ಸಿನಿಮಾ ಸುದ್ದಿ

ಸೌಮಿತ್ರ ಚಟರ್ಜಿ, ಬುದ್ಧದೇವ್ ದಾಸ್ ಗುಪ್ತ ಗೆ ಜೀವಮಾನ ಸಾಧನೆ ಪ್ರಶಸ್ತಿ

Srinivas Rao BV
ಕೋಲ್ಕತ್ತಾ: ಅರವತ್ತರ ದಶಕದಲ್ಲಿ ಭಾರತದ ಪ್ರಮುಖ ನಾಯಕನಟರಾಗಿದ್ದ ಸೌಮಿತ್ರ ಚಟರ್ಜಿ ಹಾಗೂ ಚಲನಚಿತ್ರ ನಿರ್ಮಾಪಕ ಬುದ್ಧದೇವ್ ದಾಸ್ ಗುಪ್ತ ಅವರ ಸಿನಿಮಾ ಸಾಧನೆಯನ್ನು ಗುರುತಿಸಿ ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ. 
ಕೋಲ್ಕತ್ತಾದಲ್ಲಿ ಮೇ.2 ರಂದು ನಡೆದ 3ನೇ ಬಂಗಾಳ ಅಂತಾರಾಷ್ಟ್ರೀಯ ಕಿರು ಚಲನಚಿತ್ರೋತ್ಸವದಲ್ಲಿ ಸೌಮಿತ್ರ ಚಟರ್ಜಿ, ಬುದ್ಧದೇವ್ ದಾಸ್ ಗುಪ್ತ ಅವರಿಗೆ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಲಾಗಿದೆ.  ಚಟರ್ಜಿ ಅವರಿಗೆ ಹರಿಲಾಲ್ ಸೇನಾ ಪ್ರಶಸ್ತಿಯನ್ನು ಬಂಗಾಳದ ಖ್ಯಾತ ನಟ ಪ್ರಸೇನ್ಜಿತ್ ಚಟರ್ಜಿ ಹಾಗೂ ಪಶ್ಚಿಮ ಬಂಗಾಳದ ಮಾಹಿತಿ ತಂತ್ರಜ್ಞಾನ ಸಚಿವ ಬ್ರಾಟಿಯಾ ಬಸು ಪ್ರದಾನ ಮಾಡಿದ್ದು, ದಾಸ್ ಗುಪ್ತ ಅವರಿಗೆ ಅನಾರೋಗ್ಯ ಎದುರಿಸುತ್ತಿರುವ ಹಿನ್ನೆಲೆಯಲ್ಲಿ  ದೇವಕಿ ಕುಮಾರ್ ಬೋಸ್ ಪ್ರಶಸ್ತಿಯನ್ನು ದಾಸ್ ಗುಪ್ತಾ ಅವರ ಸಹಾಯಕರ 
ಮೂಲಕ ತಲುಪಿಸಲಾಗಿದೆ. 
65 ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಭಾಜನರಾಗಿದ್ದ ಯುವ ನಟ ರಿದ್ಧಿ ಸೇನ್ ಗೆ ಈ ವರ್ಷ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ಮಾಡಲಾಯಿತು. ಬಂಗಾಳದ ಸಿನಿಮಾಗಳನ್ನು ದೇಶಾದ್ಯಂತ ವಿತರಿಸಲು ಶ್ರಮಿಸುತ್ತಿರುವ ಭಾರತದ ಮುಂಚೂಣಿಯಲ್ಲಿರುವ ಸಿನಿಮಾ ನಿರ್ಮಾಣ ಸಂಸ್ಥೆಗಳ ಪೈಕಿ ಒಂದಾದ  ಶ್ರೀ ವೆಂಕಟೇಶ್ ಸಿನಿಮಾ ಸಂಸ್ಥೆಗೂ ಪ್ರಶಸ್ತಿ ನೀಡಲಾಗಿದೆ. 
44 ಭಾರತೀಯ, 10 ವಿದೇಶಿ ಸೇರಿದಂತೆ ಒಟ್ಟಾರೆ 54 ಸಿನಿಮಾಗಳು ಕಿರು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. 
SCROLL FOR NEXT