸ್ಯ.ಗಳಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics