ಬೆಂಗಳೂರು: ಬಾಲಿವುಡ್ ನಟ ಸೋನು ಸೂದ್ ದಕ್ಷಿಣ ಸಿನಿಮಾ ರಂಗದಲ್ಲೂ ಹೆಚ್ಚು ಪ್ರಸಿದ್ದರಾಗುತ್ತಿದ್ದಾರೆ, ಸುದೀಪ್ ಜೊತೆ ವಿಷ್ಣುವರ್ಧನ ಸಿನಿಮಾದಲ್ಲಿ ನಟಿಸಿದ್ದಾರೆ. ಮ್ಯಾಗ್ನಮ್ ಒಪಸ್ ಕಂಪನಿ ಮತ್ತು ಮುನಿರತ್ನ ನಿರ್ಮಾಣದ ಕುರುಕ್ಷೇತ್ರದಲ್ಲಿ ಸೋನು ಸೂದ್ ಅರ್ಜುನನ ಪಾತ್ರದಲ್ಲಿ ನಟಿಸಿದ್ದಾರೆ.
ಕುರುಕ್ಷೇತ್ರದಲ್ಲಿ ಧುರ್ಯೋಧನನಾಗಿ ದರ್ಶನ್ ನಟಿಸುತ್ತಿದ್ದು, ಅರ್ಜುನನ ಪಾತ್ರದಲ್ಲಿ ನಟಿಸಿದ್ದಾರೆ, ಇದೇ ವೇಳೆ ಕಂಗನಾ ರಣಾವತ್ ನಟನೆಯ, ದಿ ವಾರ್ ಆಫ್ ಜಾನ್ಸಿ, ಮತ್ತು ಪಲ್ತಾನ್ ಸಿನಿಮಾದಲ್ಲೂ ಸೋನು ಸೂದ್ ನಟಿಸುತ್ತಿದ್ದಾರೆ, ಮೂರು ಚಿತ್ರಗಳಲ್ಲಿ ಅಂದರೇ ಜಾನ್ಸಿ ದಿ ವಾರ್, ಎ.ಕೆ 47 ಇನ್ ಪಲ್ತಾನ್ ಹಾಗೂ ಕುರುಕ್ಷೇತ್ರದಲ್ಲಿ ಅರ್ಜುನ ಪಾತ್ರದಲ್ಲಿ ನಟಿಸುತ್ತಿದ್ದು, ಕೇವಲ ಆಯುಧಗಳಷ್ಟೇ ಮಾತ್ರ ಬದಲಾಗಿದೆ ಎಂದು ಹೇಳಿದ್ದಾರೆ.
ಕುರುಕ್ಷೇತ್ರ ಸಿನಿಮಾದಲ್ಲಿ ಅರ್ಜುನನ ಪಾತ್ರದಲ್ಲಿ ನಟಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ, ಇದರಲ್ಲಿನ ಕೆಲವು ಭಾಗಗಳನ್ನು ಪುಸ್ತಕದಲ್ಲಿ ಮತ್ತು ಟೆಲಿವಿಷನ್ ನಲ್ಲಿ ಓದಿದ್ದೆ ಎಂದಿದ್ದರು.
ಬೆಂಗಳೂರು ಸುಂದರ ನಗರ, ಇಲ್ಲಿನ ಬೆಚ್ಚನೆಯ ವಾತಾವರಣ ಹಾಗೂ ವಿಧೇಯ ಜನಸ ಲಾಟ್ಸ್ ಆಫ್ ಪಾಸಿಟಿವಿಟಿ ಎಲ್ಲೆಡೆ ಪಾಸಿಟಿವ ಶಕ್ತಿ ಹರಡುತ್ತದೆ. ಆ್ಯಸಿಡ್ ದಾಳಿ ಸಂತ್ರಸ್ತರು ಹಾಗೂ ಕಣ್ಣು ಕುರುಡಾಗಿರುವ ಜನರಿಗೆ ಸಹಾಯ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ.
ಸಮಾಜದಲ್ಲಿ ಹಲವು ರಾಕ್ ಸ್ಟಾರ್ ಗಳಿದ್ದಾರೆ, ಸತ್ಯ ಏನೆಂದರ್ ಸಮಾಜದಲ್ಲಿರುವ ಇಂತವರಿಗೆ ಸಹಾಯ ಮಾಡಲು ನಮ್ಮ ಬಳಿ ಸಮಯ ಇರುವುದಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos