ಎಸ್ ಎಸ್ ರಾಜಮೌಳಿ 
ಸಿನಿಮಾ ಸುದ್ದಿ

ಕರಾಚಿ ಚಿತ್ರೋತ್ಸವದಲ್ಲಿ ಬಾಹುಬಲಿಯ ಪ್ರದರ್ಶನಕ್ಕೆ ಉತ್ಸುಕರಾಗಿರುವ ಎಸ್ ಎಸ್ ರಾಜಮೌಳಿ

ತಮ್ಮ ಬಹುದೊಡ್ಡ ಬಜೆಟ್ ನ ಚಿತ್ರ ಬಾಹುಬಲಿ ಕರಾಚಿಯಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ...

ಚೆನ್ನೈ: ತಮ್ಮ ಬಹುದೊಡ್ಡ ಬಜೆಟ್ ನ ಚಿತ್ರ ಬಾಹುಬಲಿ ಕರಾಚಿಯಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಪಿಐಎಫ್ಎಫ್)ದಲ್ಲಿ ಪ್ರದರ್ಶನವಾಗುತ್ತಿರುವುದಕ್ಕೆ ನಿರ್ದೇಶಕ ಎಸ್.ಎಸ್.ರಾಜಮೌಳಿ ಖುಷಿಯಾಗಿದ್ದಾರೆ.

ಬಾಹುಬಲಿ ಚಿತ್ರ ನನಗೆ ಹಲವು ದೇಶಗಳಿಗೆ ಪ್ರಯಾಣಿಸಲು ಅವಕಾಶ ನೀಡಿದೆ. ಅವೆಲ್ಲಕ್ಕಿಂತ ಹೆಚ್ಚು ಖುಷಿಯಾಗಿದ್ದು ಇದೀಗ ಪಾಕಿಸ್ತಾನದಲ್ಲಿ ಪ್ರದರ್ಶನವಾಗುತ್ತಿರುವುದು. ಪಾಕಿಸ್ತಾನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಹ್ವಾನ ನೀಡಿರುವುದಕ್ಕೆ ಕೃತಜ್ಞತೆಗಳು ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.

ನಾಳೆಯಿಂದ ಆರಂಭವಾಗಲಿರುವ ಚಲನಚಿತ್ರೋತ್ಸವ ಏಪ್ರಿಲ್ 1ರಂದು ಮುಗಿಯಲಿದೆ.
ಬಾಹುಬಲಿ: ದ ಬಿಗಿನಿಂಗ್ ಮತ್ತು ಬಾಹುಬಲಿ 2: ದ ಕನ್ಲ್ಕುಷನ್ ನಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ ಪುರುಷರಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಹಿಂದಿನ ರಾಜ್ಯದ ಒಡೆತನಕ್ಕೆ ಸಹೋದರರ ಮಧ್ಯೆ ನಡೆಯುವ ಯುದ್ಧವೇ ಬಾಹುಬಲಿಯ ಕಥೆಯಾಗಿದೆ.

ಚಿತ್ರದ ಕಥೆ, ಹಾಡು, ಸಂಗೀತ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದರಲ್ಲಿ ಅನುಷ್ಕಾ ಶೆಟ್ಟಿ, ರಮ್ಯಕೃಷ್ಣ, ತಮನ್ನಾ ಭಾಟಿಯಾ, ಸತ್ಯರಾಜ್ ಮೊದಲಾದವರು ಅಭಿನಯಿಸಿದ್ದಾರೆ.

ಪಿಐಎಫ್ಎಫ್ ನಲ್ಲಿ ಪ್ರದರ್ಶನಗೊಳ್ಳುವ ಇತರ ಚಿತ್ರಗಳೆಂದರೆ ಡಿಯರ್ ಜಿಂದಗಿ, ಅಂಕೋ ದೇಖಿ, ಹಿಂದಿ ಮೀಡಿಯಂ, ಕಾದ್ವಿ ಹವಾ, ನೀಲ್ ಭತ್ತಿ ಸನ್ನತಾ, ಸಾಂಗ್ಸ್ ಆಫ್ ದ ಸ್ಕಾರ್ಪಿಯನ್ ಮತ್ತು ಮರಾಠಿ ಚಿತ್ರ ಸೈರಾಠ್ ಪ್ರದರ್ಶನಗೊಳ್ಳಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT