ನಟಿ ಸಿಂಧು ಲೋಕನಾಥ್ 
ಸಿನಿಮಾ ಸುದ್ದಿ

ನಾನಲ್ಲ, ವೃತ್ತಿಯೇ ನನ್ನನ್ನು ಹಿಂಬಾಲಿಸಿತು: ನಟಿ ಸಿಂಧೂ ಲೋಕನಾಥ್

ವೈಯಕ್ತಿಯ ಜೀವನದ ಬದ್ಧತೆಗಳು ಹಾಗೂ ಉತ್ತಮ ಚಿತ್ರ ಕಥೆಗಳು ದೊರೆಯದೇ ಇದ್ದ ಕಾರಣ ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ನಟಿ ಸಿಂಧು ಲೋಕನಾಥ್ ಅವರು ಹೀಗೊಂದಿ ದಿನ ಎಂಬ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ...

ವೈಯಕ್ತಿಕ ಜೀವನದ ಬದ್ಧತೆಗಳು ಹಾಗೂ ಉತ್ತಮ ಚಿತ್ರ ಕಥೆಗಳು ದೊರೆಯದೇ ಇದ್ದ ಕಾರಣ ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ನಟಿ ಸಿಂಧು ಲೋಕನಾಥ್ ಅವರು ಹೀಗೊಂದಿ ದಿನ ಎಂಬ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. 
ನಟಿ ಸಿಂಧು ಲೋಕನಾಥನ್ ಅವರು ನಟಿಸಿರುವ ಹೀಗೊಂದು ಚಿತ್ರವನ್ನು ವಿಕ್ರಮ ಯೋಗಾನಂತ್ ಅವರು ನಿರ್ದೇಶಿಸಿದ್ದಾರೆ. ಮಾರ್ಚ್ 30 ರಂದು ರಾಜ್ಯದಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ. 
ಚಿತ್ರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಂಧು ಅವರು, ಚಿತ್ರವು 2016ರಲ್ಲಿಯೇ ಆರಂಭಗೊಂಡಿತ್ತು. ಆದರೆ, ಬಿಡುಗಡೆ ತಡವಾಗಿದೆ. ಆದರೆ, ಚಿತ್ರಕಥೆ ಈಗಲು ತಾಜಾತನದಿಂದ ಕೂಡಿದೆ ಎಂದು ಹೇಳಿದ್ದಾರೆ. 
ಚಿತ್ರ ಕುರಿತಂತ ಒಂದು ಸಾಲಿನ ಕಥೆ ಹೇಳಿರುವ ಸಿಂಧು, ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದೆ. ನಟಿಯಾಗುವ ತನ್ನ ಕನಸಿನ ಹಿಂದೆ ಹೋಗುವ ಯುವತಿಯರ ಕುರಿತಾಗಿದೆ. ಆದರೆ, ನನ್ನ ಜೀವನದಲ್ಲಿ ಈ ರೀತಿಯಾಗಿಲ್ಲ. ವೃತ್ತಿಯೇ ನನ್ನನ್ನು ಹಿಂಬಾಲಿಸಿತು. ನಾನು ಅದನ್ನು ಆಯ್ದುಕೊಳ್ಳಲಿಲ್ಲ. ಅದೇ ನನ್ನನ್ನು ಹುಡುಕಿ ಬಂದಿತ್ತು. ಹೀಗಾಗಿ ಅದನ್ನೇ ಭವಿಷ್ಯವಾಗಿ ತೆಗೆದುಕೊಂಡೆ ಎಂದು ಹೇಳಿದ್ದಾರೆ. 
ನಟಿಯಾಗಲು ಯುವತಿಯರು ಎಷ್ಟೆಲ್ಲಾ ಕಷ್ಟಗಳನ್ನು ಪಡುತ್ತಾರೆ. ನನ್ನ ಗುರಿಯನ್ನು ನಾನು ಮುಟ್ಟುತ್ತೇನೆಯೇ ಅಥವಾ ಇಲ್ಲವೇ... ಎಂಬುದು ಚಿತ್ರ ನೋಡಿದಾಗ ತಿಳಿಯುತ್ತದೆ. ಇದು ಕೇವಲ ಒಬ್ಬ ನಟಿಯ ಕಥೆಯಷ್ಟೇ ಅಲ್ಲ. ಭವಿಷ್ಯ ಹಾಗೂ ಮದುವೆ ಕುರಿತಂತೆ ನಿರ್ಧಾರ ಕೈಗೊಳ್ಳುವ ಪ್ರತೀಯೊಬ್ಬ ಹೆಣ್ಣುಮಕ್ಕಳ ಜೀವನದಲ್ಲಿಯೂ ಆಗುತ್ತದೆ. ಮಧ್ಯಂತರ ಸಮಯದಲ್ಲಿಯೇ ನಾವು ನಿರ್ಧಾರ ಕೈಗೊಳ್ಳುವ ಸಂದರ್ಭಗಳು ಎದುರಾಗುತ್ತವೆ ಎಂದು ತಿಳಿಸಿದ್ದಾರೆ.
ನಟಿ ಸಿಂಧೂ ಅವರಿಗೆ ವಿವಾಹವಾಗಿದ್ದು, ವಿವಾಹ ಕುರಿತು ಎಲ್ಲಿಯೂ ಬಾಯ್ಬಿಟ್ಟಿರಲಿಲ್ಲ. ಈ ಬಗ್ಗೆ ಕಾರಣ ನೀಡಿರುವ ಅವರು, ವೈಯಕ್ತಿಕ ಜೀವನವನ್ನು, ವೃತ್ತಿಪರ ಜೀವನದೊಂದಿಗೆ ಮಿಶ್ರಣ ಮಾಡುವುದು ನನಗಿಷ್ಟವಿಲ್ಲ. ನನ್ನ ವೈಯಕ್ತಿಯ ಜೀವನದ ಬಗ್ಗೆ ನಾನು ಯಾವಾಗಲು ಸುರಕ್ಷಿತವಾಗಿರಲು ಬಯಸುತ್ತೇನೆ. ನನ್ನ ವೃತ್ತಿ ಕುರಿತ ಕೆಲಸಗಳನ್ನು ಮನೆಗೆ ತರುವುದಿಲ್ಲ. ನನಗೆ ಎರಡು ವಿವಿಧ ರೀತಿಯ ಪ್ರಪಂಚವಿದೆ ಎಂದಿದ್ದಾರೆ. 
ನನಗೆ ಹಿತ ಎನಿಸುವ ಚಿತ್ರಗಳಿಗೆ ನಾನು ಸಹಿ ಮಾಡುತ್ತೇನೆ. ಮದುವೆಯಾದ ಬಳಿಕ ಚಿತ್ರರಂಗ ಬಿಡುವ ಪ್ರಶ್ನೆ ಬರುವುದಿಲ್ಲ. ಮುಂದುಯೂ ಸಿನಿಮಾಗಳಲ್ಲಿ ಕೆಲಸ ಮಾಡುತ್ತೇನೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು, ಭಾರತದಿಂದ ನೆರವು

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video